AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush Trailer: ‘ಆದಿಪುರುಷ್​’ ಟ್ರೇಲರ್ ನೋಡಿ ಪ್ರಭಾಸ್​ ಜೊತೆ ‘ಜೈ ಶ್ರೀರಾಮ್​’ ಎಂದು ಜೈಕಾರ ಹಾಕಿದ ಅಭಿಮಾನಿಗಳು

Prabhas: ಹೈದರಾಬಾದ್​​ನಲ್ಲಿ ಆಯೋಜಿಸಲಾಗಿದ್ದ ‘ಆದಿಪುರುಷ್​’ ಟ್ರೇಲರ್​ ಪ್ರದರ್ಶನದಲ್ಲಿ ಪ್ರಭಾಸ್​ ಜೊತೆ ಅಭಿಮಾನಿಗಳು ಭಾಗಿಯಾಗಿದ್ದರು. 3ಡಿ ಟ್ರೇಲರ್​ ಕಣ್ತುಂಬಿಕೊಂಡ ಫ್ಯಾನ್ಸ್​ ಸಖತ್​ ಖುಷಿಪಟ್ಟಿದ್ದಾರೆ.

Adipurush Trailer: ‘ಆದಿಪುರುಷ್​’ ಟ್ರೇಲರ್ ನೋಡಿ ಪ್ರಭಾಸ್​ ಜೊತೆ ‘ಜೈ ಶ್ರೀರಾಮ್​’ ಎಂದು ಜೈಕಾರ ಹಾಕಿದ ಅಭಿಮಾನಿಗಳು
ಪ್ರಭಾಸ್
ಮದನ್​ ಕುಮಾರ್​
|

Updated on:May 09, 2023 | 1:44 PM

Share

ಮುಖ್ಯಾಂಶಗಳು

  • ಹೈದರಾಬಾದ್​​ನಲ್ಲಿ ಆಯೋಜಿಸಲಾಗಿದ್ದ ಟ್ರೇಲರ್​ ಪ್ರದರ್ಶನದಲ್ಲಿ ಪ್ರಭಾಸ್​ ಭಾಗಿ
  • ಚಿತ್ರಮಂದಿರದಲ್ಲಿ ಪ್ರಭಾಸ್​ ಜೊತೆ ಸೇರಿ ‘ಜೈ ಶ್ರೀರಾಮ್​’ ಎಂದು ಜೈಕಾರ ಹಾಕಿದ ಫ್ಯಾನ್ಸ್​
  • ಮೇ 9ರಂದು ಸಂಜೆ 5 ಗಂಟೆಗೆ ಆನ್​ಲೈನ್​ನಲ್ಲಿ ‘ಆದಿಪುರುಷ್​’ ಟ್ರೇಲರ್​ ರಿಲೀಸ್​ ಆಗಲಿದೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಆದಿಪುರುಷ್​’ (Adipurush) ಚಿತ್ರ ಮುಂಚೂಣಿಯಲ್ಲಿದೆ. ಈ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಜೂನ್​ 16ರಂದು ‘ಆದಿಪುರುಷ್​’ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ನಟ ಪ್ರಭಾಸ್​ (Prabhas) ಅವರು ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಸೀತೆಯ ಪಾತ್ರದಲ್ಲಿ ಕೃತಿ ಸನೋನ್​ ಅಭಿನಯಿಸಿದ್ದಾರೆ. ಸೈಫ್​ ಅಲಿ ಖಾನ್​ ಅವರು ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೇ 9ರಂದು ‘ಆದಿಪುರುಷ್​’ ಟ್ರೇಲರ್​ (Adipurush Trailer) ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ, ಅಂದರೆ ಮೇ 8ರ ಸಂಜೆ ಮಾಧ್ಯಮದವರಿಗೆ ಹಾಗೂ ಅಭಿಮಾನಿಗಳಿಗಾಗಿ ಕೆಲವು ಚಿತ್ರಮಂದಿರಗಳಲ್ಲಿ ಟ್ರೇಲರ್​ ಬಿತ್ತರ ಮಾಡಲಾಗಿದೆ. ಟ್ರೇಲರ್​ ನೋಡಿದ ಅಭಿಮಾನಿಗಳು ‘ಜೈ ಶ್ರೀರಾಮ್​’ ಎಂದು ಜೈಕಾರ ಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಹೈದರಾಬಾದ್​​ನಲ್ಲಿ ಆಯೋಜಿಸಲಾಗಿದ್ದ ಟ್ರೇಲರ್​ ಪ್ರದರ್ಶನದಲ್ಲಿ ಪ್ರಭಾಸ್​, ಕೃತಿ ಸನೋನ್​, ನಿರ್ದೇಶಕ ಓಂ ರಾವತ್​ ಸೇರಿದಂತೆ ಇಡೀ ಚಿತ್ರತಂಡದವರು ಹಾಜರಿ ಹಾಕಿದ್ದರು. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಮೂಡಿಬಂದಿದೆ. 3ಡಿ ಟ್ರೇಲರ್​ ಕಣ್ತುಂಬಿಕೊಂಡ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಚಿತ್ರಮಂದಿರದಲ್ಲಿ ಪ್ರಭಾಸ್​ ಜೊತೆ ಸೇರಿ ಅಭಿಮಾನಿಗಳು ‘ಜೈ ಶ್ರೀರಾಮ್​’ ಎಂದು ಜೈಕಾರ ಹಾಕುವ ಮೂಲಕ ಟ್ರೇಲರ್​ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ
Image
ನಿಕ್ ನೇಮ್​ನಿಂದ ಪ್ರಭಾಸ್​ನ ಕರೆದ ಅನುಷ್ಕಾ ಶೆಟ್ಟಿ; ನಟಿ ಪ್ರೀತಿಯಿಂದ ಇಟ್ಟ ಹೆಸರೇನು?
Image
ಕ್ಷುಲ್ಲಕ ಕಾರಣಕ್ಕೆ ಪವನ್ ಕಲ್ಯಾಣ್ ಅಭಿಮಾನಿಯನ್ನು ಕೊಂದ ಪ್ರಭಾಸ್ ಅಭಿಮಾನಿ
Image
Adipurush: ವಿದೇಶಿ ಪ್ರೇಕ್ಷಕರಿಗೆ ಮೊದಲು ದರ್ಶನ ನೀಡಲಿರುವ ‘ಆದಿಪುರುಷ್​’; ಟ್ರೈಬ್ಯಾಕಾದಲ್ಲಿ ಪ್ರೀಮಿಯರ್​
Image
‘ಆದಿಪುರುಷ್​’ ಚಿತ್ರದ ಅವಧಿ ಬರೋಬ್ಬರಿ 3 ಗಂಟೆ; ಪ್ರಭಾಸ್ ಅಭಿಮಾನಿಗಳಿಗೆ ಶುರುವಾಯ್ತು ಚಿಂತೆ

