ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ತಂಡ ಖರೀದಿಸಿದ ನಟ ಸೂರ್ಯ 

ಹೈದರಾಬಾದ್ ತಂಡವನ್ನು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಖರೀದಿಸಿದ್ದಾರೆ. ಶ್ರೀನಗರ ತಂಡವನ್ನು ಅಕ್ಷಯ್ ಕುಮಾರ್ ಖರೀದಿಸಿದ್ದಾರೆ. ಬೆಂಗಳೂರು ತಂಡವನ್ನು ಹೃತಿಕ್ ರೋಷನ್ ಖರೀದಿಸಿದ್ದಾರೆ.

ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ತಂಡ ಖರೀದಿಸಿದ ನಟ ಸೂರ್ಯ 
ಸೂರ್ಯ

Updated on: Dec 28, 2023 | 1:05 PM

ಕಾಲಿವುಡ್ ಹೀರೋ ಸೂರ್ಯ (Suriya) ನಟನೆ ಮಾತ್ರವಲ್ಲದೆ ಕ್ರೀಡೆ ಬಗ್ಗೆಯೂ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಭಿನ್ನ ಪಾತ್ರ ಹಾಗೂ ಕಥೆ ಆಯ್ಕೆ ಮಾಡಿಕೊಂಡು ಅವರು ಸಿನಿಮಾ ಮಾಡುತ್ತಿದ್ದಾರೆ. ಪ್ರಸ್ತುತ ಸೂರ್ಯ ಲೀಗ್ ಕ್ರಿಕೆಟ್‌ಗೆ ಪ್ರವೇಶಿಸಿದ್ದಾರೆ. ಇಂಡಿಯನ್​ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ (ಐಎಸ್​​ಪಿಎಲ್​) ಚೆನ್ನೈ ತಂಡವನ್ನು ಖರೀದಿಸಿದ್ದಾರೆ. ಈ ವಿಷಯವನ್ನು ಸ್ವತಃ ಸೂರ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಅನೌನ್ಸ್ ಆಗಿದೆ. ಎಲ್ಲರಿಗೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೈದರಾಬಾದ್, ಬೆಂಗಳೂರು, ಮುಂಬೈ, ಶ್ರೀನಗರ ಇತರ ತಂಡಗಳ ಖರೀದಿಯನ್ನು ಸ್ಟಾರ್ ಹೀರೋಗಳು ಮಾಡಿದ್ದಾರೆ. ಇದೀಗ ಸೂರ್ಯ ಚೆನ್ನೈ ತಂಡವನ್ನು ಖರೀದಿಸಿದ್ದಾರೆ. ಈ ಮೂಲಕ ಗಲ್ಲಿ ಕ್ರಿಕೆಟ್ ಬಗ್ಗೆ ಅವರು ತಮಗಿರುವ ಆಸಕ್ತಿ ತೋರಿಸಿದ್ದಾರೆ.

ಅವಕಾಶ ಸಿಗದ ಕ್ರಿಕೆಟಿಗರಿಗೆ ಸ್ಟ್ರೀಟ್ ಕ್ರಿಕೆಟ್ ಲೀಗ್ ಉತ್ತಮ ವೇದಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸ್ಟ್ರೀಟ್ ಕ್ರಿಕೆಟ್ ಆಡುವ ವ್ಯಕ್ತಿ ನೀವಾಗಿದ್ದರೆ ತಕ್ಷಣ ISPLನಲ್ಲಿ ಅರ್ಜಿ ಸಲ್ಲಿಸಬಹುದು. ಹೈದರಾಬಾದ್ ತಂಡವನ್ನು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಖರೀದಿಸಿದ್ದಾರೆ. ಶ್ರೀನಗರ ತಂಡವನ್ನು ಅಕ್ಷಯ್ ಕುಮಾರ್ ಖರೀದಿಸಿದ್ದಾರೆ. ಬೆಂಗಳೂರು ತಂಡವನ್ನು ಹೃತಿಕ್ ರೋಷನ್ ಖರೀದಿಸಿದ್ದಾರೆ. ಮುಂಬೈ ತಂಡವನ್ನು ನಟ ಅಮಿತಾಭ್ ಬಚ್ಚನ್ ಖರೀದಿಸಿದ್ದಾರೆ. ಇದೀಗ ಚೆನ್ನೈ ತಂಡದ ಒಡೆತನ ಸೂರ್ಯ ಅವರ ತೆಕ್ಕೆಗೆ ಹೋಗಿದೆ. .

ಇದನ್ನೂ ಓದಿ: ನಡೆಯಲಾಗದ ಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್: ವಿಡಿಯೋ ಇಲ್ಲಿದೆ ನೋಡಿ

ಸೂರ್ಯ ಅವರು ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ‘ಕಂಗುವ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇದು ಅವರ 42ನೇ ಸಿನಿಮಾ. ಈ ಚಿತ್ರದಲ್ಲಿ ಅವರು ಆರು ಪಾತ್ರ ನಿಭಾಯಿಸುತ್ತಿದ್ದಾರೆ. ದಿಶಾ ಪಟಾಣಿ,  ಬಾಡಿ ಡಿಯೋಲ್ ಮೊದಲಾದವರು ನಟಿಸಿದ್ದಾರೆ. ಶಿವ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. 300 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಮೂಡಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