ಜರ್ಮನಿಗೆ ಹಾರಿದ ಮಹೇಶ್ ಬಾಬು; ಟ್ರಿಪ್ ಅಲ್ಲ, ಇದೆ ಬೇರೆಯದೇ ವಿಷಯ
ಮಹೇಶ್ ಬಾಬು ಅವರು ಮುಂದಿನ 3 ದಿನಗಳ ಕಾಲ ಜರ್ಮನಿಯಲ್ಲೇ ಇರಲಿದ್ದಾರೆ. ಹೊಸ ಸಿನಿಮಾ ಕೆಲಸಗಳು ಶೀಘ್ರವೇ ಆರಂಭ ಆಗುವ ಸಾಧ್ಯತೆ ಇದೆ. 2025ರ ವೇಳೆಗೆ ಈ ಚಿತ್ರ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸದ್ಯ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ.

‘ಗುಂಟೂರು ಖಾರಂ’ (Guntur Kaaram) ಸಿನಿಮಾ ಗೆಲುವಿನ ಬೆನ್ನಲ್ಲೇ ನಟ ಮಹೇಶ್ ಬಾಬು ಅವರು ಜರ್ಮನಿಗೆ ತೆರಳಿದ್ದಾರೆ. ಹಾಗಂತ ಇದು ಫ್ಯಾಮಿಲಿ ಟ್ರಿಪ್ ಅಲ್ಲ. ಅವರು ಏಕಾಂಗಿಯಾಗಿ ಜರ್ಮನಿಗೆ ಪ್ರವಾಸ ಮಾಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ. ಮಹೇಶ್ ಬಾಬು (Mahesh Babu) ಅವರು ಜರ್ಮನಿಗೆ ಒಬ್ಬಂಟಿಯಾಗಿ ತೆರಳುವುದಕ್ಕೂ ಒಂದು ಕಾರಣ ಇದೆಯಂತೆ. ಅವರು ವಿದೇಶಕ್ಕೆ ಹಾರಲು ಕಾರಣ ಆಗಿರೋದು ಎಸ್ಎಸ್ ರಾಜಮೌಳಿ (SS Rajamouli) ನಿರ್ದೇಶನ ಮಾಡುತ್ತಿರುವ ಸಿನಿಮಾ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಪ್ರತಿ ಸಿನಿಮಾ ರಿಲೀಸ್ ಆದ ಬಳಿಕ ಮಹೇಶ್ ಬಾಬು ಬ್ರೇಕ್ ಪಡೆದುಕೊಳ್ಳುತ್ತಾರೆ. ಇದು ಅವರು ಮೊದಲಿನಿಂದಲೂ ರೂಢಿಸಿಕೊಂಡು ಬಂದ ಪದ್ಧತಿ. ಈ ರೀತಿ ಟ್ರಿಪ್ ತೆರಳುವಾಗ ಅವರು ಒಬ್ಬರೇ ಹೋಗುವುದಿಲ್ಲ. ಪತ್ನಿ ನಮ್ರತಾ ಶಿರೋಡ್ಕರ್, ಮಗಳು ಸಿತಾರಾ ಹಾಗೂ ಮಗ ಗೌತಮ್ ಕೂಡ ಮಹೇಶ್ ಬಾಬುಗೆ ಜೊತೆಯಾಗುತ್ತಾರೆ. ಆದರೆ, ಈ ಬಾರಿ ಅವರು ಒಂಟಿಯಾಗಿ ತೆರಳಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾಗಾಗಿ ಅಭಿಮಾನಿಗಳು ಕಾದಿದ್ದಾರೆ. ಈ ಚಿತ್ರದ ಕೆಲಸಕ್ಕಾಗಿಯೇ ಅವರು ಜರ್ಮನಿಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ತಂತ್ರಜ್ಞಾನದಲ್ಲಿ ಜರ್ಮನಿಯವರು ಮುಂದಿದ್ದಾರೆ. ಅಲ್ಲಿರುವ ಕೆಲವು ಸಂಸ್ಥೆಗಳ ಜೊತೆ ಮಹೇಶ್ ಬಾಬು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ತಂಬಾಕಿನಿಂದ ಮಾಡಿದ್ದಲ್ಲ, ಅದು ಆಯುರ್ವೇದಿಕ್ ಬೀಡಿ’; ಅಭಿಮಾನಿಗಳಿಗೆ ತಿಳಿ ಹೇಳಿದ ಮಹೇಶ್ ಬಾಬು
ರಾಜಮೌಳಿ ಅವರ ವಿಷನ್ ಬೇರೆಯದೇ ರೀತಿಯಲ್ಲಿ ಇರುತ್ತದೆ. ಅದಕ್ಕೆ ಜೀವ ತುಂಬಲು ಒಳ್ಳೆಯ ಟೀಂನ ಅಗತ್ಯವಿರುತ್ತದೆ. ಹೀಗಾಗಿ, ಸೂಕ್ತ ತಂಡವನ್ನು ಕರೆದುತರಲು ಮಹೇಶ್ ಬಾಬು ಮುಂದಾಗಿದ್ದಾರೆ. ಮುಂದಿನ 3 ದಿನಗಳ ಕಾಲ ಅವರು ಜರ್ಮನಿಯಲ್ಲೇ ಇರಲಿದ್ದಾರೆ. ಈ ಸಿನಿಮಾ ಕೆಲಸಗಳು ಶೀಘ್ರವೇ ಆರಂಭ ಆಗುವ ಸಾಧ್ಯತೆ ಇದೆ. 2025ರ ವೇಳೆಗೆ ಈ ಚಿತ್ರ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸದ್ಯ ರಾಜಮೌಳಿ ಅವರು ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
‘ಗುಂಟೂರು ಖಾರಂ’ ಯಶಸ್ಸು:
ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಜನವರಿ 12ರಂದು ತೆರೆಗೆ ಬಂತು. ಈ ಸಿನಿಮಾ ವಿಮರ್ಶೆಯಲ್ಲಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಬುಕ್ ಮೈ ಶೋನಲ್ಲೂ ಈ ಚಿತ್ರ ಕಡಿಮೆ ರೇಟಿಂಗ್ ಪಡೆದಿದೆ. ಆದಾಗ್ಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ 200 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅವರು ಗೆದ್ದು ಬೀಗಿದ್ದಾರೆ. ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡದ ಶ್ರೀಲೀಲಾ ಮಹೇಶ್ ಬಾಬುಗೆ ಜೊತೆಯಾಗಿದ್ದಾರೆ. ಇತ್ತೀಚೆಗೆ ಸಿನಿಮಾದ ಸಕ್ಸಸ್ ಪಾರ್ಟಿ ನಡೆದಿದೆ. ಸಂಕ್ರಾಂತಿ ಸಂದರ್ಭದಲ್ಲಿ ‘ಹನುಮಾನ್’, ‘ನಾ ಸಾಮಿ ರಂಗ’ ಮೊದಲಾದ ಸಿನಿಮಾಗಳು ರಿಲೀಸ್ ಆಗಿವೆ. ಇವುಗಳ ಜೊತೆ ಈ ಸಿನಿಮಾ ಸ್ಪರ್ಧೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



