ಕೊರೊನಾ ವೈರಸ್ ಮೂರನೇ ಅಲೆಯ ಕಾರಣದಿಂದ ಚಿತ್ರರಂಗದಲ್ಲಿ ಒಂದಷ್ಟು ಗೊಂದಲ ಉಂಟಾಗಿತ್ತು. ಆ ಕಾರಣದಿಂದ ಅನೇಕ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದ್ದವು. ಈಗ ಬಹುತೇಕ ಎಲ್ಲ ಸಿನಿಮಾಗಳು ಒಂದೊಂದಾಗಿಯೇ ಹೊಸ ಬಿಡುಗಡೆ ದಿನಾಂಕ ಘೋಷಿಸುತ್ತಿವೆ. ಕಾಲಿವುಡ್ ನಟ ಅಜಿತ್ (Ajith Kumar) ಅಭಿನಯದ ‘ವಲಿಮೈ’ ಸಿನಿಮಾ ಫೆ.24ಕ್ಕೆ ಬಿಡುಗಡೆ ಆಗಲಿದೆ. ಈ ಚಿತ್ರಕ್ಕಾಗಿ ಅಜಿತ್ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದರು. ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಸೃಷ್ಟಿಸಿದೆ. ಕರ್ನಾಟಕದಲ್ಲಿಯೂ ಅಜಿತ್ ಸಿನಿಮಾಗೆ ಒಂದು ಪ್ರೇಕ್ಷಕ ವರ್ಗವಿದೆ. ಹಾಗಾಗಿ ಕರುನಾಡಿನಲ್ಲಿ ‘ವಲಿಮೈ’ (Valimai Movie) ಸಿನಿಮಾ ಒಂದಷ್ಟು ಚಿತ್ರಮಂದಿರಗಳನ್ನು ಪಡೆದುಕೊಳ್ಳಲಿದೆ. ಈ ನಡುವೆ ಟಫ್ ಸ್ಪರ್ಧೆ ನೀಡಲು ಕನ್ನಡದ ಚಿತ್ರಗಳು ಕೂಡ ಸಿದ್ಧವಾಗಿವೆ. ಶ್ರೀನಿ, ಅದಿತಿ ಪ್ರಭುದೇವ ನಟನೆಯ ‘ಓಲ್ಡ್ ಮಾಂಕ್’ (Old Monk Movie) ಕೂಡ ಅದೇ ವಾರದಲ್ಲಿ ತೆರೆಕಾಣಲಿದೆ. ಫೆ.25ರಂದು ಬಿಡುಗಡೆ ಆಗುವುದಾಗಿ ಈ ಚಿತ್ರತಂಡ ಘೋಷಿಸಿಕೊಂಡಿದೆ. ಇನ್ನೂ ಕೆಲವು ಕನ್ನಡ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಲಿವೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.13ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ವಲಿಮೈ’ ಚಿತ್ರ ತೆರೆಕಾಣಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ‘ವಲಿಮೈ’ ಚಿತ್ರ ಬಿಡುಗಡೆ ಆಗುತ್ತಿದೆ.
ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಬಂಡವಾಳ ಹೂಡಿದ್ದಾರೆ. ಎಚ್. ವಿನೋದ್ ನಿರ್ದೇಶನ ಮಾಡಿದ್ದು, ಆ್ಯಕ್ಷನ್ ಅವತಾರದಲ್ಲಿ ಅಜಿತ್ ಕಾಣಿಸಿಕೊಳ್ಳಲಿದ್ದಾರೆ. ರಿಲೀಸ್ ದಿನಾಂಕದ ಬಗ್ಗೆ ಟ್ವೀಟ್ ಮಾಡಿರುವ ಬೋನಿ ಕಪೂರ್ ಅವರು ನಿರೀಕ್ಷೆ ಹೆಚ್ಚಿಸಿದ್ದಾರೆ. ‘ಪದಗಳಿಗಿಂತಲೂ ಕೆಲಸ ಹೆಚ್ಚು ಮಾತನಾಡುತ್ತದೆ. ಕಾಯುವಿಕೆಗೆ ಈಗ ತೆರೆಬಿದ್ದಿದೆ. ಫೆ.24ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಫೀಲ್ ದ ಪವರ್’ ಎಂದು ಬೋನಿ ಕಪೂರ್ ಟ್ವೀಟ್ ಮಾಡಿದ್ದಾರೆ.
Actions speak louder than words. The wait is well & truly over. Feel the power on 24 Feb, in cinemas worldwide. #Valimai #Valimai240222#ValimaiFromFeb24#AjithKumar #HVinoth @thisisysr @BayViewProjOffl @ZeeStudios_ @sureshchandraa @ActorKartikeya #NiravShah @humasqureshi pic.twitter.com/K6uyLlHRLl
— Boney Kapoor (@BoneyKapoor) February 2, 2022
ಕನ್ನಡದ ಅನೇಕ ಸಿನಿಮಾಗಳು ಈಗಾಗಲೇ ನಿರೀಕ್ಷೆ ಹುಟ್ಟಿಸಿವೆ. ಆ ಪೈಕಿ ‘ಓಲ್ಡ್ ಮಾಂಕ್’ ಸಿನಿಮಾ ಕೂಡ ಪ್ರಮುಖವಾದ್ದು. ಪರಭಾಷೆಯ ಚಿತ್ರಗಳ ಎದುರು ಪೈಪೋಟಿ ನೀಡಲು ಈ ಚಿತ್ರ ಸಜ್ಜಾಗಿದೆ. ‘ಓಲ್ಡ್ ಮಾಂಕ್’ ಟ್ರೇಲರ್ ನೋಡಿದ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಎಸ್. ನಾರಾಯಣ್, ಸುಜಯ್ ಶಾಸ್ತ್ರಿ, ಅರುಣಾ ಬಾಲರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಹಾಗಾಗಿ ತಮ್ಮದೇ ಆದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಈ ಸಿನಿಮಾ ಯಶಸ್ವಿ ಆಗಲಿ ಎಂಬ ಭರವಸೆ ಚಿತ್ರತಂಡಕ್ಕೆ ಇದೆ. ಈ ಎಲ್ಲ ಕಾರಣಗಳಿಂದ ಪರಭಾಷೆಯ ಸಿನಿಮಾ ಎದುರು ಫೈಟ್ ನೀಡಲು ‘ಓಲ್ಡ್ ಮಾಂಕ್’ ಸಿದ್ಧವಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ಸಿಕ್ಕರೆ ಕನ್ನಡದ ಇನ್ನೂ ಕೆಲವು ಸಿನಿಮಾಗಳು ಥಿಯೇಟರ್ಗೆ ಲಗ್ಗೆ ಇಡಲಿವೆ.
ಇದನ್ನೂ ಓದಿ:
ಪುನೀತ್ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್ ಮಾಂಕ್’ ಟ್ರೇಲರ್; ಇದರಲ್ಲಿದೆ ಹತ್ತಾರು ವಿಶೇಷತೆ
‘ಓಲ್ಡ್ ಮಾಂಕ್’ ಬಿಡುಗಡೆಗೆ ದಿನಾಂಕ ಫಿಕ್ಸ್; ಫೆ.25ಕ್ಕೆ ತೆರೆಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ಸಿನಿಮಾ