AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘40% ಸರ್ಕಾರ’ ಜಾಹೀರಾತಿನಲ್ಲಿ ಕಾಂಗ್ರೆಸ್ ಎಡವಟ್ಟು; ಕಾನೂನು ಹೋರಾಟಕ್ಕೆ ಮುಂದಾದ ನಟ

ಈ ಪೋಸ್ಟ್​ಗೆ ನಟ ಅಖಿಲ್ ಅಯ್ಯರ್ ಫೋಟೋ ಬಳಕೆ ಆಗಿದೆ. ಈ ಬಗ್ಗೆ ಅಖಿಲ್ ಅಪಸ್ವರ ತೆಗೆದಿದ್ದಾರೆ. ಒಪ್ಪಿಗೆ ಇಲ್ಲದೆ ಈ ಕ್ಯಾಂಪೇನ್​​ಗೆ ತಮ್ಮ ಫೋಟೋ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

‘40% ಸರ್ಕಾರ’ ಜಾಹೀರಾತಿನಲ್ಲಿ ಕಾಂಗ್ರೆಸ್ ಎಡವಟ್ಟು; ಕಾನೂನು ಹೋರಾಟಕ್ಕೆ ಮುಂದಾದ ನಟ
ಅಖಿಲ್
TV9 Web
| Edited By: |

Updated on: Sep 23, 2022 | 8:45 PM

Share

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಾಕಷ್ಟು ಟೀಕೆಗಳನ್ನು ಮಾಡುತ್ತಿದೆ. ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ 40% ಕಮಿಷನ್​ಮೇಲೆ ನಡೆಯುತ್ತಿದೆ’ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸುತ್ತಾ ಬಂದಿದೆ. ಬಿಜೆಪಿ ವಿರುದ್ಧ ಸತತ ಟೀಕೆ ಮಾಡುತ್ತಲೇ ಬರುತ್ತಿರುವ ಕಾಂಗ್ರೆಸ್​ ಈಗ ಇಕ್ಕಟ್ಟಿಗೆ ಸಿಲುಕಿದೆ. 40% ಸರ್ಕಾರ ಕ್ಯಾಂಪೇನ್​​​ನಲ್ಲಿ ಬಾಲಿವುಡ್​​ ನಟ ಅಖಿಲ್ ಅಯ್ಯರ್ (Akhil Iyer)​ ಫೋಟೋ ಬಳಕೆ ಆಗಿದೆ. ಈ ಫೋಟೋ ಬಳಕೆಗೆ ಕಾಂಗ್ರೆಸ್ ಅನುಮತಿ ