ರಣ್ವೀರ್ ಸಿಂಗ್ ಕೈಕೊಟ್ಟ ಬಳಿಕ ‘ಡಾನ್ 3’ಗೆ ಮತ್ತೊಬ್ಬ ಸ್ಟಾರ್

Ranveer Singh-Don 3: ‘ಡಾನ್ 3’ ಸಿನಿಮಾಕ್ಕೂ ಶಾರುಖ್ ಖಾನ್ ಅವರನ್ನೇ ಫರ್ಹಾನ್ ಅಖ್ತರ್ ಆಯ್ಕೆ ಮಾಡುತ್ತಾರೆ ಎಂದಾಗಿತ್ತು. ಆದರೆ ಫರ್ಹಾನ್ ಅಖ್ತರ್ ರಣ್ವೀರ್ ಸಿಂಗ್ ಅವರನ್ನು ನಾಯಕನನ್ನಾಗಿ ಘೊಷಿಸಿದರು. ಆದರೆ ‘ಧುರಂಧರ್’ ಸಿನಿಮಾ ಗೆದ್ದು, ರಣ್ವೀರ್ ಅವರು ಫರ್ಹಾನ್ ಅಖ್ತರ್ ಕೈಕೊಟ್ಟ ಬಳಿಕ, ಇದೀಗ ನಿರ್ದೇಶಕ ಶಾರುಖ್ ಖಾನ್ ಬಳಿ ಹೋಗಲಾದೆ ಬಾಲಿವುಡ್​​ನ ಮತ್ತೊಬ್ಬ ಸ್ಟಾರ್ ನಟನ ಮನೆ ಬಾಗಿಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ರಣ್ವೀರ್ ಸಿಂಗ್ ಕೈಕೊಟ್ಟ ಬಳಿಕ ‘ಡಾನ್ 3’ಗೆ ಮತ್ತೊಬ್ಬ ಸ್ಟಾರ್
Ranveer Don 3

Updated on: Jun 05, 2026 | 7:55 PM

ಫರ್ಹಾನ್ ಅಖ್ತರ್ ನಿರ್ದೇಶನದ ಮೊದಲೆರಡು ‘ಡಾನ್’ (Don) ಸಿನಿಮಾಗಳಲ್ಲಿ ಶಾರುಖ್ ಖಾನ್ (Shah Rukh Khan) ನಾಯಕನಾಗಿ ನಟಿಸಿದ್ದರು. ‘ಡಾನ್ 3’ ಸಿನಿಮಾಕ್ಕೂ ಶಾರುಖ್ ಖಾನ್ ಅವರನ್ನೇ ಫರ್ಹಾನ್ ಅಖ್ತರ್ ಆಯ್ಕೆ ಮಾಡುತ್ತಾರೆ ಎಂದಾಗಿತ್ತು. ಆದರೆ ಫರ್ಹಾನ್ ಅಖ್ತರ್ ರಣ್ವೀರ್ ಸಿಂಗ್ ಅವರನ್ನು ನಾಯಕನನ್ನಾಗಿ ಘೊಷಿಸಿದರು. ಆದರೆ ‘ಧುರಂಧರ್’ ಸಿನಿಮಾ ಗೆದ್ದು, ರಣ್ವೀರ್ ಅವರು ಫರ್ಹಾನ್ ಅಖ್ತರ್ ಕೈಕೊಟ್ಟ ಬಳಿಕ, ಇದೀಗ ನಿರ್ದೇಶಕ ಶಾರುಖ್ ಖಾನ್ ಬಳಿ ಹೋಗಲಾದೆ ಬಾಲಿವುಡ್​​ನ ಮತ್ತೊಬ್ಬ ಸ್ಟಾರ್ ನಟನ ಮನೆ ಬಾಗಿಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಅಸಲಿಗೆ ರಣವೀರ್ ಸಿಂಗ್ ಅವರನ್ನು ಹೊಸ ಡಾನ್ ಆಗಿ ಘೋಷಿಸಿದಾಗಿನಿಂದಲೂ ಚಿತ್ರದ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ‘ಡಾನ್ 3’ಗೆ ತಮ್ಮನ್ನು ಪರಿಗಣಿಸದ ಕಾರಣ ಶಾರುಖ್ ಖಾನ್ ಸಹ ಫರ್ಹಾನ್ ಅಖ್ತರ್ ವಿರುದ್ಧ ಮುನಿಸಿಕೊಂಡಿದ್ದಾರಂತೆ. ಇದೇ ಕಾರಣಕ್ಕೆ ಫರ್ಹಾನ್ ಅಖ್ತರ್, ‘ಡಾನ್ 3’ ಕತೆ ತೆಗೆದುಕೊಂಡು ತಮ್ಮ ಹಳೆಯ ಗೆಳೆಯ ಹೃತಿಕ್ ರೋಷನ್ ಮನೆಗೆ ಹೋಗಿದ್ದಾರೆ. ಹೃತಿಕ್ ಅವರಿಗೂ ಸಹ ಕತೆ ಇಷ್ಟವಾಗಿದೆ ಎನ್ನಲಾಗುತ್ತಿದೆ. ಹೃತಿಕ್ ರೋಷನ್ ಅವರು ಫರಾನ್ ಅಖ್ತರ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಮಾಡಿರುವ ಒಂದು ಕಾಮೆಂಟ್ ಇಂಟರ್ನೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ. ಹೃತಿಕ್ ರೋಷನ್ ಅವರು ಈ ಆಕ್ಷನ್ ಫ್ರಾಂಚೈಸಿಯಲ್ಲಿ ರಣವೀರ್ ಸಿಂಗ್ ಅವರ ಸ್ಥಾನವನ್ನು ಪಡೆಯಲು ಸ್ವತಃ ತಾವೇ ಪಿಚ್ ಮಾಡುತ್ತಿದ್ದಾರೆಯೇ ಎಂದು ನೆಟ್ಟಿಗರು ಊಹಿಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:‘ಡಾನ್ 3’ ಮಾತ್ರವಲ್ಲ, ನಿಂತು ಹೋದ ರಣ್ವೀರ್ ಸಿಂಗ್ ಸಿನಿಮಾಗಳಿವು