ಆರಂಭದಲ್ಲಿ ‘ಆದಿಪುರುಷ್​’ ಸಿನಿಮಾದ ಟೀಸರ್​ ಬಿಡುಗಡೆ ಆದಾಗ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿತ್ತು. ಕಳಪೆ ಗ್ರಾಫಿಕ್ಸ್​ ಕಾರಣದಿಂದ ಈ ಚಿತ್ರಕ್ಕೆ ನೆಗೆಟಿವ್​ ಕಮೆಂಟ್​ಗಳು ಬಂದಿದ್ದವು. ಆದ್ದರಿಂದ ನಿರ್ದೇಶಕ ಓಂ ರಾವತ್​ ಅವರು ಎಚ್ಚರಿಕೆ ವಹಿಸಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರು. ಅಂತಿಮವಾಗಿ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಮೇ 9ರಂದು ಸಂಜೆ 5 ಗಂಟೆಗೆ ಆನ್​ಲೈನ್​ನಲ್ಲಿ ‘ಆದಿಪುರುಷ್​’ ಟ್ರೇಲರ್​ ರಿಲೀಸ್​ ಆಗಲಿದೆ. ಇದನ್ನು ನೋಡಿದ ಸಿನಿಪ್ರಿಯರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಸಿನಿಮಾ ಮೇಲೆ ಪ್ರಭಾಸ್​ ಫ್ಯಾನ್ಸ್​ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯೂಟ್ಯೂಬ್​ನಲ್ಲಿ ‘ಆದಿಪುರುಷ್​’ ಟ್ರೇಲರ್​ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Kriti Sanon: ಸೀತೆ ಆಗಿ ಬಂದ ಕೃತಿ ಸನೋನ್​; ಹೊಸ ಪೋಸ್ಟರ್ ರಿಲೀಸ್ ಮಾಡಿದ ‘ಆದಿಪುರುಷ್’ ಟೀಂ

ಪ್ರಭಾಸ್​ ಅವರು ‘ಆದಿಪುರುಷ್​’ ಸಿನಿಮಾ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ‘ಬಾಹುಬಲಿ 2’ ಬಳಿಕ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ‘ಆದಿಪುರುಷ್​’ ಚಿತ್ರ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:55 pm, Mon, 8 May 23

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More