ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ನಿಶ್ಚಿತಾರ್ಥ, ಅಣ್ಣನಿಗೆ 2ನೇ ಮದುವೆ, ತಮ್ಮನಿಗೆ 2ನೇ ನಿಶ್ಚಿತಾರ್ಥ

Akhil Akkineni: ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ಶುಭ ಕಾರ್ಯ ನಡೆದಿದೆ. ನಾಗಾರ್ಜುನ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ ಸರಳವಾಗಿ ನಡೆದಿದೆ. ಇದು ಅವರಿಗೆ ಎರಡನೇ ನಿಶ್ಚಿತಾರ್ಥ.

ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ನಿಶ್ಚಿತಾರ್ಥ, ಅಣ್ಣನಿಗೆ 2ನೇ ಮದುವೆ, ತಮ್ಮನಿಗೆ 2ನೇ ನಿಶ್ಚಿತಾರ್ಥ
Follow us
ಮಂಜುನಾಥ ಸಿ.
|

Updated on:Nov 26, 2024 | 7:20 PM

ಅಕ್ಕಿನೇನಿ ಕುಟುಂಬ ಕಳೆದ ಕೆಲ ವರ್ಷಗಳಿಂದ ಸತತವಾಗಿ ಸುದ್ದಿಯಲ್ಲಿ ಇದ್ದೇ ಇದೆ. ಕೆಲ ಒಳ್ಳೆಯ ಕಾರಣಕ್ಕೆ ಕೆಲ ಕೆಟ್ಟ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇದೆ. ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ, ಸಮಂತಾ ಜೊತೆಗೆ ವಿಚ್ಛೇದನ ಪಡೆದುಕೊಂಡು ದೂರಾದರು. ವಿಚ್ಛೇದನದ ಕುರಿತು ಈಗಲೂ ಚರ್ಚೆ ಜಾರಿಯಲ್ಲಿದೆ. ಇತ್ತೀಚೆಗೆ ಅಕ್ಕಿನೇನಿ ಕುಟುಂಬದ ಬೃಹತ್ ಆಸ್ತಿಯೊಂದನ್ನು ತೆಲಂಗಾಣ ಸರ್ಕಾರ ನೆಲಸಮ ಮಾಡಿತ್ತು. ಅದೆ ಬೆನ್ನಲ್ಲೆ ನಾಗ ಚೈತನ್ಯ ನಟಿ ಶೋಭಿತಾ ಧುಲಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ಮದುವೆ ನಿಶ್ಚಯವಾಗಿದೆ.

ನಾಗಾರ್ಜುನ ಅವರ ಎರಡನೇ ಮಗ ಅಕ್ಕಿನೇನಿ ಅಖಿಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಲಾವಿದೆ ಝೈನಬ್ ರಾವ್ಡ್ಜೀ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಝೈನಬ್ ಹಾಗೂ ಅಖಿಲ್ ಕಳೆದ ಕೆಲ ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು ಎನ್ನಲಾಗಿದ್ದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಝೈನಬ್ ಚಿತ್ರಕಲಾವಿದೆ ಆಗಿದ್ದು ಭಾರತದ, ದುಬೈ, ಲಂಡನ್ ಇನ್ನಿತರೆ ಕಡೆಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ಮಾಡಿದ್ದಾರೆ.

ಝೈನಬ್ ತಂದೆ ಝುಲ್ಫಿ ಅವರು ವಿಖ್ಯಾತ ಜೆಡ್​ಆರ್​ ಇನ್​ಫ್ರಾ ಲಿಮಿಟೆಡ್​ನ ಮಾಲೀಕರಾಗಿದ್ದಾರೆ. ದೇಶದ ಅತ್ಯುತ್ತಮ ಕನ್​ಸ್ಟ್ರಕ್ಷನ್ ಸಂಸ್ಥೆಗಳಲ್ಲಿ ಒಂದಾಗಿದೆ ಜೆಡ್​ಆರ್​ ಇನ್​ಫ್ರಾ ಲಿಮಿಟೆಡ್​, ಝೈನಬ್ ಅವರ ಸಹೋದರ ಝೈನ್ ಅವರು ಜೆಡ್ ಆರ್ ರಿನೇವೆಬಲ್ಸ್ ಹೆಸರಿನ ಸೋಲಾರ್ ಶಕ್ತಿ ಸಂಸ್ಥೆಯೊಂದರ ಸಿಇಓ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ರಾವ್ಡ್ಜೀ ಕುಟುಂಬ ಆಂಧ್ರ-ತೆಲಂಗಾಣದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:CCL 2024: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಬಗ್ಗೆ ಅಖಿಲ್ ಅಕ್ಕಿನೇನಿ ಏನಂದ್ರು?

ಅಂದಹಾಗೆ ಅಕ್ಕಿನೇನಿ ನಾಗಾರ್ಜುನಗೆ ಇದು ಎರಡನೇ ನಿಶ್ಚಿತಾರ್ಥ. 2017 ರಲ್ಲಿ ಶ್ರೆಯಾ ಭೂಪಾಲ್ ಹೆಸರಿನ ಯುವತಿಯೊಟ್ಟಿಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ ಬಲು ಅದ್ಧೂರಿಯಾಗಿ ನೆರವೇರಿತ್ತು. ಜಿವಿಕೆ ರೆಡ್ಡಿಯವರ ಮೊಮ್ಮಗಳಾಗಿದ್ದ ಶ್ರೆಯಾ ಭೋಪಾಲ್ ಹಾಗೂ ಅಕ್ಕಿನೇನಿ ನಾಗಾರ್ಜುನ ನಿಶ್ಚಿತಾರ್ಥಕ್ಕೆ 700 ಕ್ಕೂ ಹೆಚ್ಚು ಮಂದಿ ಅತಿಥಿಗಳು ಆಗಮಿಸಿದ್ದರು. ಭಾರಿ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಆದರೆ ಆ ನಂತರ ಮದುವೆ ನಡೆಯಲಿಲ್ಲ.

ಈಗ ಝೈನಬ್ ಜೊತೆಗೆ ಅತ್ಯಂತ ಸರಳವಾಗಿ ನಿಶ್ಚಿತಾರ್ಥ ನಡೆದಿದ್ದು, ಕುಟುಂಬ ಸದಸ್ಯರು ಮಾತ್ರವೇ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. ಇನ್ನು ನಾಗಾರ್ಜುನ ಅವರ ಮೊದಲ ಪುತ್ರ ನಾಗ ಚೈತನ್ಯ ಸಹ ಶೋಭಿತಾ ಧುಲಿಪಾಲ ಜೊತೆಗೆ ತಿಂಗಳ ಹಿಂದಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಡಿಸೆಂಬರ್ 05 ರಂದು ಅವರು ವಿವಾಹ ಆಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 pm, Tue, 26 November 24