ಜಯಲಲಿತಾ ಅಂದ್ರೆ ನನಗೆ ತುಂಬಾ ಇಷ್ಟ ಅಂದಿದ್ರು ಮೋಹಕತಾರೆ ಶ್ರೀದೇವಿ

Sridevi's Death Anniversary: ಮಾಮ್ ಸಿನಿಮಾದ ಪ್ರಚಾರದ ವೇಳೆ ಮಾತನಾಡಿದ್ದ ಶ್ರೀದೇವಿ, ನಾನು ಬಾಲ ನಟಿಯಾಗಿದ್ದಾಗ ಜಯಲಲಿತಾ ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ. ಅವರ ಅಭಿಮಾನಿಯಾಗಿದ್ದೆ, ಅವರ ಜತೆಗೆ ತುಂಬಾ ಒಳ್ಳೆಯ ನೆನಪುಗಳಿವೆ ಎಂದಿದ್ದರು.

ಜಯಲಲಿತಾ ಅಂದ್ರೆ ನನಗೆ ತುಂಬಾ ಇಷ್ಟ ಅಂದಿದ್ರು ಮೋಹಕತಾರೆ ಶ್ರೀದೇವಿ
ಶ್ರೀದೇವಿ- ಜಯಲಲಿತಾ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 24, 2021 | 7:10 PM

ಬಾಲಿವುಡ್ ನಟಿ ಶ್ರೀದೇವಿ ವಿಧಿವಶರಾಗಿ ಇಂದಿಗೆ ಮೂರು ವರ್ಷ. ‘ಬಿಜ್ ಲೀ ಗಿರಾನೇ ಮೈ ಹೂಂ ಆಯೀ, ಕೆಹ್ ತೇ ಹೈ ಮುಜ್ ಕೋ ಹವಾ ಹವಾಯಿ’ ಎಂದು ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ಕುಣಿದಿದ್ದ ಶ್ರೀದೇವಿ ಬಾಲಿವುಡ್ ನ ಮೊದಲ ಮಹಿಳಾ ಸೂಪರ್ ಸ್ಟಾರ್ ಆಗಿದ್ದವರು. ತನ್ನ ನಾಲ್ಕನೇ ವಯಸ್ಸಿನಲ್ಲಿ ಕಂಡಾನ್ ಕರುಣೈ(1972)ನಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ತುಣೈವನ್ ಸಿನಿಮಾದಲ್ಲಿ ಬಾಲಕ ಮುರುಗನ್ (ಅಯ್ಯಪ್ಪಸ್ವಾಮಿ)ಯ ಪಾತ್ರದಲ್ಲಿ ಕಾಣಿಕಿಕೊಂಡಿದ್ದರು. 1970ರಲ್ಲಿ ಮಾ ನನ್ನ ನಿರ್ದೋಷಿ ಎಂಬ ಸಿನಿಮಾ ಮೂಲಕ ತೆಲುಗು ಚಿತ್ರರಂಕ್ಕೆ ಪದಾರ್ಪಣೆ ಮಾಡಿದರು. 1971ರಲ್ಲಿ ಪೂಂಬಾಟ್ಟ ಎಂಬ ಮಲಯಾಳಂ ಚಿತ್ರದ ನಟನೆಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಅದೇ ವರ್ಷ ಜಯಲಲಿತಾ ಜತೆ ‘ಆದಿ ಪರಾಶಕ್ತಿ’ ಸಿನಿಮಾದಲ್ಲಿ ಶ್ರೀದೇವಿ ನಟಿಸಿದ್ದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹುಟ್ಟುಹಬ್ಬ ಫೆಬ್ರವರಿ 24. ನಟಿ ಶ್ರೀದೇವಿ ನಮ್ಮನ್ನಗಲಿದ್ದೂ ಇದೇ ದಿನ. ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ ನಟಿಯಾದ್ದರು ಜಯಲಲಿತಾ. ಉನ್ನೈ ಸುಟ್ರುಂ ಉಲಗಂ, ಭಾರ್ಯ ಬಿದ್ದಲು, ತಿರುಮಾಂಗಲ್ಯಂ, ನಮ್ ನಾಡು, ಕಂಡಾನ್ ಕರುಣೈ, ಆದಿ ಪರಾಶಕ್ತಿ ಮೊದಲಾದ ಸಿನಿಮಾಗಳಲ್ಲಿ ಶ್ರೀದೇವಿ, ಜಯಲಲಿತಾ ಜತೆ ನಟಿಸಿದ್ದರು.

