AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀ ರಿಲೀಸ್ ಇವೆಂಟ್​ಗೆ ಕೋಟ್ಯಂತರ ಹಣ ಖರ್ಚು ಮಾಡಿದ ಆದಿಪುರುಷ್: ಕಾರ್ಯಕ್ರಮದ ಒಟ್ಟು ವೆಚ್ಚ ಎಷ್ಟು?

Adipurush: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇಂದು (ಜೂನ್ 06) ರಂದು ತಿರುಪತಿಯಲ್ಲಿ ನಡೆಯುತ್ತಿದ್ದು ಈ ಕಾರ್ಯಕ್ರಮಕ್ಕೆ ಕೋಟ್ಯಂತರ ರೂಪಾಯಿ ಹಣ ವ್ಯಯಿಸಲಾಗಿದೆ.

ಪ್ರೀ ರಿಲೀಸ್ ಇವೆಂಟ್​ಗೆ ಕೋಟ್ಯಂತರ ಹಣ ಖರ್ಚು ಮಾಡಿದ ಆದಿಪುರುಷ್: ಕಾರ್ಯಕ್ರಮದ ಒಟ್ಟು ವೆಚ್ಚ ಎಷ್ಟು?
ಪ್ರೀ ರಿಲೀಸ್ ಇವೆಂಟ್
ಮಂಜುನಾಥ ಸಿ.
|

Updated on: Jun 06, 2023 | 8:01 PM

Share

ಪ್ರಭಾಸ್ (Prabhas) ನಟನೆಯ ಆದಿಪುರುಷ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ರಾಮಾಯಣ (Ramayana) ಆಧರಿಸಿದ ಈ ಸಿನಿಮಾ ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್ (Budget) ಸಿನಿಮಾ ಎನ್ನಲಾಗುತ್ತಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದ ಬಿಡುಗಡೆಗೆ ಇನ್ನು ಕೆಲವು ದಿನ ಮಾತ್ರವೇ ಬಾಕಿ ಇದ್ದು, ಸಿನಿಮಾದ ಪ್ರಚಾರಕ್ಕಾಗಿ ಇಂದು (ಜೂನ್ 6) ರಂದು ತಿರುಪತಿಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಚಿತ್ರತಂಡ. ಆದರೆ ಈ ಪ್ರೀ ರಿಲೀಸ್ ಇವೆಂಟ್ ಒಂದಕ್ಕೇ ಭಾರಿ ದೊಡ್ಡ ಮೊತ್ತವನ್ನು ಚಿತ್ರತಂಡ ಖರ್ಚು ಮಾಡುತ್ತಿದೆ.

ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ದೊಡ್ಡ ಮೈದಾನದಲ್ಲಿ ಅತಿ ದೊಡ್ಡ ವೇದಿಕೆ ಹಾಕಿ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್ ಅನ್ನು ಮಾಡಲಾಗುತ್ತಿದೆ. ದೇಶದ ಹಲವು ರಾಜ್ಯಗಳಿಂದ ಈ ಇವೆಂಟ್​ಗೆ ಜನ ಆಗಮಿಸಿದ್ದು ಇವೆಂಟ್ ಈಗಾಗಲೇ ಶುರುವಾಗಿದೆ. ಸುಮಾರು 15,000 ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಪ್ರೀ ರಿಲೀಸ್ ಇವೆಂಟ್​ಗೆ ಆಗಮಿಸಿದ್ದು ಭಗವಾ ಧ್ವಜಗಳು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಮೈದಾನದಲ್ಲಿ ಹಾರಾಡುತ್ತಿವೆ.

