AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್, ಅಕ್ಷಯ್ ಕುಮಾರ್ ನನಗೆ ಎಚ್ಚರಿಕೆ ನೀಡಿದ್ದರು: ಹನಿ ಸಿಂಗ್

Yo Yo Honey Singh: ಹನಿಸಿಂಗ್ ತಮ್ಮ ಹಾಡುಗಳಲ್ಲಿ ಡ್ರಗ್ಸ್ ಬಳಕೆಯನ್ನು ಗ್ಲಾಮರಸೈಸ್ ಮಾಡಿ ತೋರಿಸುತ್ತಾರೆ ಈಗ ಅವರೇ ಮಾದಕ ವಸ್ತು ವಿರುದ್ಧ ಜಾಗೃತಿ ರಾಯಭಾರಿ ಆಗಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದಾರೆ. ಇದೀಗ ಹನಿಸಿಂಗ್, ತಾವು ಖುದ್ದು ಮಾದಕ ವ್ಯಸನಿ ಆಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಆ ಸಮಯದಲ್ಲಿ ಕೆಲ ಸ್ಟಾರ್ ನಟರು ತಮಗೆ ಎಚ್ಚರಿಕೆ ನೀಡಿದ್ದರು ಎಂದು ಸಹ ಹೇಳಿದ್ದಾರೆ.

ಶಾರುಖ್ ಖಾನ್, ಅಕ್ಷಯ್ ಕುಮಾರ್ ನನಗೆ ಎಚ್ಚರಿಕೆ ನೀಡಿದ್ದರು: ಹನಿ ಸಿಂಗ್
Honey Singh Srk
ಮಂಜುನಾಥ ಸಿ.
|

Updated on: May 28, 2026 | 12:26 PM

Share

ಭಾರತದ ಸ್ಟಾರ್ ರ್ಯಾಪ್ ಗಾಯಕ ಹನಿ ಸಿಂಗ್ (Honey Singh) ಇತ್ತೀಚೆಗಷ್ಟೆ ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ತರುಣ್ ಚಾಗ್ ಅವರನ್ನು ಭೇಟಿ ಆಗಿದ್ದರು. ಈ ವೇಳೆ ಅವರು ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಯ್ತು. ಖುದ್ದು ಹನಿಸಿಂಗ್ ತಮ್ಮ ಹಾಡುಗಳಲ್ಲಿ ಡ್ರಗ್ಸ್ ಬಳಕೆಯನ್ನು ಗ್ಲಾಮರಸೈಸ್ ಮಾಡಿ ತೋರಿಸುತ್ತಾರೆ ಈಗ ಅವರೇ ಮಾದಕ ವಸ್ತು ವಿರುದ್ಧ ಜಾಗೃತಿ ರಾಯಭಾರಿ ಆಗಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದಾರೆ. ಇದೀಗ ಹನಿಸಿಂಗ್, ತಾವು ಖುದ್ದು ಮಾದಕ ವ್ಯಸನಿ ಆಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಆ ಸಮಯದಲ್ಲಿ ಕೆಲ ಸ್ಟಾರ್ ನಟರು ತಮಗೆ ಎಚ್ಚರಿಕೆ ನೀಡಿದ್ದರು ಎಂದು ಸಹ ಹೇಳಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಹನಿ ಸಿಂಗ್, ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ತಮಗೆ ಡ್ರಗ್ಸ್ ಬಗ್ಗೆ ಎಚ್ಚರಿಕೆ ನೀಡಿದ್ದ ದಿನಗಳನ್ನು ನೆನಪಿಸಿಕೊಂಡರು. 2011 ಮತ್ತು 2014 ರ ನಡುವೆ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ, ಯಶಸ್ಸು, ಹಣ ವಿಪರೀತ ಬಂದಿತ್ತು. ಅದು ನನ್ನ ತಲೆಗೆ ಹತ್ತಿತ್ತು ಆ ಸಮಯದಲ್ಲಿ ನಾನು ಮಾದಕ ದ್ರವ್ಯ ವ್ಯಸನದಲ್ಲಿ ತಾವು ಸಂಪೂರ್ಣವಾಗಿ ಕಳೆದುಹೋಗಿದ್ದೆ ಎಂದು ಹನಿ ಸಿಂಗ್ ಹೇಳಿಕೊಂಡಿದ್ದಾರೆ.