ಜಯಲಲಿತಾ ಅವರು ಅಮ್ಮಾ ಎಂದೇ ಖ್ಯಾತರು. ಶ್ರೀದೇವಿ ನಟಿಸಿದ ಕೊನೆಯ ಸಿನಿಮಾ ಮಾಮ್ (mom) ಆಗಿತ್ತು. ಈ ಸಿಸಿಮಾದ ಪ್ರಚಾರದ ವೇಳೆ ಮಾತನಾಡಿದ್ದ ಶ್ರೀದೇವಿ, ನಾನು ಬಾಲ ನಟಿಯಾಗಿದ್ದಾಗ ಜಯಲಲಿತಾ ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ. ಅವರ ಅಭಿಮಾನಿಯಾಗಿದ್ದೆ, ಅವರ ಜತೆಗೆ ತುಂಬಾ ಒಳ್ಳೆಯ ನೆನಪುಗಳಿವೆ ಎಂದಿದ್ದರು.

ಜಯಲಲಿತಾ ಅವರ ಜನ್ಮದಿನ ಹಾಗೂ ಶ್ರೀದೇವಿ ಅಗಲಿದ ಈ ದಿನವನ್ನು ನೆನಪಿಸಿಕೊಂಡಿರುವ ನೆಟ್ಟಿಗರು ಶ್ರೀದೇವಿ ಮತ್ತು ಜಯಲಲಿತಾ ಜತೆಗಿರುವ ಫೋಟೊವನ್ನು ಟ್ವೀಟ್ ಮಾಡಿದ್ದಾರೆ. ಆದಿಪರಾಶಕ್ತಿ ಸಿನಿಮಾದಲ್ಲಿ ಜಯಲಲಿತಾ ಅವರ ತೊಡೆಯ ಮೇಲೆ ಬಾಲ ನಟಿ ಶ್ರೀದೇವಿ ಕುಳಿತುಕೊಂಡಿರುವ ಚಿತ್ರವಾಗಿದೆ ಇದು.

ದಕ್ಷಿಣ ಭಾರತದ ನಟಿ ಬಾಲಿವುಡ್ ಸೂಪರ್ ಸ್ಟಾರ್ 1979 ರಲ್ಲಿ ಸೋಲಾ ಸಾವನ್ ಎಂಬ ಚಿತ್ರದ ಮೂಲಕ ಶ್ರೀದೇವಿ ಬಾಲಿವುಡ್ ಪ್ರವೇಶಿಸಿದ್ದರು. 4 ವರ್ಷಗಳ ನಂತರ ‘ಹಿಮ್ಮತ್ ವಾಲಾ’ ಸಿನಿಮಾದಲ್ಲಿ ಜಿತೇಂದ್ರ ಅವರ ನಾಯಕಿಯಾಗಿ ಮಿಂಚಿದ ಈಕೆ ಆಮೇಲೆ ಹಿಂತಿರುಗಿ ನೋಡಿಲ್ಲ. ‘ಹಿಮ್ಮತ್ ವಾಲಾ’ ಸಿನಿಮಾದಲ್ಲಿ ‘ನೈನೊ ಮೇ ಸಪ್ ನಾ, ಸಪ್ ನೊ ಮೇ ಸಜ್ ನಾ’ ಹಾಡು ಸೂಪರ್ ಹಿಟ್ ಆಗಿತ್ತು. 1984ರಲ್ಲಿ ‘ತೌಫಾ’ ಸಿನಿಮಾದ ನಟನೆ ಶ್ರೀದೇವಿಗೆ ಖ್ಯಾತಿ ತಂದುಕೊಟ್ಟಿತು. ಅದೇ ವರ್ಷ ಫಿಲ್ಮ್ ಫೇರ್ ಮ್ಯಾಗಜಿನ್ ಕವರ್ ನಲ್ಲಿ ಶ್ರೀದೇವಿ ಫೋಟೊ ಪ್ರಕಟವಾಯಿತು. ಜಿತೇಂದ್ರ ಮತ್ತು ಶ್ರೀದೇವಿ ಜೋಡಿ ಬಾಲಿವುಡ್ ನ ಸಕ್ಸಸ್ ಜೋಡಿಯಾಯಿತು. ಇವರಿಬ್ಬರು ಜತೆಯಾಗಿ 16 ಸಿನಿಮಾಗಳಲ್ಲಿ ನಟಿಸಿದ್ದಾರೆ.

