ಕೆಲಸ ಮಾಡುವುದು ಬಿಟ್ಟು ಬೇರೆ ಯಾವುದೇ ಆಯ್ಕೆ ಉಳಿದಿಲ್ಲ; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್

ಪ್ರಭಾಸ್​ ನಟನೆಯ ಸಲಾರ್​ ಸಿನಿಮಾದಲ್ಲಿ ಶ್ರುತಿ ಹಾಸನ್​ ನಾಯಕಿ. ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಜರ್ನಲಿಸ್ಟ್​ ಆಗಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ.  

ಕೆಲಸ ಮಾಡುವುದು ಬಿಟ್ಟು ಬೇರೆ ಯಾವುದೇ ಆಯ್ಕೆ ಉಳಿದಿಲ್ಲ; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್
ಶೃತಿ ಹಾಸನ್

Updated on: May 10, 2021 | 6:30 PM

ಸ್ಟಾರ್​ ನಟರ ಮಕ್ಕಳಾದರೆ ಕೆರಿಯರ್​ ರೂಪಿಸಿಕೊಳ್ಳೋದು ಸುಲಭವಾಗುತ್ತದೆ ಎಂಬುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ವಿಚಾರ. ಆದರೆ, ಇದರ ಜತೆಗೆ ಕೆಲ ಸಣ್ಣ ಸಣ್ಣ ವಿಚಾರಕ್ಕೂ ಟ್ರೋಲ್​ ಆಗಬೇಕಾಗುತ್ತದೆ. ತಂದೆಯ ಹಣವನ್ನು ಇವರು ಉಡಾಯಿಸುತ್ತಿದ್ದಾರೆ ಎನ್ನುವ ಮಾತನ್ನು ಕೇಳಬೇಕಾಗುತ್ತದೆ. ಶ್ರುತಿ ಹಾಸನ್​ ಕೂಡ ಇದಕ್ಕೆ ಹೊರತಾಗಿಲ್ಲ. ಕಮಲ್​ ಹಾಸನ್​ ಮಗಳಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಈಗ ಅವರು ಮಾಧ್ಯಮದ ಜತೆ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ಹೇಳಿಕೊಂಡಿದ್ದಾರೆ.

‘ನನಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ, ಶೂಟಿಂಗ್​ನಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶೂಟಿಂಗ್​​ ಮಾಡುವಾಗ ಮಾಸ್ಕ್​ ಇಲ್ಲದೆ ಕಾಣಿಸಿಕೊಳ್ಳುವುದಕ್ಕೆ ತುಂಬಾನೇ ಭಯವಾಗುತ್ತದೆ. ಆದಾಗ್ಯೂ ಒಪ್ಪಿಕೊಂಡ ಪ್ರಾಜೆಕ್ಟ್​ಗಳನ್ನು ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಖರ್ಚುಗಳನ್ನು ನಿಭಾಯಿಸಲು ಕೆಲಸ ಮಾಡುವುದೊಂದೇ ಆಯ್ಕೆ,’ ಎಂದಿದ್ದಾರೆ ಶ್ರುತಿ.

‘ಶ್ರುತಿ ಹಾಸನ್​ ಸ್ವಾವಲಂಬಿ ಎಂಬುದನ್ನು ಒತ್ತಿ ಹೇಳಿದ್ದಾರೆ. ನಾನು ಇಂಡಿಪೆಂಡೆಂಟ್​ ಮಹಿಳೆ. ನನ್ನ ತಂದೆ ನಟ-ರಾಜಕಾರಣಿ ಹೌದು. ಆದರೆ, ನನ್ನ ಬಿಲ್​ಗಳನ್ನು ನಾನೇ ಪೇ ಮಾಡುತ್ತೇನೆ. ನನ್ನ ತಂದೆ ತಾಯಿ ಬಳಿ ಯಾವಾಗಲೂ ಆರ್ಥಿಕ ಸಹಾಯ ಕೇಳಿಲ್ಲ’ ಎಂದಿದ್ದಾರೆ ಅವರು.

‘ತಪ್ಪಿರಲಿ, ಸರಿ ಇರಲಿ ನಾನೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. 2020ರ ಆರಂಭದಲ್ಲಿ ನಾನು ಮನೆ ಒಂದನ್ನು ಖರೀದಿಸಿದ್ದೇನೆ. ನಂತರ ಕೊರೊನಾ ಆರಂಭವಾಯಿತು. ಸಿನಿಮಾ ಕೆಲಸಗಳು ಬಂದ್​ ಆದವು. ಈಗ ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗಲೇ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ, ಹಣಕಾಸಿನ ತೊಂದರೆ ಇದೆ’ ಎಂದು ಅವರು ಹೇಳಿದ್ದಾರೆ.

‘ಹಣಕಾಸಿನ ತೊಂದರೆ ಇದೆ ಎಂದಾಗೆಲ್ಲ ಒಂದಷ್ಟು ವಿಚಾರಗಳು ತಲೆಗೆ ಬರುತ್ತವೆ. ನಾನು ಕೇವಲ ಇಎಂಐ ಕಟ್ಟಲು ಒದ್ದಾಡುತ್ತಿದ್ದೇನೆ ಅಷ್ಟೆ. ಅನೇಕರು ಆಹಾರಕ್ಕಾಗಿ, ಇನ್ನೂ ಕೆಲವರು ಔಷಧ ತೆಗೆದುಕೊಳ್ಳಲ ಹಣ ಇಲ್ಲದೆ ಒದ್ದಾಡುತ್ತಿದ್ದಾರೆ. ಅವರನ್ನು ನೆನಪಿಸಿಕೊಂಡಾಗ ನನ್ನ ಲೈಫ್​ ಅದ್ಭುತವಾಗಿದೆ ಎನಿಸುತ್ತದೆ’ ಎಂಬುದು ಶ್ರುತಿ ಮಾತು.

ಪ್ರಭಾಸ್​ ನಟನೆಯ ಸಲಾರ್​ ಸಿನಿಮಾದಲ್ಲಿ ಶ್ರುತಿ ಹಾಸನ್​ ನಾಯಕಿ. ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಜರ್ನಲಿಸ್ಟ್​ ಆಗಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಮಲ್​ ಹಾಸನ್​ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್​ ಎಂದ ಶ್ರುತಿ ಹಾಸನ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us