Agent Movie: ‘ಸ್ಕ್ರಿಪ್ಟ್ ಇಲ್ಲದೇ ಶೂಟಿಂಗ್ ಶುರು ಮಾಡಿದ್ವಿ, ಈಗ ಚಿತ್ರ ಸೋತಿದೆ’: ‘ಏಜೆಂಟ್’ ನಿರ್ಮಾಪಕನ ಪ್ರಾಮಾಣಿಕ ಮಾತು
Producer Anil Sunkara: ಅಖಿಲ್ ಅಕ್ಕಿನೇನಿ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಏಜೆಂಟ್’ ಮೇಲೆ ಹೈಪ್ ಸೃಷ್ಟಿ ಆಗಿತ್ತು. ಆದರೆ ಈ ಸಿನಿಮಾಗೆ ಜನರಿಂದ ಮೆಚ್ಚುಗೆ ಸಿಕ್ಕಿಲ್ಲ.
ಸಿನಿಮಾ ರಿಲೀಸ್ ಆದ ದಿನವೇ ಸಕ್ಸಸ್ ಮೀಟ್ ಮಾಡಿಕೊಳ್ಳುವ ನಿರ್ಮಾಪಕರು ಚಿತ್ರರಂಗದಲ್ಲಿ ಇದ್ದಾರೆ. ಬಾಕ್ಸ್ ಆಫೀಸ್ (Box Office) ಲೆಕ್ಕಚಾರವನ್ನು ಮರೆಮಾಚಿ, ತಮ್ಮ ಸಿನಿಮಾ ಸೂಪರ್ ಹಿಟ್ ಎನ್ನುವ ಹೀರೋಗಳು ಇದ್ದಾರೆ. ಆದರೆ ಇಲ್ಲೊರ್ವ ನಿರ್ಮಾಪಕರು ಪ್ರಾಮಾಣಿಕವಾಗಿ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಆ ಸೋಲಿಗೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ. ಅವರು ಬೇರಾರೂ ಅಲ್ಲ.. ‘ಏಜೆಂಟ್’ ಚಿತ್ರದ ನಿರ್ಮಾಪಕ ಅನಿಲ್ ಸುಂಕರ. ಟಾಲಿವುಡ್ನಲ್ಲಿ ಬ್ಯುಸಿ ಆಗಿರುವ ಅನಿಲ್ ಸುಂಕರ (Anil Sunkara) ಅವರು ಬಹುಕೋಟಿ ರೂಪಾಯಿ ಬಂಡವಾಳ ಸುರಿದು ‘ಏಜೆಂಟ್’ ಸಿನಿಮಾ (Agent Movie) ಮಾಡಿದ್ದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಸೋತಿದೆ. ಅಖಿಲ್ ಅಕ್ಕಿನೇನಿ ನಟನೆಯ ಈ ಸಿನಿಮಾದ ಸೋಲಿನ ಬಗ್ಗೆ ನಿರ್ಮಾಪಕರು ಟ್ವೀಟ್ ಮಾಡಿದ್ದಾರೆ. ಏನೆಲ್ಲ ಆಯ್ತು ಎಂಬುದನ್ನು ಅವರು ಪ್ರಾಮಾಣಿಕವಾಗಿ ವಿವರಿಸಿದ್ದಾರೆ.
‘ಏಜೆಂಟ್’ ಸಿನಿಮಾದ ಬಗ್ಗೆ ಸಖತ್ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅಖಿಲ್ ಅಕ್ಕಿನೇನಿ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡ ಸಿನಿಮಾ ಎಂಬ ಕಾರಣಕ್ಕೆ ಈ ಚಿತ್ರ ಹೈಪ್ ಸೃಷ್ಟಿ ಮಾಡಿತ್ತು. ಟ್ರೇಲರ್ ಸಿಕ್ಕಾಪಟ್ಟೆ ಅದ್ದೂರಿಯಾಗಿ ಮೂಡಿಬಂದಿತ್ತು. ಬಾಲಿವುಡ್ನ ಖ್ಯಾತ ನಟ ದಿನೋ ಮೋರಿಯಾ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ಟಾಲಿವುಡ್ಗೆ ಕಾಲಿಟ್ಟಿದ್ದು ಕೂಡ ಹೈಪ್ ಹೆಚ್ಚಲು ಕಾರಣ ಆಗಿತ್ತು. ಇಷ್ಟೆಲ್ಲ ಕ್ರೇಜ್ ಇದ್ದರೂ ಕೂಡ ಈ ಸಿನಿಮಾಗೆ ಜನರಿಂದ ಮೆಚ್ಚುಗೆ ಸಿಕ್ಕಿಲ್ಲ.
