ಗಾಯಕನ ಮಗಳು ಎಂದು ಖ್ಯಾತ ನಿರ್ದೇಶಕನಿಗೆ ಸುಳ್ಳು ಹೇಳಿದ್ದ ಅದಾ ಶರ್ಮಾ
Adah Sharma: ಬಾಲಿವುಡ್ನಲ್ಲಿ ನೆಪೊಟಿಸಂ ಬಹಳ ನಡೆಯುತ್ತದೆ. ಸ್ಟಾರ್ ನಟ, ನಟಿಯರ ಮಕ್ಕಳಿಗೆ ಸಿನಿಮಾ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಇದೇ ರೀತಿ ಸಿನಿಮಾ ಅವಕಾಶ ಸಿಗಬಹುದೇನೋ ಎಂಬ ಆಸೆಯಲ್ಲಿ ನಟಿ ಅದಾ ಶರ್ಮಾ, ತಾವು ಸಹ ಸಿನಿಮಾ ಸೆಲೆಬ್ರಿಟಿಗಳ ಮಗಳು ಎಂದು ಹೇಳಿಕೊಂಡಿದ್ದರಂತೆ. ಅದಾ ಶರ್ಮಾ, ಸುಳ್ಳು ಹೇಳಿದ್ದು ಯಾರಿಗೆ? ಆ ನಂತರ ಏನಾಯ್ತು? ಅವರಿಗೆ ಅವಕಾಶ ಸಿಕ್ಕಿತೆ?

ಬಾಲಿವುಡ್ ನಟಿ ಅದಾ ಶರ್ಮಾ (Adah Sharma) ಅತ್ಯುತ್ತಮ ಕಲಾವಿದರಲ್ಲಿ ಒಬ್ಬರು. ‘1920’, ‘ಹಸೀ ತೋ ಫಸೀ, ‘ದಿ ಕೇರಳ ಸ್ಟೋರಿ’ ರೀತಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಜೊತೆ ‘ರಣವಿಕ್ರಮ’ ಸಿನಿಮಾ ಕೂಡ ಮಾಡಿರೋದು ಗೊತ್ತೇ ಇದೆ. ಇವರು ಆಫರ್ ಗಿಟ್ಟಿಸಿಕೊಳ್ಳಲು ಒಂದು ಸುಳ್ಳನ್ನು ಹೇಳಿದ್ದರು. ತಾವು ಸ್ಟಾರ್ ಗಾಯಕ ಅನು ಮಲಿಕ್ ಅವರ ಮಗ ಎಂದು ಹೇಳಿಕೊಂಡಿದ್ದರು. ಅಷ್ಟಕ್ಕೂ ಆಗಿದ್ದೇನು ಎನ್ನುವುದನ್ನು ನೋಡೋಣ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಅದಾ ಶರ್ಮಾ ಅವರು ಮಾತನಾಡಿದ್ದಾರೆ. ಅವರು ಒಟಿಟಿಯಲ್ಲಿ ಹಿಟ್ ಆದ ‘ಹೀರಾಮಂಡಿ’ ಈವೆಂಟ್ ಒಂದಕ್ಕೆ ತೆರಳಿದ್ದರು. ಅಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಅದಾ ಶರ್ಮಾ ಅವರು ಮಾತನಾಡಿಸಿದ್ದರು. ಬನ್ಸಾಲಿ ಕನ್ಫ್ಯೂಸ್ ಆದರು.
ಸಾಮಾನ್ಯವಾಗಿ ಯಾರಾದರೂ ಬಂದು ಮಾತನಾಡಿಸಿದಾಗ ಗೊಂದಲ ಆಗುತ್ತದೆ. ಅವರು ಯಾರು ಇರಬಹುದು ಎನ್ನುವ ಪ್ರಶ್ನೆ ಮೂಡುತ್ತದೆ. ಬನ್ಸಾಲಿಗೂ ಹಾಗೆಯೇ ಆಗಿದೆ. ಆದಾಗ್ಯೂ ಬನ್ಸಾಲಿ ಅವರು ‘ನೀವು ಅನು ಮಲಿಕ್ ಅವರ ಮಗಳಲ್ಲವೇ’ ಎಂದು ಕೇಳಿದರಂತೆ. ‘ನಾನು ಕೆರಳಸ್ಟೋರಿ ರೀತಿಯ ಸಿನಿಮಾ ಮಾಡಿದ್ದೇನೆ ಎಂದು ಹೇಳೋಣ ಎಂದುಕೊಂಡೆ. ಆದರೆ, ಹಾಗೆ ಹೇಳಿಲ್ಲ. ನಾನು ಯೆಸ್ ಎಂದೆ. ಅವರು ತಂದೆ ಹೇಗಿದ್ದಾರೆ ಎಂದು ಕೇಳಿದರು. ನಾನು ಚೆನ್ನಾಗಿದ್ದಾರೆ ಎಂದೆ’ ಎಂದು ಅದಾ ಶರ್ಮಾ ಅವರು ನಕ್ಕಿದ್ದಾರೆ.
ಇದನ್ನೂ ಓದಿ:ಸುಶಾಂತ್ ಫ್ಲ್ಯಾಟ್ನಲ್ಲಿರೋ ಎನರ್ಜಿ ಎಂಥದ್ದು? ವಿವರಿಸಿದ ಅದಾ ಶರ್ಮಾ
ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಸಾಕಷ್ಟು ಕರಾಳ ವಿಚಾರಗಳನ್ನು ಹೇಳಲಾಗಿತ್ತು. ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ವಿಚಾರ ಪ್ರಸ್ತಾಪಿಸಲಾಗಿತ್ತು. ಹಿಂದೂ ಹುಡುಗಿಯರ ಧರ್ಮ ಬದಲಾಯಿಸಿ ಅವರನ್ನು ಐಸಿಸ್ಗೆ ಸೇರಿಸುವ ಕೆಲಸ ಆಗಿತ್ತು. ಈ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವುದರ ಜೊತೆ ವಿವಾದವನ್ನೂ ಸೃಷ್ಟಿ ಮಾಡಿತ್ತು.
10 ವರ್ಷಗಳ ಹಿಂದೆ ಅಂದರೆ 2015ರಲ್ಲಿ ರಿಲೀಸ್ ಆದ ‘ರಣ ವಿಕ್ರಮ’ ಸಿನಿಮಾದಲ್ಲಿ ಅದಾ ಅವರು ಪುನೀತ್ ಜೊತೆ ನಟಿಸಿದ್ದರು. ಪುನೀತ್ ಜೊತೆ ಒಳ್ಳೆಯ ಬಾಂಧವ್ಯ ಅವರಿಗೆ ಬೆಳೆದಿತ್ತು. ಆ ಬಳಿಕ ಅವರು ಕನ್ನಡ ಸಿನಿಮಾ ಮಾಡಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



