ಕನ್ನಡದ ಈ ನಟನ ಮೇಲೆ ನಟಿ ಅದಾಗೆ ಇದೆ ವಿಶೇಷ ಪ್ರೀತಿ, ಗೌರವ

ಅದಾ ಶರ್ಮಾ ಅವರ ಜನ್ಮದಿನ.ಪುನೀತ್ ರಾಜ್‌ಕುಮಾರ್ ಅವರು ಅವರ ವೃತ್ತಿಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. 'ರಣ ವಿಕ್ರಮ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅದಾ, ಪುನೀತ್ ರಾಜ್‌ಕುಮಾರ್ ಅವರ ಸಮಯಪ್ರಜ್ಞೆ, ದಯೆ, ಹಾಗೂ ಅಭಿಮಾನಿಗಳೊಂದಿಗೆ ವರ್ತಿಸುವ ರೀತಿಯಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡದ ಈ ನಟನ ಮೇಲೆ ನಟಿ ಅದಾಗೆ ಇದೆ ವಿಶೇಷ ಪ್ರೀತಿ, ಗೌರವ
ಅದಾ ಶರ್ಮಾ
Edited By:

Updated on: May 11, 2025 | 6:30 AM

ನಟಿ ಅದಾ ಶರ್ಮಾ (Adah Sharma) ಅವರಿಗೆ ಇಂದು (ಮೇ 11) ಜನ್ಮದಿನ. ಅವರ ಅಭಿಮಾನಿ ಬಳಗ ಈಗ ಹಿರಿದಾಗಿದೆ. ಅವರು ಅನೇಕರ ಫೇವರಿಟ್ ನಟಿ ಎನಿಸಿಕೊಂಡಿದ್ದು ಗೊತ್ತೇ ಇದೆ. ಈ ನಟಿ ಅದಾಗೆ ಕನ್ನಡದ ಓರ್ವ ಹಿರೋ ತುಂಬಾನೇ ಸ್ಫೂರ್ತಿ. ಅವರು ಯಾರು ಎಂದು ಅನೇಕ ಬಾರಿ ಹೇಳಿಕೊಂಡಿದ್ದರು. ಅವರೇ ಪುನೀತ್ ರಾಜ್​ಕುಮಾರ್. ಅವರ ಜೊತೆ ಸಿನಿಮಾ ಮಾಡಿದ ಅದಾ ಅವರು, ಸಾಕಷ್ಟು ವಿಚಾರಗಳನ್ನು ಕಲಿತುಕೊಂಡರು ಅನ್ನೋದು ವಿಶೇಷ.

ಅದಾ ಶರ್ಮಾ ಹಾಗೂ ಪುನೀತ್ ಅವರು ‘ರಣ ವಿಕ್ರಮ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಯಶಸ್ಸು ಕಂಡಿತು. ಇದು ಅದಾ ಶರ್ಮಾ ನಟನೆಯ ಮೊದಲ ಕನ್ನಡ ಸಿನಿಮಾ. ಈ ಚಿತ್ರದ ಶೂಟ್ ವೇಳೆ ಅದಾ ಸಾಕಷ್ಟು ಕಲಿತರು. ಇಷ್ಟು ಖ್ಯಾತಿ ಪಡೆದ ಹೊರತಾಗಿಯೂ ಹಂಬಲ್ ಆಗಿರೋದು ಹೇಗೆ ಎಂದು ಅದಾ ಅವರು ಪುನೀತ್ ಅವರಿಂದ ಕಲಿತರು.

‘9 ವರ್ಷಗಳ ಹಿಂದೆ ನಾನು ಕನ್ನಡಕ್ಕೆ ಕಾಲಿಟ್ಟೆ. ಅದೂ ಅತಿದೊಡ್ಡ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎದುರು. ಬೆಂಗಳೂರು ವಿಮಾನ ನಿಲ್ದಾಣದಿಂದ ಹೋಟೆಲ್‌ವರೆಗೆ ಬರುವಾಗ ಅವರ ಫೋಟೋ ದೊಡ್ಡ ಬ್ರಾಂಡ್‌ಗಳ 50ಕ್ಕೂ ಹೆಚ್ಚು ಹೋರ್ಡಿಂಗ್‌ಗಳ ಮೇಲೆ ಇತ್ತು. ಸೆಟ್ ಹೊರಗೆ ಹಿಂದಿನ ರಾತ್ರಿಯಿಂದಲೇ ಅವರನ್ನು ನೋಡಲು ನಿಂತಿದ್ದ ಜನರ ದಂಡೇ ಇತ್ತು. ನಾನು ತುಂಬಾ ನರ್ವಸ್ ಆಗಿದ್ದೆ ಮತ್ತು ಎಲ್ಲರೂ ನನಗೆ ಈ ಅವಕಾಶ ಸಿಕ್ಕಿದ್ದು ಎಷ್ಟು ಅದೃಷ್ಟ ಎಂದು ಪದೇ ಪದೇ ಹೇಳುತ್ತಿದ್ದರು’ ಎಂದಿದ್ದರು ಅದಾ.

‘ನನಗೆ ಸಿಕ್ಕ ಅದೃಷ್ಟ ಎಲ್ಲಾ ನಿರೀಕ್ಷೆಗಳನ್ನು ಮೀರಿತ್ತು. ಅವರು ತುಂಬಾನೇ ದಯಾಳು. ಅಭಿಮಾನಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದರು. ಸಮಯಪ್ರಜ್ಞೆ ಹೊಂದಿದ್ದರು. ನನಗೆ ಭಾಷೆ ಗೊತ್ತಿಲ್ಲ ಎಂದು ಗೊತ್ತಿದ್ದ ಅವರು, ನನಗಾಗಿ ವಿಷಯಗಳನ್ನು ಅನುವಾದಿಸುತ್ತಿದ್ದರು. ಅವರು ತಮ್ಮ ಹೆಂಡತಿ ಮತ್ತು ಕುಟುಂಬದ ಬಗ್ಗೆ ತುಂಬಾ ಪ್ರೀತಿಯಿಂದ ಮಾತನಾಡಿದರು. 45 ಡಿಗ್ರಿಯಲ್ಲೂ ಸೆಟ್‌ನಲ್ಲಿ ವಾತಾವರಣವನ್ನು ಖುಷಿಯಾಗಿಡುವಲ್ಲಿ ಯಶಸ್ವಿಯಾದರು’ ಎಂದಿದ್ದರು ಅದಾ.

ಇದನ್ನೂ ಓದಿ: ಗಾಯಕನ ಮಗಳು ಎಂದು ಖ್ಯಾತ ನಿರ್ದೇಶಕನಿಗೆ ಸುಳ್ಳು ಹೇಳಿದ್ದ ಅದಾ ಶರ್ಮಾ

ಈ ಮೂಲಕ ಅವರು ಪುನೀತ್​ನ ಎಲ್ಲ ವಿಷಯಗಳಲ್ಲಿ ಮಾದರಿಯಾಗಿ ತೆಗೆದುಕೊಂಡರು. ಅದಾ ಶರ್ಮಾ ಈ ಮೊದಲು ಗ್ಲಾಮರಸ್ ಪಾತ್ರ ಮಾಡುತ್ತಿದ್ದರು. ‘ಕೇರಳ ಸ್ಟೋರಿ’ ಸಿನಿಮಾ ಬಳಿಕ ಅವರ ಬದುಕು ಬದಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.