We have to take the entire blame for #Agent. Though we know its an uphill task, we thought of conquering but failed to do so as we did a blunder starting the project without a bound script & innumerable issues including covid followed. We don’t want to give any excuses but learn…
— Anil Sunkara (@AnilSunkara1) May 1, 2023
‘ಏಜೆಂಟ್ ಚಿತ್ರದ ಸೋಲಿನ ಸಂಪೂರ್ಣ ಹೊಣೆಯನ್ನು ನಾವೇ ಹೊತ್ತುಕೊಳ್ಳಬೇಕು. ಗೆಲ್ಲುವ ಭರವಸೆ ನಮಗೆ ಇತ್ತು. ಆದರೆ ವಿಫಲವಾದೆವು. ಬೌಂಡ್ ಸ್ಕ್ರಿಪ್ಟ್ ಇಲ್ಲದೇ ಶೂಟಿಂಗ್ ಶುರು ಮಾಡಿದ್ದು ನಮ್ಮಿಂದಾದ ಪ್ರಮಾದ. ಕೊವಿಡ್ ಮುಂತಾದ ಅಡೆಚಣೆಗಳು ಎದುರಾದವು. ಈಗ ನೆಪಗಳನ್ನು ನೀಡಲು ನಾವು ಇಷ್ಟಪಡಲ್ಲ. ಮಾಡಿದ ದುಬಾರಿ ತಪ್ಪಿನಿಂದ ಪಾಠ ಕಲಿಯುತ್ತೇವೆ. ಮತ್ತೆ ಇಂಥ ತಪ್ಪು ಮಾಡಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟಿದ್ದ ಎಲ್ಲರಲ್ಲೂ ನಾವು ಕ್ಷಮೆ ಕೇಳುತ್ತೇವೆ. ಈ ನಷ್ಟ ಭರಿಸಿಕೊಳ್ಳಲು ಮುಂದಿನ ದಿನಗಳಲ್ಲಿ ನಾವು ಸೂಕ್ತ ಪ್ಲ್ಯಾನ್ ಮತ್ತು ಪರಿಶ್ರಮದಿಂದ ಕೆಲಸ ಮಾಡುತ್ತೇವೆ’ ಎಂದು ಅನಿಲ್ ಸುಂಕರ ಅವರು ಟ್ವೀಟ್ ಮಾಡಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ ‘ಶಾಕುಂತಲಂ’ ಸಿನಿಮಾ; ಈ ಬಾರಿ ನಡೆಯಲಿಲ್ಲ ಸಮಂತಾ ಮ್ಯಾಜಿಕ್
‘ಏಜೆಂಟ್’ ಸಿನಿಮಾದ ನಿರ್ಮಾಪಕರ ಈ ಟ್ವೀಟ್ ವೈರಲ್ ಆಗಿದೆ. ಅನಿಲ್ ಸುಂಕರ ಅವರ ಪ್ರಾಮಾಣಿಕತೆಗೆ ಅನೇಕರು ಭೇಷ್ ಎಂದು ಕಮೆಂಟ್ ಮಾಡಿದ್ದಾರೆ. ಈ ನಡುವೆ ಕೆಲವರು ಅಖಿಲ್ ಅಕ್ಕಿನೇನಿ ಅವರ ತಂದೆ ನಾಗಾರ್ಜುನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಆದರೆ ಅದು ಸರಿಯಲ್ಲ ಎಂಬ ಅಭಿಪ್ರಾಯ ಕೂಡ ನೆಟ್ಟಿಗರಿಂದ ವ್ಯಕ್ತವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:24 pm, Mon, 1 May 23