70ನೇ ವಯಸ್ಸಿಗೆ ಕಾಲಿಟ್ಟ ಅನುಪಮ್ ಖೇರ್; ಇವರ ಫಿಟ್ನೆಸ್ ಗುಟ್ಟು ಇದೇ
Anupam Kher Birthday: ಅನುಪಮ್ ಖೇರ್ ಅವರು ತಮ್ಮ 70ನೇ ವಯಸ್ಸಿನಲ್ಲೂ ಅದ್ಭುತವಾದ ಫಿಟ್ನೆಸ್ ಹೊಂದಿದ್ದಾರೆ. ಅವರ ಈ ಫಿಟ್ನೆಸ್‌ಗೆ ಕಾರಣ ಅವರ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಕ್ರಮ. ಅವರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಆದ್ಯತೆ ನೀಡುತ್ತಾರೆ ಮತ್ತು ಅಕ್ಕಿ, ಆಲೂಗಡ್ಡೆ ಮತ್ತು ಸಿಹಿತಿಂಡಿಗಳನ್ನು ತಿನ್ನುತ್ತಿಲ್ಲ. ನಿರಂತರ ವ್ಯಾಯಾಮ ಮತ್ತು ಆಗಾಗ್ಗೆ ಸಣ್ಣ ಪ್ರಮಾಣದ ಆಹಾರ ಸೇವನೆ ಅವರ ಫಿಟ್ನೆಸ್ ರಹಸ್ಯ.

ಅನುಪಮ್ ಖೇರ್ ಅವರು ಈಗ 70ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರಿಗೆ ಇಂದು (ಮಾರ್ಚ್ 7) ಜನ್ಮದಿನ. ಅವರಿಗೆ ಈ ವಯಸ್ಸಿನಲ್ಲೂ ಸಾಕಷ್ಟು ಉತ್ಸಾಹ ಇದೆ. ಈ ಉತ್ಸಾಹ ಎಂದಿಗೂ ಕಡಿಮೆ ಆಗೋದಿಲ್ಲ. ಅನೇಕರಿಗೆ ಅವರ ಆಹಾರ ಕ್ರಮದ ಬಗ್ಗೆ ಕುತೂಹಲ ಇರುತ್ತದೆ. ಈ ವಯಸ್ಸಿನಲ್ಲಿ ಅವರು ಇಷ್ಟು ಫಿಟ್ ಆಗಿರಲು ಹೇಗೆ ಸಾಧ್ಯ ಎಂದು ಕೆಲವರ ಕೇಳಿದ್ದೂ ಇದೆ. ಈ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿ ಉತ್ತರ ಇದೆ. ಅವರು ಏನು ತಿನ್ನುತ್ತಾರೆ, ಏನು ತಿನ್ನಲ್ಲ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.
ಅನುಪಮ್ ಖೇರ್ ಅವರು 2016ರಲ್ಲಿ ತೂಕ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದರು. ಕೇವಲ 2 ವರ್ಷಗಳಲ್ಲಿ 16 ಕೆಜಿ ಕಳೆದುಕೊಂಡರು. ಆ ವಯಸ್ಸಿನಲ್ಲಿ ಇಷ್ಟು ಡೆಡಿಕೇಟ್ನಿಂದ ಸಾಧನೆ ಮಾಡುವವರು ಸಿಗೋದು ಕಡಿಮೆ. ಆದರೆ, ಅನುಪಮ್ ಖೇರ್ ಅದನ್ನು ಮಾಡಿ ತೋರಿಸಿದರು. ಇದಕ್ಕೆ ಕಾರಣ ಆಗಿದ್ದು, ಅವರ ಆಹರ ಕ್ರಮ ಹಾಗೂ ಜಿಮ್ ವರ್ಕೌಟ್,
ಮನೆ ಆಹಾರ
ಅನುಪಮ್ ಖೇರ್ ಅವರು ಮನೆ ಆಹಾರ ತಿನ್ನೋಕೆ ಆದ್ಯತೆ ನೀಡುತ್ತಾರೆ. ಸದಾ ಹೋಂ ಫುಡ್ನ ಅವರು ಪ್ರೀತಿ ಮಾಡುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಆದ್ಯತೆ ನೀಡುತ್ತಾರೆ. ಹೊರಗೆ ತಿನ್ನೋದನ್ನು ಅವರು ಸಾಕಷ್ಟು ಅವಾಯ್ಡ್ ಮಾಡುತ್ತಾರೆ.
ಏನು ತಿನ್ನಲ್ಲ?
ಅನುಪಮ್ ಖೇರ್ ಅವರು ಈ ವಯಸ್ಸಿನಲ್ಲಿ ಕೆಲವು ಆಹಾರಗಳನ್ನು ಅವಾಯ್ಡ್ ಮಾಡಿದ್ದಾರೆ. ಅನ್ನ, ಆಲೂಗಡ್ಡೆ ಮತ್ತು ಸಿಹಿ ಪದಾರ್ಥಗಳಿಂದ ಅವರು ದೂರವೇ ಇದ್ದಾರೆ. ಇದು ಅವರ ಆರೋಗ್ಯಕ್ಕೆ ಸಹಕಾರಿ ಆಗಿದೆ.
ಆಗಾಗ ತಿನ್ನುತ್ತಾರೆ..
ದಿನಕ್ಕೆ ಮೂರು ಬಾರಿ ಸಾಕಷ್ಟು ತಿನ್ನುವುದಕ್ಕಿಂತ ಅನುಪಮ್ ಖೇರ್ ಅವರು ಆಗಾಗ ಆಹಾರ ಸೇವನೆ ಮಾಡಲು ಇಷ್ಟಪಡುತ್ತಾರೆ. ಇದರಿಂದ ಅವರ ಹೊಟ್ಟೆ ಯಾವಾಗಲೂ ಖಾಲಿ ಇರೋದಿಲ್ಲ.
ಇದನ್ನೂ ಓದಿ: ‘ವಿಜಯ್ 69’ ಚಿತ್ರಕ್ಕೆ ಅನುಪಮ್ ಖೇರ್ ಹಾಕಿದ ಶ್ರಮ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ
ಅನುಪಮ್ ಖೇರ್ ವ್ಯಾಯಾಮ
ಅನುಪಮ್ ಖೇರ್ ಅವರು ನಿತ್ಯವೂ ವ್ಯಾಯಾಮ ಮಾಡುತ್ತಾರೆ. ಇದನ್ನು ಅವರು ಎಂದಿಗೂ ತಪ್ಪಿಸೋದಿಲ್ಲ. ಅವರು ಇತ್ತೀಚೆಗೆ ‘ವಿಜಯ್ 69’ ಚಿತ್ರಕ್ಕಾಗಿ ಸ್ವಿಮ್ ಕಲಿತಿದ್ದರು. ಅವರಿಗೆ ನೀರು ಎಂದರೆ ಸಾಕಷ್ಟು ಭಯ ಆಗಿತ್ತಂತೆ. ಆದಾಗ್ಯೂ ಅವರು ಈಜು ಕಲಿತು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