ನಿರ್ದೇಶಕ ಮತ್ತು ನಟ ಫರಾನ್ ಅಖ್ತರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾವಿರುವ ಹೊಸದೊಂದು ಫೋಟೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಹೃತಿಕ್ ರೋಷನ್, ‘ಫರ್ಹಾನ್, ಆ ಲುಕ್ ಅದ್ಭುತವಾಗಿದೆ. ನಾವು ಶೀಘ್ರದಲ್ಲೇ ಏನಾದರೂ ಮಾಡಬೇಕಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಸಾಮಾನ್ಯ ಕಾಮೆಂಟ್ ತಕ್ಷಣವೇ ಅಭಿಮಾನಿಗಳ ಗಮನ ಸೆಳೆದಿದ್ದು, ಹೃತಿಕ್ ಅವರು ‘ಡಾನ್ 3’ ಚಿತ್ರದ ರೇಸ್‌ಗೆ ಪ್ರವೇಶಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಸಲಿಗೆ ಫರ್ಹಾನ್ ಅಖ್ತರ್ ಮೊದಲ ‘ಡಾನ್’ ಕತೆ ಬರೆಯುವ ಮುಂಚೆ ಹೃತಿಕ್ ಅವರೇ ಅದರಲ್ಲಿ ನಟಿಸಬೇಕಿತ್ತು. ಆದರೆ ಕತೆ ಬರೆಯುವಾಗ ಫರ್ಹಾನ್ ಖಾನ್​​ಗೆ ಈ ಕತೆಗೆ ಶಾರುಖ್ ಹೆಚ್ಚು ಸೂಕ್ತ ಎನಿಸಿದರಂತೆ. ಹೃತಿಕ್ ಅವರು ಸಹ ಫರ್ಹಾನ್ ಅವರ ಅಭಿಪ್ರಾಯಕ್ಕೆ ಗೌರವ ನೀಡಿದ್ದರಂತೆ ಮಾತ್ರವಲ್ಲದೆ, ‘ಡಾನ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಸಹ ನಟಿಸಿದ್ದರು. ಆದರೆ ಈಗ ‘ಡಾನ್ 3’ ಮತ್ತೆ ಹೃತಿಕ್ ರೋಷನ್ ಅವರಿಗೇ ಒಲಿದು ಬಂದಿದೆ.

ಹೃತಿಕ್ ರೋಷನ್ ಪ್ರಸ್ತುತ ‘ಕ್ರಿಶ್’ ಸರಣಿಯ ಹೊಸ ಸಿನಿಮಾದ ಪ್ರೀ ಪ್ರೊಡಕ್ಷನ್​​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಖುದ್ದು ಹೃತಿಕ್ ಅವರೇ ನಿರ್ದೇಶನ ಮಾಡಲಿದ್ದಾರೆ. ಇದರ ಜೊತೆಗೆ ‘ವಾರ್ 3’ ಹಾಗೂ ಸಿದ್ಧಾರ್ಥ್ ಆನಂದ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us