ಅಪರೂಪಕ್ಕೆ ಕಾಣಿಸಿಕೊಂಡ ಅಜಿತ್ ಕುಮಾರ್ ಮಗಳು ಅನುಷ್ಕಾ; ವಿಡಿಯೋ ವೈರಲ್

ಅಜಿತ್ ಕುಮಾರ್ ಮಗಳು ಅನುಷ್ಕಾ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. 17ರ ಪ್ರಾಯದ ಅವರು ಈಗ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋಗೆ ಬಂದಿದ್ದಾರೆ. ಅನುಷ್ಕಾ ಕುಮಾರ್ ಹಾಗೂ ಶಾಲಿನಿ ಅವರ ವಿಡಿಯೋ ವೈರಲ್ ಆಗಿದೆ. ಅಪರೂಪಕ್ಕೆ ಕಾಣಿಸಿಕೊಂಡ ಅನುಷ್ಕಾ ಅವರನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಅಪರೂಪಕ್ಕೆ ಕಾಣಿಸಿಕೊಂಡ ಅಜಿತ್ ಕುಮಾರ್ ಮಗಳು ಅನುಷ್ಕಾ; ವಿಡಿಯೋ ವೈರಲ್
Anoushka, Shalini, Ajith Kumar

Updated on: Apr 10, 2025 | 8:38 PM

ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಹೆಚ್ಚು ಸಮಯವನ್ನು ಅವರು ಫ್ಯಾಮಿಲಿ ಜೊತೆ ಕಳೆಯುತ್ತಾರೆ. ಆದರೆ ಅವರ ಕುಟುಂಬದವರು ಮಾಧ್ಯಮಗಳ ಎದುರು ಕಾಣಿಸಿಕೊಳ್ಳುವುದು ಕಡಿಮೆ. ಅದರಲ್ಲೂ ಅಜಿತ್ ಕುಮಾರ್ ಪುತ್ರಿ ಅನುಷ್ಕಾ ಅವರು ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿಲ್ಲ. ಆದರೆ ಇಂದು (ಏಪ್ರಿಲ್ 10) ಅನುಷ್ಕಾ ಕುಮಾರ್ (Anoushka Kumar) ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾದ ಪ್ರದರ್ಶನಕ್ಕೆ ಅನುಷ್ಕಾ ಕುಮಾರ್ ಅವರು ಹಾಜರಿ ಹಾಕಿದ್ದಾರೆ.

ಅಜಿತ್ ಕುಮಾರ್​ ಅಭಿನಯದ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಏಪ್ರಿಲ್ 10ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅಜಿತ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗಿದೆ. ಇದೇ ಖುಷಿಯಲ್ಲಿ ಅನುಷ್ಕಾ ಕುಮಾರ್ ಅವರನ್ನು ಕೂಡ ಫ್ಯಾನ್ಸ್ ನೋಡಿ ಸಂಭ್ರಮಿಸಿದ್ದಾರೆ. ಅವರ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ
ಅಜಿತ್ ಕಾರು ಮತ್ತೊಮ್ಮೆ ಪಲ್ಟಿ, ತಿಂಗಳಲ್ಲಿ ಎರಡನೇ ಅಪಘಾತ
ವಿದಾಮುಯರ್ಚಿ: ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದ ಅಜಿತ್ ಕುಮಾರ್ ಫ್ಯಾನ್ಸ್
ನಟನಾಗುವುದಕ್ಕೂ ಮೊದಲು ಗ್ಯಾರೆಜ್​ನಲ್ಲಿ ಕೆಲಸ ಮಾಡಿದ್ದ ಅಜಿತ್
180 ಕಿಮೀ ವೇಗದಲ್ಲಿ ಅಜಿತ್ ಕಾರು ಅಪಘಾತ; ವಿಡಿಯೋ ವೈರಲ್

ಅನುಷ್ಕಾ ಕುಮಾರ್ ಅವರಿಗೆ ಈಗ 17 ವರ್ಷ ವಯಸ್ಸು. ತಾಯಿ ಶಾಲಿನಿ ಜೊತೆ ಅವರು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾವನ್ನು ನೋಡಲು ಬಂದಿದ್ದಾರೆ. ಚಿತ್ರಮಂದಿರಕ್ಕೆ ಬಂದ ಅವರ ವಿಡಿಯೋ ಚಿತ್ರಿಸಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಅಪರೂಪಕ್ಕೆ ಕಾಣಿಸಿಕೊಂಡ ಅನುಷ್ಕಾ ಅವರ ವಿಡಿಯೋ ಈಗ ಫ್ಯಾನ್ಸ್ ಪೇಜ್​ಗಳಲ್ಲಿ ವೈರಲ್ ಆಗಿದೆ. ರೆಡ್ ಟಾಪ್ ಹಾಗೂ ಕಪ್ಪು ಪ್ಯಾಂಟ್ ಧರಿಸಿ ಬಂದ ಅನುಷ್ಕಾ ಅವರು ಪಾಪರಾಜಿಗಳ ಕ್ಯಾಮೆರಾ ಕಂಡು ನಗು ಚೆಲ್ಲಿದ್ದಾರೆ.

ರೋಷಿನಿ ಚಿತ್ರಮಂದಿರದಲ್ಲಿ ಶಾಲಿನಿ, ಅನುಷ್ಕಾ ಅವರು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾವನ್ನು ನೋಡಿದ್ದಾರೆ. ಅನುಷ್ಕಾ ಅವರು ಸಿನಿಮಾ ನೋಡಲು ಬಂದಿರುವುದು ಅಭಿಮಾನಿಗಳ ಪಾಲಿಗೆ ಸರ್ಪೈಸ್ ಆಗಿತ್ತು.

ಇದನ್ನೂ ಓದಿ: ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಬಿಡುಗಡೆ, ಸಿನಿಮಾ ಗುಡ್ಡಾ? ಬ್ಯಾಡಾ? ಅಗ್ಲಿಯಾ?

‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೆ ಅಧಿಕ್ ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದಾರೆ. ನವೀನ್ ಯರ್ನೇನಿ, ವೈ. ರವಿ ಶಂಕರ್ ಅವರು ನಿರ್ಮಾಣ ಮಾಡಿದ್ದಾರೆ. ಜಿವಿ ಪ್ರಕಾಶ್ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಅಜಿತ್ ಕುಮಾರ್ ಜೊತೆ ತ್ರಿಷಾ ಕೃಷ್ಣನ್, ಅರ್ಜುನ್ ದಾಸ್, ಪ್ರಸನ್ನ ಮುಂತಾದವರು ಕೂಡ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.