Himmatwala

ಹಿಮ್ಮತ್ ವಾಲಾ ಚಿತ್ರದಲ್ಲಿ ಶ್ರೀದೇವಿ- ಜಿತೇಂದ್ರ

ಬಾಲಿವುಡ್​ನಲ್ಲಿ ಯಶಸ್ವಿ ಸಿನಿಮಾಗಳೊಂದಿಗೆ ಮಿಂಚುತ್ತಿದ್ದ ಶ್ರೀದೇವಿಯ ‘ಆಗ್ ಔರ್ ಶೋಲಾ’, ‘ಹಿಮ್ಮತ್ ಔರ್ ಮೆಹನತ್’, ‘ಸರ್ಫರೋಷ್’ ಸಿನಿಮಾಗಳು ಫ್ಲಾಪ್ ಆದವು . ಈ ನಡುವೆ ಕಮಲ್ ಹಾಸನ್ ಜತೆ ನಟಿಸಿದ ಸದ್ಮಾ ಚಿತ್ರದಲ್ಲಿ ಶ್ರೀದೇವಿಯ ನಟನೆ ಜನಮನಸ್ಸು ಗೆದ್ದು ಬಿಟ್ಟಿತು. 1987-1997 ಈ ಅವಧಿ ಶ್ರೀದೇವಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ದಶಕವಾಗಿತ್ತು. ನಗೀನಾ, ಮಿಸ್ಟರ್ ಇಂಡಿಯಾ, ಚಲ್ ಬಾಜ್, ಚಾಂದ್ನಿ, ಲಮ್ಹೇ , ಖುದಾ ಗವಾ, ಗುಮ್ ರಾಹ್, ದೇವರಾಗಂ(ಮಲಯಾಳಂ), ಜುದಾಯಿ ಮೊದಲಾದ ಸಿನಿಮಾಗಳು ಹಿಟ್ ಆಗಿದ್ದವು.

1996ರಲ್ಲಿ ಬೋನಿ ಕಪೂರ್ ಅವರನ್ನು ಮದುವೆಯಾದ ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ದಾಂಪತ್ಯಕ್ಕೆ ಕಾಲಿರಿಸಿದ ನಂತರ ಸಿನಿಮಾರಂಗದಿಂದ ದೂರವಿದ್ದ ಆಕೆ 2004ರಲ್ಲಿ ಕಿರುತೆರೆಗೆ ಮರಳಿದರು . 2012ರಲ್ಲಿ ಅಂದರೆ ಸಿನಿಮಾರಂಗದಿಂದ ದೂರವಾಗಿ 15 ವರ್ಷಗಳ ನಂತರ ‘ಇಂಗ್ಲಿಷ್ ವಿಂಗ್ಲಿಷ್’ (2012) ಸಿನಿಮಾದ ಮೂಲಕ ಮತ್ತೆ ಬಂದಾಗ ಸಿನಿಪ್ರಿಯರು ಅವರನ್ನು  ಎರಡೂ ಕೈಚಾಚಿ ಸ್ವೀಕರಿಸಿಕೊಂಡರು. ಇದಾದ ನಂತರ 2017ರಲ್ಲಿ ‘ಮಾಮ್’ ಚಿತ್ರದಲ್ಲಿ ನಟಿಸಿದರು. ಅದು ಅವರ 300ನೇ ಚಿತ್ರವಾಗಿತ್ತು. ಫೆಬ್ರವರಿ 20, 2018ರಲ್ಲಿ ಶ್ರೀದೇವಿ ತನ್ನ ಕಿರಿಯ ಮಗಳೊಂದಿಗೆ ತನ್ನ ಸಂಬಂಧಿಯ ಮದುವೆಯಲ್ಲಿ ಭಾಗಿಯಾಗಲು ಯುಎಇಗೆ ಹೋಗಿದ್ದರು. ಅಲ್ಲಿ ಸ್ನಾನಕ್ಕೆ ಹೋಗಿದ್ದ ಶ್ರೀದೇವಿ ಬಾತ್ ಟಬ್ ನಲ್ಲಿ ಹೃದಯಸ್ತಂಬನಕ್ಕೊಳಗಾಗಿ ಮೃತಪಟ್ಟಿದ್ದರು.

ಇದನ್ನೂ ಓದಿ:ಶ್ರೀದೇವಿ ಬರೆದ ಹಾರೈಕೆ ಪತ್ರವನ್ನು ಹಂಚಿಕೊಂಡು ಭಾವುಕರಾದ ಜಾಹ್ನವಿ ಕಪೂರ್​  

Published On - 4:39 pm, Wed, 24 February 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