Adipurush: ‘ಆದಿಪುರುಷ್​’ ಕಲೆಕ್ಷನ್​ನಲ್ಲಿ ಸ್ವಲ್ಪ ಚೇತರಿಕೆ; ಮಳೆ ನಡುವೆಯೂ ಹಲವು ಕಡೆಗಳಲ್ಲಿ ಹೌಸ್​ಫುಲ್​

Adipurush Box Office Collection: 2ನೇ ವೀಕೆಂಡ್​ನಲ್ಲಿ ‘ಆದಿಪುರುಷ್​’ ಸಿನಿಮಾ ಸಂಪೂರ್ಣವಾಗಿ ತನ್ನ ಆಟ ನಿಲ್ಲಿಸಲಿದೆ ಎಂದು ಕೆಲವರು ಊಹಿಸಿದ್ದರು. ಆದರೆ ಆ ರೀತಿ ಆಗಿಲ್ಲ.

Adipurush: ‘ಆದಿಪುರುಷ್​’ ಕಲೆಕ್ಷನ್​ನಲ್ಲಿ ಸ್ವಲ್ಪ ಚೇತರಿಕೆ; ಮಳೆ ನಡುವೆಯೂ ಹಲವು ಕಡೆಗಳಲ್ಲಿ ಹೌಸ್​ಫುಲ್​
ಪ್ರಭಾಸ್​, ಕೃತಿ ಸನೋನ್
Follow us
|

Updated on: Jun 25, 2023 | 11:16 AM

ಜೂನ್​ 16ರಂದು ತೆರೆಕಂಡ ‘ಆದಿಪುರುಷ್​’ ಸಿನಿಮಾ (Adipurush Movie) ಹೇಳಿಕೊಳ್ಳುವಂತಹ ಕಲೆಕ್ಷನ್​ ಮಾಡಿಲ್ಲ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ನೆಗೆಟಿವ್​ ಪ್ರತಿಕ್ರಿಯೆ ಸಿಕ್ಕಿದ್ದೇ ಹೆಚ್ಚು. ಓಂ ರಾವತ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್​ (Prabhas) ಅವರ ಅಭಿಮಾನಿಗಳು ‘ಆದಿಪುರುಷ್​’ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಈ ಸಿನಿಮಾಗೆ ಸಾಧ್ಯವಾಗಲಿಲ್ಲ. ರಾಮಾಯಣದ ಕಥೆಯನ್ನು ಆಧರಿಸಿ ಈ ಸಿನಿಮಾದಲ್ಲಿ ಅನೇಕ ತಪ್ಪುಗಳು ಇವೆ ಎಂಬುದನ್ನು ಪ್ರೇಕ್ಷಕರು ಪತ್ತೆ ಹೆಚ್ಚಿದರು. ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರಿಂದ ಸಿನಿಮಾದ ಕಲೆಕ್ಷನ್​ ಮೇಲೆ ಪರಿಣಾಮ ಬೀರಿತು. ಆದರೆ ಅಚ್ಚರಿ ಎಂಬಂತೆ ಎರಡನೇ ವೀಕೆಂಡ್​ನಲ್ಲಿ ‘ಆದಿಪುರುಷ್​’ ಕಲೆಕ್ಷನ್​ (Adipurush Box Office Collection) ಕೊಂಚ ಸುಧಾರಿಸಿದೆ. ಜೂನ್​ 24ರಂದು ಹಲವು ಕಡೆಗಳಲ್ಲಿ ಹೌಸ್​ಫುಲ್​ ಆಗಿದೆ.

