ಶಿವರಾಜ್ಕುಮಾರ್ ಅವರಿಗೆ ಕ್ಯಾನ್ಸರ್ ಇರೋ ವಿಚಾರ ತಿಳಿದ ಬಳಿಕ ಫ್ಯಾನ್ಸ್ ಆತಂಕಗೊಂಡಿದ್ದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದ ಅವರು, ಈಗ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಕ್ಯಾನ್ಸರ್ನಿಂದ ಚೇತರಿಸಿಕೊಂಡು ಅವರು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಹೀಗಿರುವಾಗಲೇ ಸ್ಟಾರ್ ಹೀರೋ ಒಬ್ಬರಿಗೆ ಕ್ಯಾನ್ಸರ್ ಇರೋ ಬಗ್ಗೆ ಸುದ್ದಿ ಹರಿದಾಡಿತ್ತು. ಈ ವಿಚಾರ ಕೇಳಿ ಅವರ ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು. ಅಷ್ಟಕ್ಕೂ ಕ್ಯಾನ್ಸರ್ ಇದೆ ಎಂದು ಸುದ್ದಿ ಹಬ್ಬಿದ್ದು ಯಾರ ಬಗ್ಗೆ? ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ (Mammootty) ಬಗ್ಗೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಸುದ್ದಿ ಒಂದು ಹರಿದಾಡಿತ್ತು. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ನೀಡೋ ಕೆಲಸ ಆಗಿದೆ.
ಮಮ್ಮೂಟಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಮಲಯಾಳಂ ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರಿಗೆ ಈಗ 73 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಶ್ರಮವಹಿಸಿ ಸಿನಿಮಾ ಮಾಡುತ್ತಿದ್ದಾರೆ. ಅವರಿಗೆ ಕ್ಯಾನ್ಸರ್ ಇದೆ ಎನ್ನುವ ಸುದ್ದಿ ಹುಟ್ಟಿಕೊಂಡಿತ್ತು. ಅವರು ಸಿನಿಮಾ ಕೆಲಸಗಳ ಮಧ್ಯೆಯೇ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಮಮ್ಮುಟ್ಟಿ ತಂಡದವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
‘ಮಮ್ಮುಟ್ಟಿ ಸದ್ಯ ವೆಕೇಶನ್ನಲ್ಲಿ ಇದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಕ್ಯಾನ್ಸರ್ ಇದೆ ಎಂಬ ವಿಚಾರದಲ್ಲಿ ಸತ್ಯ ಇಲ್ಲ’ ಎಂದು ತಂಡದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ರಂಜಾನ್ ಕಾರಣಕ್ಕೆ ಮಮ್ಮುಟ್ಟಿ ಅವರು ಉಪವಾಸ ಮಾಡುತ್ತಿದ್ದಾರೆ. ಇದಕ್ಕಾಗಿ ಬ್ರೇಕ್ ಪಡೆದಿದ್ದಾರೆ. ಅವರು ವೆಕೇಶನ್ ತೆರಳಿದ್ದು, ಶೀಘ್ರವೇ ಶೂಟ್ಗೆ ಮರಳಲಿದ್ದಾರೆ’ ಎಂದು ಮಮ್ಮುಟ್ಟಿ ತಂಡದವರು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಸಂಸತ್ತು ಹತ್ತಲಿದ್ದಾರೆ ಶಿವರಾಜ್ಕುಮಾರ್; ಸಿಕ್ಕಿತು ಹೊಸ ಸುದ್ದಿ
ಮಮ್ಮುಟ್ಟಿ ನಟನೆಯ ‘ಬಜೂಕಾ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಏಪ್ರಿಲ್ 10ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಇತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.