ಚಿನ್ನ ಜೀಯಾರ್ ಸ್ವಾಮೀಜಿಗಳು ಮುಖ್ಯ ಅತಿಥಿಗಳಾಗಿರುವ ಈ ಕಾರ್ಯಕ್ರಮವನ್ನು ಬಹು ಅದ್ಧೂರಿಯಾಗಿ ಚಿತ್ರತಂಡ ಆಯೋಜಿಸಿದ್ದು ಈ ಇವೆಂಟ್​ಗೆ ಮಾಡಲು ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಮೈದಾನವನ್ನು ಒಪ್ಪ ಮಾಡುವುದರಿಂದ ಹಿಡಿದು ವೇದಿಕೆ ನಿರ್ಮಾಣ, ಬಂದ ಅಭಿಮಾನಿಗಳ ಅನುಕೂಲಕ್ಕೆ ಕೆಲವು ಮೂಲಭೂತ ಸೌಕರ್ಯಗಳು, ಬ್ಯಾರಿಕೇಡ್ ಅಳವಡಿಕೆ, ವಿದ್ಯುತ್ ದೀಪಗಳ ವ್ಯವಸ್ಥೆ, ಎಲ್​ಇಡಿ ಸ್ಕ್ರೀನ್, ಸ್ಪೀಕರ್, ಭದ್ರತೆ, ಅತಿಥಿಗಳಿಗೆ ಖಾಸಗಿ ಭದ್ರತೆ, ಸಂಗೀತ ಕಾರ್ಯಕ್ರಮಗಳು, ಮನೊರಂಜನಾ ಕಾರ್ಯಕ್ರಮಗಳು, ಸಂಚಾರ ವ್ಯವಸ್ಥೆ ಇನ್ನು ಹಲವು ಅನುಕೂಲಗಳಿಗೆ ಸುಮಾರು 2.50 ಕೋಟಿ ಹಣವನ್ನು ಚಿತ್ರತಂಡ ಖರ್ಚು ಮಾಡಿದೆ ಎನ್ನಲಾಗುತ್ತಿದೆ.

ಕಾರ್ಯಕ್ರಮದಲ್ಲಿ ವಿಶೇಷ ಬಾಣ ಬಿರುಸು ಶೋ ಸಹ ಹಮ್ಮಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ವಿಶೇಷ ಅತಿಥಿಗಳು ವೇದಿಕೆಗೆ ಆಗಮಿಸಿದಾಗ, ಮನೊರಂಜನಾ ಕಾರ್ಯಕ್ರಮ ನಡೆದಾಗೆಲ್ಲ ವೇದಿಕೆ ಮುಂದೆ ಹಾಗೂ ಮೈದಾನದ ಸುತ್ತ ಪಟಾಕಿಗಳು ಹೊಡೆಯುವಂತೆ ವ್ಯವಸ್ಥೆ ಮಾಡಲಾಗಿದ್ದು ಇದಕ್ಕೆಂದೇ ಸುಮಾರು 10 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆಯಂತೆ.

ಆದಿಪುರುಷ್ ಸಿನಿಮಾವು ರಾಮಾಯಣದ ಕತೆ ಆಧರಿಸಿದ ಸಿನಿಮಾ ಆಗಿರುವ ಕಾರಣ, ಪ್ರೀ ರಿಲೀಸ್ ಇವೆಂಟ್ ನಡೆದಿರುವ ಮೈದಾನದಲ್ಲಿ ಅಯೋಧ್ಯ, ಮಿಥಿಲ, ಪಂಚವಟಿ ಇನ್ನಿತರೆ ರಾಮಾಯಣದಲ್ಲಿ ಬರುವ ಸ್ಥಳಗಳ ಹೆಸರನ್ನು ಅಭಿಮಾನಿಗಳ ಸ್ಟ್ಯಾಂಡ್​ಗೆ ಇಡಲಾಗಿದೆ. ಈಗಾಗಲೇ ಭಾರಿ ಸಂಖ್ಯೆಯ ಅಭಿಮಾನಿಗಳು ಪ್ರೀ ರಿಲೀಸ್ ಇವೆಂಟ್​ ವೇದಿಕೆ ಮುಂದೆ ಸೇರಿದ್ದು ಮನೊರಂಜನಾ ಕಾರ್ಯಕ್ರಮಗಳು ಪ್ರಸ್ತುತ ಚಾಲ್ತಿಯಲ್ಲಿವೆ. ಕೆಲವೇ ಹೊತ್ತಿನಲ್ಲಿ ನಟ ಪ್ರಭಾಸ್ ಆಗಮಿಸಲಿದ್ದು, ಪ್ರೀ ರಿಲೀಸ್ ಇವೆಂಟ್​ನಲ್ಲಿ ಪ್ರಭಾಸ್ ಏನು ಮಾತನಾಡುತ್ತಾರೆ ಎಂಬ ಕುತೂಹಲ ಹಲವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