ಎರಡನೇ ವೀಕೆಂಡ್​ನಲ್ಲಿ ‘ಆದಿಪುರುಷ್​’ ಸಿನಿಮಾ ಸಂಪೂರ್ಣವಾಗಿ ತನ್ನ ಆಟ ನಿಲ್ಲಿಸಲಿದೆ ಎಂದು ಕೆಲವರು ಊಹಿಸಿದ್ದರು. ಆದರೆ ಆ ರೀತಿ ಆಗಿಲ್ಲ. ಮೊದಲ ವಾರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದೇ ಇರುವವರು 2ನೇ ವೀಕೆಂಡ್​ನಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದರಿಂದ ಜೂನ್​ 24ರಂದು ಈ ಸಿನಿಮಾದ ಕಲೆಕ್ಷನ್​ ಸ್ವಲ್ಪ ಏರಿಕೆ ಆಗಿದೆ. ಭಾನುವಾರ (ಜೂನ್​ 25) ಕೂಡ ಇದೇ ರೀತಿ ಹೌಸ್​ಫುಲ್​ ಆದರೆ ಚಿತ್ರದ ಟೋಟಲ್​ ಗಳಿಕೆ ಹೆಚ್ಚಾಗಲಿದೆ.

ಇದನ್ನೂ ಓದಿ: Om Raut: ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​ಗೆ ಮುಂಬೈ ಪೊಲೀಸರಿಂದ​ ಭದ್ರತೆ?

ಹೈದರಾಬಾದ್​ನಲ್ಲಿ ಶನಿವಾರ ಸಿಕ್ಕಾಪಟ್ಟೆ ಮಳೆ ಸುರಿದಿದೆ. ಮಳೆಯ ರಭಸಕ್ಕೆ ಅನೇಕ ರಸ್ತೆಗಳು ಜಲಾವೃತಗೊಂಡಿವೆ. ಟ್ರಾಫಿಕ್​ ಸವಾರರು ತುಂಬ ಸಮಸ್ಯೆ ಎದುರಿಸಿದ್ದಾರೆ. ಅಚ್ಚರಿ ಏನೆಂದರೆ ಈ ಪರಿ ಮಳೆಯ ನಡುವೆಯೂ ‘ಆದಿಪುರುಷ್​’ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಆಗಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಜನರು ಬಯಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಇನ್ನೂ ಅನೇಕರು ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡುವುದಕ್ಕಾಗಿ ಕಾದಿದ್ದಾರೆ. ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ‘ಆದಿಪುರುಷ್​’ ಚಿತ್ರ ಒಟಿಟಿಗೆ ಬರಲಿದೆ. ಆದರೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

ಇದನ್ನೂ ಓದಿ: Om Raut: ‘ಆದಿಪುರುಷ್​’ ಚಿತ್ರಕ್ಕೆ ಕೆಟ್ಟ ವಿಮರ್ಶೆ ಸಿಕ್ಕ ಬಳಿಕ ನಿರ್ದೇಶಕ ಓಂ ರಾವತ್​ ಪ್ರತಿಕ್ರಿಯೆ ಏನು?

‘ಆದಿಪುರುಷ್​’ ಸಿನಿಮಾ ಭಾರತದ ಮಾರುಕಟ್ಟೆಯಲ್ಲಿ 268 ಕೋಟಿ ರೂಪಾಯಿ ಮಾಡಿದೆ. ವಿಶ್ವಾದ್ಯಂತ ಇದರ ಗಳಿಕೆ 386 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾದ ಬಜೆಟ್​ ದುಬಾರಿ ಆಗಿರುವುದರಿಂದ ಚಿತ್ರಮಂದಿರದಲ್ಲಿ ಆಗಿರುವ ಈ ಕಲೆಕ್ಷನ್​ ತೃಪ್ತಿದಾಯಕವಾಗಿಲ್ಲ. ಪ್ರಭಾಸ್​ ಅವರು ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಅವರು ನಟಿಸಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​, ಲಕ್ಷ್ಮಣನಾಗಿ ಸನ್ನಿ ಸಿಂಗ್​, ಆಂಜನೇಯನಾಗಿ ದೇವದತ್ತ ನಾಗೆ ಅಭಿನಯಿಸಿದ್ದಾರೆ. ಈ ಚಿತ್ರದಿಂದ ನಿರ್ದೇಶಕ ಓಂ ರಾವತ್​ ಅವರು ಸಖತ್​ ಟ್ರೋಲ್​ಗೆ ಒಳಗಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