‘ತುಂಬಾಡ್’ ಮರುಬಿಡುಗಡೆ; ಹಾರರ್ ಪ್ರಿಯರಿಗೆ ಸಿಹಿ ಸುದ್ದಿ
ಕನ್ನಡ, ತೆಲುಗು, ಹಿಂದಿಗಳಲ್ಲಿ ರೀಲೀಸ್ ಟ್ರೆಂಡ್ ಶುರುವಾಗಿದೆ. ‘ಶಾಸ್ತ್ರಿ’ ಸೇರಿ ಅನೇಕ ಸಿನಿಮಾಗಳು ಮರುಬಿಡುಗಡೆ ಆಗಿವೆ. ಈ ಸಾಲಿಗೆ ‘ತುಂಬಾಡ್’ ಕೂಡ ಸೇರಿದೆ. ಕೆಲವು ಚಿತ್ರಗಳು ಮೂಲ ಬಿಡುಗಡೆಗಿಂತ ಮರು-ಬಿಡುಗಡೆಯಲ್ಲಿ ಹೆಚ್ಚು ಗಳಿಸುತ್ತಿವೆ. ‘ತುಂಬಾಡ್’ ಕೂಡ ಈ ದಾಖಲೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ನಟನೆಯ ‘ಸ್ತ್ರೀ 2′ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿದೆ. ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಯಿತು. ಈ ಹಾರರ್ ಕಾಮಿಡಿ ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಭಾರತದಲ್ಲಿ ಗಳಿಕೆಯಲ್ಲಿ ಈ ಚಿತ್ರ 300 ಕೋಟಿ ಕ್ಲಬ್ ಸೇರಿದೆ. ವಿಶ್ವಾದ್ಯಂತ 400 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಈ ಹಾರರ್ ಚಿತ್ರದ ಯಶಸ್ಸನ್ನು ನೋಡಿ ಮತ್ತೊಂದು ಹಾರರ್ ಸಿನಿಮಾ ಥಿಯೇಟರ್ನಲ್ಲಿ ಮರು ಬಿಡುಗಡೆಯಾಗುತ್ತಿದೆ.
ಹಾರರ್ ಚಿತ್ರ ‘ತುಂಬಾಡ್’ ಮತ್ತೊಮ್ಮೆ ಥಿಯೇಟರ್‌ಗಳಿಗೆ ಬರಲಿದೆ. ಆಗಸ್ಟ್ 30ರಂದು ಈ ಸಿನಿಮಾ ಮರು-ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಮಿತೇಶ್ ಶಾ, ಆದೇಶ್ ಪ್ರಸಾದ್ ಮತ್ತು ಆನಂದ್ ಗಾಂಧಿ ಅವರೊಂದಿಗೆ ರಾಹಿ ಅನಿಲ್ ಬರ್ವೆ ಬರೆದಿದ್ದಾರೆ. ಈ ಸಿನಿಮಾ ಮೊದಲ ಬಾರಿಗೆ ರಿಲೀಸ್ ಆಗಿದ್ದು 2018ರ ಅಕ್ಟೋಬರ್ 12ರಂದು. ಈ ಚಿತ್ರದಲ್ಲಿ ಸೋಹಮ್ ಶಾ, ಹರೀಶ್ ಖನ್ನಾ, ಜ್ಯೋತಿ ಮಲ್ಶೆ, ರುದ್ರ ಸೋನಿ ಮತ್ತು ಮಾಧವ್ ಹರಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ತುಂಬಾಡ್’ ಬಾಕ್ಸ್ ಆಫೀಸ್‌ನಲ್ಲಿ 13.6 ಕೋಟಿ ಗಳಿಸಿತ್ತು. ಈ ಸಿನಿಮಾ 64 ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ 3 ಪ್ರಶಸ್ತಿಗಳನ್ನು ಗೆದ್ದಿತ್ತು. ಈ ಚಿತ್ರವನ್ನು ನಿರ್ಮಿಸಲು ನಿರ್ಮಾಪಕರು 6 ವರ್ಷಗಳನ್ನು ತೆಗೆದುಕೊಂಡಿದ್ದರು. ಈ ಚಿತ್ರದ ಶೂಟಿಂಗ್ 2012ರಲ್ಲಿ ಪ್ರಾರಂಭವಾ ಆಗಿತ್ತು. ಸಿನಿಮಾ ರಿಲೀಸ್ ಆಗಿದ್ದು 2018ರಲ್ಲಿ. ‘ತುಂಬಾಡ್’ ಚಿತ್ರದ ಕಥೆ 1918ರಲ್ಲಿ ಮಹಾರಾಷ್ಟ್ರದ ತುಂಬಾಡ್ ಹಳ್ಳಿಯಿಂದ ಆರಂಭವಾಗುತ್ತದೆ. ವಿನಾಯಕ್ ರಾವ್ (ಸೋಹಮ್ ಶಾ) ತನ್ನ ತಾಯಿ ಮತ್ತು ಸಹೋದರನೊಂದಿಗೆ ಈ ಗ್ರಾಮದಲ್ಲಿ ವಾಸಿಸುತ್ತಾನೆ. ಗ್ರಾಮದ ದೇವಸ್ಥಾನದಲ್ಲಿ ನಿಧಿ ಅಡಗಿದೆ ಎನ್ನುವ ಸುದ್ದಿ ತಿಳಿದು ಅದರ ಹುಡುಕಾಟ ನಡೆಸುತ್ತಾನೆ. ಇಲ್ಲಿಂದ ಕಥೆ ಆರಂಭ ಆಗುತ್ತದೆ. ಹಾರರ್ ಅಂಶಗಳನ್ನು ಈ ಸಿನಿಮಾ ಹೊಂದಿದೆ.
ಕನ್ನಡ, ತೆಲುಗು, ಹಿಂದಿಗಳಲ್ಲಿ ರೀಲೀಸ್ ಟ್ರೆಂಡ್ ಶುರುವಾಗಿದೆ. ‘ಶಾಸ್ತ್ರಿ’ ಸೇರಿ ಅನೇಕ ಸಿನಿಮಾಗಳು ಮರುಬಿಡುಗಡೆ ಆಗಿವೆ. ಈ ಸಾಲಿಗೆ ‘ತುಂಬಾಡ್’ ಕೂಡ ಸೇರಿದೆ.
ಇದನ್ನೂ ಓದಿ: ‘ಸ್ತ್ರೀ 2’ ಸಿನಿಮಾದಲ್ಲಿ 7.7 ಅಡಿ ಎತ್ತರದ ನಟ; ಏನು ಇವರು ಹಿನ್ನೆಲೆ?
ಕೆಲವು ಚಿತ್ರಗಳು ಮೂಲ ಬಿಡುಗಡೆಗಿಂತ ಮರು-ಬಿಡುಗಡೆಯಲ್ಲಿ ಹೆಚ್ಚು ಗಳಿಸುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ‘ಲೈಲಾ ಮಜ್ನು’ ಸಿನಿಮಾ ಮೊದಲ ಬಾರಿಗೆ (7 ಸೆಪ್ಟೆಂಬರ್ 2018) ಬಿಡುಗಡೆಯಾದಾಗ ಅದು ರೂ 3 ಕೋಟಿ ಗಳಿಸಿತ್ತು. ಆದರೆ ಎರಡನೇ ಬಾರಿ 6 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಇದಲ್ಲದೆ, ರಾಕ್‌ಸ್ಟಾರ್ ಕೂಡ ಮೊದಲಿಗೆ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ, ಆದರೆ ಅದು ಮರು-ಬಿಡುಗಡೆಯಲ್ಲಿ ಚೆನ್ನಾಗಿ ಗಳಿಸಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.