AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ’ ಮಾಡಲು ಹೋಗಿ 100 ಕೋಟಿ ಕಳೆದುಕೊಂಡ ನೆಟ್​ಫ್ಲಿಕ್ಸ್​ಗೆ ಮತ್ತೊಂದು ಶಾಕ್​

‘ಬಾಹುಬಲಿ: ದಿ ಬಿಗಿನಿಂಗ್’​ ಮತ್ತು ‘ಬಾಹುಬಲಿ: ದಿ ಕನ್​ಕ್ಲೂಷನ್​’ ಸಿನಿಮಾಗಳ ಪ್ರೀಕ್ವೆಲ್​ ಮಾಡಲು ಈ ಹಿಂದೆ ಪ್ಲ್ಯಾನ್​ ಮಾಡಲಾಗಿತ್ತು. ಅದಕ್ಕೆ ‘ಬಾಹುಬಲಿ: ಬಿಫೋರ್​ ದಿ ಬಿಗಿನಿಂಗ್​’ ಎಂದು ಹೆಸರಿಡಲಾಗಿತ್ತು.

'ಬಾಹುಬಲಿ' ಮಾಡಲು ಹೋಗಿ 100 ಕೋಟಿ ಕಳೆದುಕೊಂಡ ನೆಟ್​ಫ್ಲಿಕ್ಸ್​ಗೆ ಮತ್ತೊಂದು ಶಾಕ್​
ಬಾಹುಬಲಿ - ನೆಟ್​ಫ್ಲಿಕ್ಸ್​ ವೆಬ್​ ಸಿರೀಸ್​
ರಾಜೇಶ್ ದುಗ್ಗುಮನೆ
|

Updated on:Mar 24, 2021 | 7:31 PM

Share

ಎಸ್​.ಎಸ್​. ರಾಜಮೌಳಿ ಆ್ಯಕ್ಷನ್​ ಕಟ್​ ಹೇಳಿದ್ದ ಬಾಹುಬಲಿ ಸಿನಿಮಾ ಎರಡು ಪಾರ್ಟ್​ಗಳಲ್ಲಿ ಮೂಡಿಬಂದಿತ್ತು. ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದವು. ಈಗ ಮೊದಲ ಪಾರ್ಟ್​ಗಿಂತಲೂ ಮುಂಚಿನ ಕಥೆ ಏನು ಎಂಬುದನ್ನು ತೋರಿಸಲು ನೆಟ್​​ಫ್ಲಿಕ್ಸ್​ ಹೊಸ ಯೋಜನೆ ರೂಪಿಸಿತ್ತು. ಆದರೆ, ಈ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟಿದ್ದ ನೆಟ್​ಫ್ಲಿಕ್ಸ್​ ಈಗ ಎಲ್ಲವನ್ನೂ ಮೊದಲಿನಿಂದ ಶೂಟ್​ ಮಾಡಲು ಮುಂದಾಗಿದೆ. ಹೀಗಿರುವಾಗಲೇ ತಂಡಕ್ಕೆ ಮತ್ತೊಂದು ಶಾಕ್​ ಎದುರಾಗಿದೆ. ‘ಬಾಹುಬಲಿ: ದಿ ಬಿಗಿನಿಂಗ್’​ ಮತ್ತು ‘ಬಾಹುಬಲಿ: ದಿ ಕನ್​ಕ್ಲೂಷನ್​’ ಸಿನಿಮಾಗಳ ಪ್ರೀಕ್ವೆಲ್​ ಮಾಡಲು ಈ ಹಿಂದೆ ಪ್ಲ್ಯಾನ್​ ಮಾಡಲಾಗಿತ್ತು. ಅದಕ್ಕೆ ‘ಬಾಹುಬಲಿ: ಬಿಫೋರ್​ ದಿ ಬಿಗಿನಿಂಗ್​’ ಎಂದು ಹೆಸರಿಡಲಾಗಿತ್ತು. 9 ಎಪಿಸೋಡ್​ಗಳ ಈ ವೆಬ್​ಸರಣಿಯಲ್ಲಿ ರಾಜಮಾತೆ ಶಿವಗಾಮಿಯ ಕಥೆ ಹೇಳುವುದು ಇದರ ಉದ್ದೇಶವಾಗಿತ್ತು. ಶಿವಗಾಮಿ ಪಾತ್ರದಲ್ಲಿ ಮೃಣಾಲ್​ ಠಾಕೂರ್ ಕಾಣಿಸಿಕೊಂಡಿದ್ದರು.

ಅಚ್ಚರಿ ಎಂದರೆ, ಶೇ.70 ಭಾಗದ ಶೂಟ್​ ಪೂರ್ಣಗೊಂಡಿತ್ತು. ಇದಕ್ಕಾಗಿ 100 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ, ಇದು ನೆಟ್​ಫ್ಲಿಕ್ಸ್​ನವರಿಗೆ ಅಷ್ಟಾಗಿ ಖುಷಿ ನೀಡಿಲ್ಲ. ಹೀಗಾಗಿ, 200 ಕೋಟಿ ಬಜೆಟ್​ನಲ್ಲಿ ಇದನ್ನು ಮೊದಲಿನಿಂದ ಶೂಟ್​ ಮಾಡುವ ಆಲೋಚನೆ ಹಾಕಿಕೊಳ್ಳಲಾಗಿದೆ. ಆದರೆ, ಮೃಣಾಲ್​ ಠಾಕೂರ್ ಬಳಿ ಡೇಟ್ಸ್​ ಇಲ್ಲ. ಮತ್ತೆ ಮೊದಲಿನಿಂದ ಶೂಟ್​ ಮಾಡುವುದಾದರೆ ನಾನು ನಟಿಸಲು ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇಡೀ ಚಿತ್ರದಲ್ಲಿ ಕಥೆ ಹೈಲೈಟ್​ ಆಗೋದೆ ಶಿವಗಾಮಿಯ ಮೇಲೆ. ಹೀಗಿರುವಾಗ, ಮುಖ್ಯ ಪಾತ್ರಧಾರಿಯೇ ಕೈ ಕೊಟ್ಟಿರೋದು ತಂಡಕ್ಕೆ ತಲೆನೋವು ತಂದಿದೆ.

ಆದರೆ, ನೆಟ್​ಫ್ಲಿಕ್ಸ್​ ಸುಮ್ಮನೆ ಕೂತಿಲ್ಲ. ಈ ವೆಬ್​ಸೀರಿಸ್​ಗೆ ಸೂಟ್​ ಎನಿಸುವು ಮತ್ತೊಂದು ನಾಯಕಿಯನ್ನು ಕರೆ ತಂದಿದ್ದಾರೆ. ಲವ್​ ಆಜ್​ ಕಲ್​ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ವಮಿಕಾ ಗಬ್ಬಿ ಅವರನ್ನು ಶಿವಗಾಮಿ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇವರು ಈ ಪಾತ್ರಕ್ಕೆ ಸೂಟ್​ ಆಗಲಿದ್ದಾರೆ ಎನ್ನುವ ಕಾರಣಕ್ಕೆ ಇವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

Wamiqa Gabbi

ವಮಿಕಾ

ಇದನ್ನೂ ಓದಿ: ‘ಬಾಹುಬಲಿ’ ನಂಬಿ 100 ಕೋಟಿ ರೂ. ಕಳೆದುಕೊಂಡ ನೆಟ್​ಫ್ಲಿಕ್ಸ್​! 200 ಕೋಟಿಯಲ್ಲಿ ಈಗ ಇನ್ನೊಂದು ಪ್ಲ್ಯಾನ್​

Published On - 6:44 pm, Wed, 24 March 21