ಕ್ಯಾನ್ಸರ್ ನಂತರ ಮತ್ತೊಂದು ಗಂಭೀರ ಕಾಯಿಲೆಗೆ ಒಳಗಾದ ನಟಿ ಹಿನಾ

ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ ಹಿನಾ ಖಾನ್ ಕ್ಯಾನ್ಸರ್ ನಂತರದ ಅನಾರೋಗ್ಯವನ್ನು ಬಹಿರಂಗಪಡಿಸಿದ್ದಾರೆ. ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ ನಟಿ ಮ್ಯೂಕೋಸಿಟಿಸ್‌ನಿಂದ ಬಳಲುತ್ತಿದ್ದಾರೆ

ಕ್ಯಾನ್ಸರ್ ನಂತರ ಮತ್ತೊಂದು ಗಂಭೀರ ಕಾಯಿಲೆಗೆ ಒಳಗಾದ ನಟಿ ಹಿನಾ
ಹಿನಾ ಖಾನ್
Edited By:

Updated on: Sep 07, 2024 | 8:00 AM

ಕಿರುತೆರೆಯ ಜನಪ್ರಿಯ ನಟಿ ಹಿನಾ ಖಾನ್ ಪ್ರಸ್ತುತ ತಮ್ಮ ಜೀವನದಲ್ಲಿ ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ನಟಿ ತನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಘೋಷಿಸಿದರು. ಸದ್ಯ ನಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿನಾ ಖಾನ್ ಸದ್ಯ ಕಿಮೊಥೆರಪಿಗೆ ಒಳಗಾಗುತ್ತಿದ್ದಾರೆ. ನಟಿ ತಮ್ಮ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅಪ್​ಡೇಟ್ ನೀಡುತ್ತಿದ್ದಾರೆ. ಈಗಂತೂ ಹೀನಾ ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿ ಮತ್ತೊಂದು ಕಾಯಿಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ ನಟಿಯ ಸ್ಥಿತಿ ಹದಗೆಟ್ಟಿದೆ.

ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ ಹಿನಾ ಖಾನ್ ಕ್ಯಾನ್ಸರ್ ನಂತರದ ಅನಾರೋಗ್ಯವನ್ನು ಬಹಿರಂಗಪಡಿಸಿದ್ದಾರೆ. ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ ನಟಿ ಮ್ಯೂಕೋಸಿಟಿಸ್‌ನಿಂದ ಬಳಲುತ್ತಿದ್ದಾರೆ. ಪೋಸ್ಟ್ ಅನ್ನು ಹಂಚಿಕೊಂಡ ನಟಿ, ‘ಒಂದು ಕಡೆ ಕೀಮೋಥೆರಪಿ ಮತ್ತು ಇನ್ನೊಂದು ಮ್ಯೂಕೋಸಿಟಿಸ್. ವೈದ್ಯರು ಮ್ಯೂಕೋಸಿಟಿಸ್‌ಗೆ ಚಿಕಿತ್ಸೆಯಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ಈ ರೋಗವನ್ನು ಎದುರಿಸಿದ್ದರೆ, ಪರಿಣಾಮಕಾರಿ ಔಷಧವನ್ನು ಹೇಳಿ. ಇದು ತುಂಬಾ ನೋವಿನ ಪ್ರಯಾಣ. ಏನನ್ನೂ ತಿನ್ನಲು ಸಾಧ್ಯವಿಲ್ಲ’ ಎಂದಿದ್ದಾರೆ ಅವರು.

ಹಿನಾ ಖಾನ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ‘ಯಾರಿಗಾದರೂ ತಿಳಿದಿದ್ದರೆ ಸೂಚಿಸಿ’ ಎಂದು ಕೇಳಿಕೊಂಡಿದ್ದಾರೆ. ‘ಶೀಘ್ರವೇ ಗುಣವಾಗಲಿ. ನಿಮಗಾಗಿ ಪ್ರಾರ್ಥಿಸುತ್ತಿದ್ದೇವೆ…’ ಎಂದು ಹೇಳಿದ್ದಾರೆ. ‘ಸರಿಯಾದ ಚಿಕಿತ್ಸೆ ಪಡೆಯಿರಿ… ತಪ್ಪು ಸಲಹೆಯು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಕಾಯಿಲೆ ಉಂಟದಾಗ ಬಾಯಲ್ಲಿ ಹುಣ್ಣುಗಳು ಏಳುತ್ತವೆ.

‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿ ಮೂಲಕ ಹಿನಾ ಖಾನ್ ಜೀವನದಲ್ಲಿ ದೊಡ್ಡ ಗೆಲುವು ಕಂಡರು. ಅಭಿಮಾನಿಗಳು ಕೂಡ ಹೀನಾಗೆ ಸಾಕಷ್ಟು ಪ್ರೀತಿಯನ್ನು ನೀಡಿದರು. ಆ ನಂತರ ‘ಕಸೌತಿ ಜಿಂದಗಿ ಕಿ 2′ ಧಾರಾವಾಹಿ ಹಿನಾ ಜನಪ್ರಿಯತೆಯನ್ನು ಹೆಚ್ಚಿಸಿತು. ಇದರ ಜೊತೆಗೆ ಹಿನಾ ಹಲವಾರು ಧಾರಾವಾಹಿಗಳಲ್ಲಿ ಅತಿಥಿ ತಾರೆಯಾಗಿಯೂ ನಟಿಸಿದ್ದಾರೆ. ಹಿನಾ ‘ಚಾಂದ್ ಚುಪಾ ಬಾದಲ್ ಮೇ’ ಮತ್ತು ‘ಸಪ್ನಾ ಬಾಬುಲ್ ಕಾ’ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡರು.

ಇದನ್ನೂ ಓದಿ: ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವ ಹಿನಾ ಖಾನ್ ಇಟ್ಟ ಕೋರಿಕೆ ಏನು?

ಹಿನಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯಳಾಗಿದ್ದಾರೆ. ಕ್ಯಾನ್ಸರ್ ಮಧ್ಯೆಯೂ ಅವರು ಒಂದು ಆ್ಯಡ್​ ಶೂಟ್​ಗೆ ತೆರಳಿದ್ದರು. ಈ ವೇಳೆ ಎದೆ ಭಾಗದಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ವಿಚಾರವನ್ನು ರಿವೀಲ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us