ನೋರಾ ಫತೇಹಿನಾ ಬಾಯ್ತುಂಬ ಹೊಗಳಿದ ಅಮಿತಾಭ್ ಬಚ್ಚನ್; ಎಲ್ಲಾ ಮಗನಿಗಾಗಿ
ಅಮಿತಾಭ್ ಬಚ್ಚನ್ ಅವರು ತಮ್ಮ ಮಗ ಅಭಿಷೇಕ್ ಬಚ್ಚನ್ ಅಭಿನಯದ "ಬಿ ಹ್ಯಾಪಿ" ಚಿತ್ರದ ಹಾಡಿನಲ್ಲಿ ನೋರಾ ಫತೇಹಿ ಅವರ ಅದ್ಭುತ ನೃತ್ಯವನ್ನು ಶ್ಲಾಘಿಸಿದ್ದಾರೆ. ಅಭಿಷೇಕ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿ, ನೋರಾ ಅವರ ನೃತ್ಯವನ್ನು ಹೊಗಳಿದ್ದಾರೆ ಅನ್ನೋದು ವಿಶೇಷ.

ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಯಾವುದೇ ಸ್ಟಾರ್ ಕಲಾವಿದರ ಕೆಲಸ ಅಥವಾ ಅವರು ಹೇಳುವ ಏನಾದರೂ ಇಷ್ಟವಾದರೆ, ಬಿಗ್ ಬಿ ಯಾವುದೇ ಹಿಂಜರಿಕೆಯಿಲ್ಲದೆ ಅವರನ್ನು ಹೊಗಳುತ್ತಾರೆ. ಅಮಿತಾಭ್ ಬಚ್ಚನ್ ಈಗ ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರನ್ನು ಹೊಗಳಿದ್ದಾರೆ. ನೋರಾ (Noora Fatehi) ಅವರ ಹೊಸ ಹಾಡಿನಲ್ಲಿ ಅವರ ಡ್ಯಾನ್ಸ್ ಸ್ಟೆಪ್ ನೋಡಿದ ನಂತರ ಅಮಿತಾಭ್ ಮೆಚ್ಚುಗೆ ಸೂಚಿಸಿದ್ದಾರೆ. ಇದಕ್ಕೆ ಕಾರಣ ಅವರ ಮಗ.
ನೋರಾ ಫತೇಹಿ ತಮ್ಮ ಡ್ಯಾನ್ಸ್ ಮೂಲಕ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟಿಯ ಡ್ಯಾನ್ಸ್ ವೀಡಿಯೊ ಹಾಡುಗಳು ಬಿಡುಗಡೆ ಆಗಿ ಸದ್ದು ಮಾಡುತ್ತಲೇ ಇರುತ್ತವೆ. ಈಗ ನೋರಾ ಅವರು ಅಭಿಷೇಕ್ ಬಚ್ಚನ್ ಅವರ ಮುಂಬರುವ ಚಿತ್ರ ‘ಬಿ ಹ್ಯಾಪಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿ ಹ್ಯಾಪಿ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಇದರಲ್ಲಿ ನೋರಾ ಫತೇಹಿ ತಮ್ಮ ಅದ್ಭುತ ಡ್ಯಾನ್ಸ್ ಸ್ಟೆಪ್ಗಳಿಂದ ಗಮನ ಸೆಳೆದಿದ್ದಾರೆ.
uff superb !! https://t.co/D8QYsPkzyL
— Amitabh Bachchan (@SrBachchan) March 6, 2025
ನೋರಾ ಅವರ ಹಾಡನ್ನು ಹಂಚಿಕೊಂಡ ಅಭಿಷೇಕ್ ಬಚ್ಚನ್ ತಮ್ಮ ಟ್ವಿಟರ್ ಖಾತೆಯಲ್ಲಿ, ‘ಅವಳ ವೇದಿಕೆ, ಅವರ ನಿಯಮಗಳು, ಅವರ ಆಳ್ವಿಕೆ… ಎಂದು ಬರೆದಿದ್ದಾರೆ. ‘ಸುಲ್ತಾನ ಬಂದಾಗಿದೆ’ ಎಂದಿದ್ದಾರೆ. ‘ಸುಲ್ತಾನ’ ಅನ್ನೋದು ಹಾಡಿನ ಹೆಸರಾಗಿದೆ.
ಅಭಿಷೇಕ್ ಬಚ್ಚನ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ ಅಮಿತಾಭ್ ಬಚ್ಚನ್, ನೋರಾ ಅವರ ನೃತ್ಯವನ್ನು ಶ್ಲಾಘಿಸಿದ್ದಾರೆ. ಅದನ್ನು ಕೆಲವೇ ಪದಗಳಲ್ಲಿ ಹೊಗಳುತ್ತಾ, ‘ಉಫ್ ಸೂಪರ್ಬ್’ ಎಂದು ಬರೆದಿದ್ದಾರೆ. ಚಿತ್ರದ ಈ ಹಾಡನ್ನು ಗಾಯಕರಾದ ಸುನಿಧಿ ಚೌಹಾಣ್ ಮತ್ತು ಮಿಕಾ ಸಿಂಗ್ ಹಾಡಿದ್ದಾರೆ. ಇಬ್ಬರೂ ಗಾಯಕರ ಧ್ವನಿ ಈ ಹಾಡಿನ ಸೌಂದರ್ಯವನ್ನು ಹೆಚ್ಚಿಸಿದೆ. ಚಿತ್ರದ ಬಗ್ಗೆ ಹೇಳುವುದಾದರೆ, ಬಿ ಹ್ಯಾಪಿ ಒಂದು ನೃತ್ಯ ನಾಟಕ ಚಿತ್ರವಾಗಿರಲಿದೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಶಿವ ರಸ್ತೋಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹಾಟ್ ಬೆಡಗಿ ನೋರಾ ಫತೇಹಿ
ಅಭಿಷೇಕ್ ಅವರ ಪಾತ್ರವು ತನ್ನ ಮಗಳ ಪ್ರತಿಯೊಂದು ಆಸೆಯನ್ನು ಪೂರೈಸಲು ಯಾವುದೇ ಮಿತಿಯನ್ನು ದಾಟಲು ಸಿದ್ಧವಿರುವ ತಂದೆಯದ್ದಾಗಿದೆ. ಈ ಸಿನಿಮಾ ತಂದೆ ಮತ್ತು ಮಗಳ ನಡುವಿನ ಸುಂದರ ಸಂಬಂಧವನ್ನು ತೋರಿಸಲಿದೆ. ‘ಬಿ ಹ್ಯಾಪಿ’ ಮಾರ್ಚ್ 14 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಈ ಚಿತ್ರವನ್ನು ರೆಮೋ ಡಿ’ಸೋಜಾ ನಿರ್ದೇಶಿಸಿದ್ದು, ಅವರ ಪತ್ನಿ ಲಿಜೆಲ್ಲೆ ಡಿ’ಸೋಜಾ ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.