ಗಾಯಕ ಅದ್ನಾನ್ ಸಮಿ ಹೆಸರಲ್ಲಿದೆ ವಿಶೇಷ ದಾಖಲೆ
1995ರಲ್ಲಿ ಕೆಲ ಉರ್ದು ಹಾಡುಗಳನ್ನು ಹಾಡಿದ್ದರು. 2001ರಲ್ಲಿ ತೆರೆಕಂಡ ‘ಅಜ್ನಬೀ’ ಸಿನಿಮಾದಲ್ಲಿ ಹಾಡುವ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ನಂತರ ಬಾಲಿವುಡ್ನಲ್ಲಿ ಸಾಕಷ್ಟು ಹಿಟ್ ಹಾಡುಗಳನ್ನು ನೀಡಿದರು.

ಸಂಗೀತ ಸಂಯೋಜಕ, ಗಾಯಕ ಅದ್ನಾನ್ ಸಮಿ ಸಾಕಷ್ಟು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಕಷ್ಟು ಹಾಡುಗಳು ಅವರ ಕಂಠದಲ್ಲಿ ಮೂಡಿ ಬಂದಿದೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಧ್ವನಿಯನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ. ಅವರಿಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಒಲಿದಿವೆ. ಇದರ ಜತೆಗೆ ಅವರ ಹೆಸರಲ್ಲಿ ವಿಶೇಷ ದಾಖಲೆ ಕೂಡ ಇದೆ. ಈ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹಾಗಾದರೆ ಏನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
1995ರಲ್ಲಿ ಕೆಲ ಉರ್ದು ಹಾಡುಗಳನ್ನು ಹಾಡಿದ್ದರು. 2001ರಲ್ಲಿ ತೆರೆಕಂಡ ‘ಅಜ್ನಬೀ’ ಸಿನಿಮಾದಲ್ಲಿ ಹಾಡುವ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ನಂತರ ಬಾಲಿವುಡ್ನಲ್ಲಿ ಸಾಕಷ್ಟು ಹಿಟ್ ಹಾಡುಗಳನ್ನು ನೀಡಿದರು. ತೆಲುಗು, ತಮಿಳು ಸಿನಿಮಾಗಳನ್ನು ಕೂಡ ಅವರು ಹಾಡಿದ್ದಾರೆ. ಕನ್ನಡದ ಮೂರು ಸಿನಿಮಾಗಳ ಹಾಡಿಗೆ ಅವರು ಧ್ವನಿಯಾಗಿದ್ದಾರೆ. ಇವರ ಹೆಸರಲ್ಲಿ ಒಂದು ವಿಶೇಷ ದಾಖಲೆ ಇದೆ.
ವಿಶ್ವದಲ್ಲಿಯೇ ಅತಿ ವೇಗವಾಗಿ ಕೀಬೋರ್ಡ್ ನುಡಿಸುವ ಕಲಾವಿದ ಎನ್ನುವ ದಾಖಲೆ ಅದ್ನಾನ್ ಸಮಿ ಹೆಸರಲ್ಲಿದೆ. ಈ ದಾಖಲೆಯನ್ನು ಮುರಿಯೋಕೆ ಈವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ ಅನ್ನೊದು ವಿಶೇಷ. 2020ರ ಜನವರಿ 25ರಂದು ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಇದಲ್ಲದೆ ಇನ್ನೂ ಅನೇಕ ಅವಾರ್ಡ್ಗಳು ಅದ್ನಾನ್ ಸಮಿಗೆ ಒಲಿದಿದೆ. 2019ರ ನಂತರ ಅವರು ಯಾವುದೇ ಸಿನಿಮಾ ಹಾಡಿಗೆ ಧ್ವನಿಯಾಗಿಲ್ಲ. ಅವರಿಗೆ ಐವತ್ತು ವರ್ಷ ವಯಸ್ಸಾಗಿದೆ. ಎರಡು ಸಿನಿಮಾದಲ್ಲಿ ಅವರು ನಟಿಸಿದ್ದಾರೆ ಅನ್ನೋದು ವಿಶೇಷ.
ಸಾಕಷ್ಟು ವಾದ್ಯಗಳನ್ನು ನುಡಿಸುವ ಕಲೆ ಕೂಡ ಅದ್ನಾನ್ ಸಮಿಗೆ ಕರಗತವಾಗಿದೆ. ಪಿಯಾನೋ, ಕೀಬೋರ್ಡ್, ಗಿಟಾರ್, ಸಾಕ್ಸೋಫೋನ್, ವೈಲಿನ್, ಡ್ರಮ್ಸ್, ಎಲೆಕ್ಟ್ರಿಕ್ ಗಿಟಾರ್, ತಬಲಾ, ಸಂತೂರ್, ಸಿತಾರ್ ಮೊದಲಾದ ವಾದ್ಯಗಳನ್ನು ಅವರು ನುಡಿಸುತ್ತಾರೆ.
ಇದನ್ನೂ ಓದಿ: Kichcha Sudeep: ರವಿಚಂದ್ರನ್ ನನ್ನ ಅಣ್ಣ ಎಂದ ಕಿಚ್ಚ ಸುದೀಪ್
Samantha: ಡಿವೋರ್ಸ್ ಬಳಿಕ ಸಮಂತಾ ಗುಡ್ ನ್ಯೂಸ್; ಇಂಗ್ಲಿಷ್ ಸಿನಿಮಾ ನಿರ್ದೇಶಕನನ್ನು ತಬ್ಬಿಕೊಂಡ ಫೋಟೋ ವೈರಲ್
Published On - 6:13 pm, Sat, 27 November 21