‘ಆ ಸಮಯದಲ್ಲಿ ನಾನು ಸಂತೋಷವಾಗಿರಲಿಲ್ಲ. 2013 ಮತ್ತು 2014 ರಲ್ಲಿ ನಾನು ಯಶಸ್ಸಿನ ಉತ್ತುಂಗದಲ್ಲಿದ್ದೆ. ನನಗೆ ಪ್ರಜ್ಞೆಯೇ ಇರಲಿಲ್ಲ. ಆ ಸಮಯದಲ್ಲಿ ನನ್ನ ಸಿದ್ಧಾಂತವೇ ಬೇರೆಯಾಗಿತ್ತು. ನನಗೆ ಯಶಸ್ಸು ಸಿಕ್ಕಾಗ, ನಾನು ನಡೆಯುವ ರೀತಿ, ಮಾತನಾಡುವ ರೀತಿ ಬದಲಾಯಿತು ಮತ್ತು ನಾನು ಯಾರನ್ನೂ ಗೌರವಿಸುತ್ತಿರಲಿಲ್ಲ. ನಾನು ಮಹಾನ್ ಎಂಬ ಭ್ರಮೆ ಮೂಡಿತ್ತು. ಅಷ್ಟೇ ಅಲ್ಲ, ನನ್ನನ್ನು ನಾನೇ ದೇವರು ಎಂದು ಕರೆದುಕೊಳ್ಳುತ್ತಿದ್ದೆ. ಆ ಸಮಯದಲ್ಲಿ ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ. ರಾಕ್ಷಸೀಯವಾಗಿ ವರ್ತಿಸುತ್ತಿದ್ದೆ’ ಎಂದಿದ್ದಾರೆ ಹನಿ ಸಿಂಗ್.

ಇದನ್ನೂ ಓದಿ:ಮಗನ ಸಿನಿಮಾಕ್ಕಿದ್ದ ಸಮಸ್ಯೆ ಪರಿಹರಿಸಿದ ಮೆಗಾಸ್ಟಾರ್ ಚಿರಂಜೀವಿ

ಆ ಸಮಯದಲ್ಲಿ ಬಾಲಿವುಡ್​​ ಸ್ಟಾರ್ ನಟರುಗಳಾದ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದೆ. ಮನೊರಂಜನಾ ಕ್ಷೇತ್ರದಿಂದ ನಾನು ಹೀಗಾದೆ ಎಂದು ಒಪ್ಪಲಾರೆ, ಆದರೆ ಯಶಸ್ಸು ನನ್ನ ತಲೆಗೇರಿತ್ತು. ಆ ಸಮಯದಲ್ಲಿ ವಿಶೇಷವಾಗಿ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ನನಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರು. ಶಾರುಖ್ ಖಾನ್ ನನಗೆ ಹಲವು ಬಾರಿ ಹೇಳಿದ್ದರು, ‘ಇದು ನಿನ್ನನ್ನು ಹಾಳು ಮಾಡುತ್ತದೆ, ನಿನ್ನನ್ನು ಕೊನೆಗೊಳಿಸುತ್ತದೆ ಮತ್ತು ನಿನ್ನನ್ನು ನಾಶಪಡಿಸುತ್ತದೆ’ ಎಂದಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ಪಾಡ್​​ಕಾಸ್ಟ್​ನಲ್ಲಿ ಮಾತನಾಡಿದ ಹನಿಸಿಂಗ್, ‘ನಾನು ಡ್ರಗ್ಸ್ ಮತ್ತು ಮದ್ಯದಲ್ಲಿ ಮುಳುಗಿದ್ದೆ, ದಿನಕ್ಕೆ 12-15 ಜಾಯಿಂಟ್‌ಗಳನ್ನು (ಗಾಂಜಾ) ಸೇದುತ್ತಿದ್ದೆ ಮತ್ತು ಮದ್ಯದ ಬಾಟಲಿಗಳನ್ನು ಖಾಲಿ ಮಾಡುತ್ತಿದ್ದೆ. ನಾನು ನನ್ನ ಕುಟುಂಬವನ್ನು ತ್ಯಜಿಸಿದ್ದೆ, ನನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡೆ. ಒಂದು ಬಾರಿ ನಾನು ಎಷ್ಟು ಅಮಲಿನಲ್ಲಿದ್ದೆ ಎಂದರೆ, ನನ್ನ ಸ್ನೇಹಿತನ ಹೊಟ್ಟೆಗೆ ಎಂಟು ಬಾರಿ ಕಚ್ಚಿದ್ದೆ’ ಎಂದು ಅವರು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಹನಿ ಸಿಂಗ್ ಬೈಪೋಲಾರ್ ಡಿಸಾರ್ಡರ್ ಇರುವುದು ಪತ್ತೆಯಾಯಿತು ಮತ್ತು ಅವರು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದರು. 2017 ರಲ್ಲಿ, ಹನಿ ಸಿಂಗ್ ತಮ್ಮ ಪ್ರವಾಸದ ಮಧ್ಯದಲ್ಲೇ ಕುಸಿದು ಬಿದ್ದರು. ಬಳಿಕ ಅವರು ದೆಹಲಿಗೆ ಮರಳಿ, ವೈದ್ಯರು ಮತ್ತು ಥೆರಪಿಸ್ಟ್‌ಗಳ ತಂಡದೊಂದಿಗೆ ಚಿಕಿತ್ಸೆ ಪಡೆಯಲು ಪ್ರಾರಂಭಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More