ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ಕೊವಿಡ್ ಪಾಸಿಟಿವ್ ಆಗಿತ್ತು. ಕೆಲವೇ ದಿನಗಳ ಹಿಂದೆ ಅವರು ಗುಣಮುಖರಾಗಿದ್ದಾರೆ. ಮಹಾಮಾರಿಯನ್ನು ಗೆದ್ದು ಬಂದಿರುವ ಅವರಿಗೆ ಅಭಿಮಾನಿಗಳು ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. ಅಂಥ ಎಲ್ಲ ಅಭಿಮಾನಿಗಳಿಗಾಗಿ ಪೂಜಾ ಒಂದು ಉಪಯುಕ್ತವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಕ್ಸಿ ಮೀಟರ್ ಉಪಯೋಗಿಸುವ ಸರಿಯಾದ ಕ್ರಮ ಯಾವುದು ಎಂಬುದನ್ನು ಅವರು ತಿಳಿಸಿಕೊಟ್ಟಿದ್ದಾರೆ.
ಏ.25ರಂದು ಪೂಜಾಗೆ ಕೊವಿಡ್ ಸೋಂಕು ತಗುಲಿರುವುದು ದೃಡವಾಗಿತ್ತು. 10 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇದ್ದು ಚಿಕಿತ್ಸೆ ಪಡೆದ ಬಳಿಕ ಅವರು ಗುಣಮುಖರಾದರು. ಮೇ 5ರಂದು ತಮಗೆ ನೆಗೆಟಿವ್ ವರದಿ ಬಂದಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು. ತಮ್ಮ ಈ ಅನುಭವದ ಆಧಾರದ ಮೇಲೆ ಅವರು ಈ ಆಕ್ಸಿ ಮೀಟರ್ ಮೂಲಕ ಪಲ್ಸ್ ರೇಟ್ ಮತ್ತು ಆಕ್ಸಿಜನ್ ಲೆವೆಲ್ ನೋಡಿಕೊಳ್ಳುವ ಸರಿಯಾದ ಕ್ರಮ ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಪೂಜಾ ಅವರು ಅಭಿಮಾನಿಗಳ ಮೇಲಿನ ಕಾಳಜಿಯಿಂದ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ‘ನಾನು ಕೊವಿಡ್ನಿಂದಾಗಿ ಹೋಮ್ ಕ್ವಾರಂಟೈನ್ ಆಗಿದ್ದಾಗ ನನ್ನ ಆಕ್ಸಿಜನ್ ಲೆವೆಲ್ ಅನ್ನು ನೋಡಿಕೊಳ್ಳಬೇಕಿತ್ತು. ಅದನ್ನು ನೋಡಲು ಸರಿಯಾದ ಕ್ರಮ ಇದೆ ಎಂದು ವೈದ್ಯರು ಹೇಳುವವರೆಗೂ ನನಗೆ ತಿಳಿದಿರಲಿಲ್ಲ. ಈ ಮಾಹಿತಿಯಿಂದ ಸಹಾಯ ಆಗಲಿದೆ ಎಂದು ಭಾವಿಸುತ್ತೇನೆ. ಈ ರೋಗವನ್ನು ಮಣಿಸುವಲ್ಲಿ ಯಾವ ಮಾಹಿತಿ ಕೂಡ ಸಣ್ಣದಲ್ಲ. ಎಲ್ಲರೂ ಮನೆಯಲ್ಲಿ ಸುರಕ್ಷಿತರಾಗಿರಿ’ ಎಂದು ಆ ವಿಡಿಯೋಗೆ ಪೂಜಾ ಕ್ಯಾಪ್ಷನ್ ನೀಡಿದ್ದಾರೆ.
When I was down with COVID-19 and home quarantined, I was told to monitor my O2 levels very closely. I didn’t know there was a right way to do it until my doctor told me. I hope this helps. No detail is too small in our efforts to fight this disease. Stay safe everyone. ❤️?? pic.twitter.com/HeGr8XvVFu
— Pooja Hegde (@hegdepooja) May 13, 2021
ಆಕ್ಸಿ ಮೀಟರ್ ಬಳಸುವಾಗ ಉಗುರಿಗೆ ನೇಲ್ ಪಾಲಿಶ್ ಹಚ್ಚಿರಬಾರದು. ಕೈ ಸರಿಯಾಗಿ ತೊಳೆದುಕೊಂಡಿರಬೇಕು. ತೋರು ಬೆರಳು ಅಥವಾ ಉಂಗುರು ಬೆರಳುಗಳ ಮೂಲಕ ಮಾತ್ರ ನೋಡಿಕೊಳ್ಳಬೇಕು. ಚೆಕ್ ಮಾಡಿಕೊಳ್ಳುವುದಕ್ಕಿಂತ 5 ನಿಮಿಷ ಮುಂದೆ ವಿಶ್ರಾಂತ ಸ್ಥಿತಿಯಲ್ಲಿ ಇರಬೇಕು ಎಂಬುದನ್ನು ವಿಡಿಯೋದಲ್ಲಿ ಪೂಜಾ ವಿವರಿಸಿದ್ದಾರೆ. ರಾಧೆ ಶ್ಯಾಮ್, ಆಚಾರ್ಯಾ, ಮೋಸ್ಟ್ ಎಲಿಜೆಬಲ್ ಬ್ಯಾಚುಲರ್, ಸರ್ಕಸ್ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.
ಇದನ್ನೂ ಓದಿ:
ದಳಪತಿ 65 ಸಿನಿಮಾಗೆ ನಟಿ ಪೂಜಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
ಬೆಂಗಳೂರಿಗರ ಸಹಾಯಕ್ಕೆ ನಿಂತ ಸೋನು ಸೂದ್; ಈ ಸಂಖ್ಯೆಗೆ ಸಂಪರ್ಕಿಸಿದರೆ ಮನೆಬಾಗಿಲಿಗೆ ಬರುತ್ತೆ ಆಕ್ಸಿಜನ್ ಸಿಲಿಂಡರ್