
ಕಳೆದ ವರ್ಷ ರಿಲೀಸ್ ಆದ ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಸಿನಿಮಾ ಡಿಸಾಸ್ಟರ್ ಆಯಿತು. ಈ ಚಿತ್ರದ ಬಳಿಕ ತೆರೆಗೆ ಬಂದ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಗೆದ್ದು ಬೀಗಿತು. ಆದರೂ ಪ್ರೇಕ್ಷಕರೂ ‘ಆದಿಪುರುಷ್’ ತಂಡ ಮಾಡಿದ ತಪ್ಪನ್ನು ಮರೆತಿಲ್ಲ. ಸಮಯ ಸಿಕ್ಕಾಗಲೆಲ್ಲ ಈ ಅವಕಾಶ ಬಳಕೆ ಮಾಡಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಈಗ ‘ಹನುಮಾನ್’ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ಈ ಚಿತ್ರದ ಕಥೆ, ಮೇಕಿಂಗ್, ವಿಎಫ್ಎಕ್ಸ್ ಗಮನ ಸೆಳೆದಿದೆ. ಹೀಗಾಗಿ, ಪ್ರೇಕ್ಷಕರು ‘ಆದಿಪುರುಷ್’ ನಿರ್ದೇಶಕ ಓಂ ರಾವತ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ತೆಜ ಸಜ್ಜಾ ಅವರು ‘ಹನುಮಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಎದುರು ರಿಲೀಸ್ ಆಗಿ ಈ ಚಿತ್ರ ಗೆದ್ದು ಬೀಗಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ ‘ಆದಿಪುರುಷ್’ ತಂಡ ಮಾಡಿದ ಡಿಸಾಸ್ಟರ್ ನೆನಪಾಗಿದೆ. ಈ ಬಗ್ಗೆ ಟ್ರೋಲ್ ಮಾಡುವ ಕೆಲಸ ಆಗುತ್ತಿದೆ.
ಎಲ್ಲಾ ರೀತಿಯಲ್ಲೂ ‘ಆದಿಪುರುಷ್’ ಚಿತ್ರವನ್ನು ‘ಹನುಮಾನ್’ ಹಿಂದಿಕ್ಕಿದೆ ಎಂದು ಫ್ಯಾನ್ಸ್ ಅಭಿಪ್ರಾಯ ಹೊರಾಹಾಕುತ್ತಿದ್ದಾರೆ. ದೊಡ್ಡ ಬಜೆಟ್ನಲ್ಲಿ ‘ಆದಿಪುರುಷ್’ ನಿರ್ಮಾಣ ಆಗಿತ್ತು. ಆದರೆ, ಬಜೆಟ್ ಸರಿಯಾಗಿ ಬಳಕೆ ಆಗಿಲ್ಲ. ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಿತ್ತು. ಹೀಗಾಗಿ ‘ಹನುಮಾನ್’ ನೋಡಿದ ಅನೇಕರು ‘ಈ ಚಿತ್ರ ನೋಡಿ ಕಲಿಯಿರಿ’ ಎಂದು ಓಂ ರಾವತ್ಗೆ ಬುದ್ಧಿವಾದ ಹೇಳಿದ್ದಾರೆ.
ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಕಂಡಂತೆ ರಾಜಮೌಳಿ; ಸಿನಿ ಮಾಂತ್ರಿಕನ ಬಗ್ಗೆ ಆರ್ಜಿವಿ ಬರೆದ ವಿಶೇಷ ಲೇಖನ..
ಪ್ರಶಾಂತ್ ವರ್ಮ ಅವರು ‘ಹನುಮಾನ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಣ್ಣ ಬಜೆಟ್ನಲ್ಲಿ ಒಳ್ಳೆಯ ಗ್ರಾಫಿಕ್ಸ್ ಮಾಡಿದ ಅವರನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಹನುಮಂತನ ಸ್ಫೂರ್ತಿಯಾಗಿ ಇಟ್ಟುಕೊಂಡು ‘ಹನುಮಾನ್’ ಚಿತ್ರದ ಕಥೆ ಸಿದ್ಧವಾಗಿದೆ. ಇದನ್ನು ಕಟ್ಟಿಕೊಟ್ಟ ರೀತಿ ಎಲ್ಲರಿಗೂ ಇಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 am, Sat, 13 January 24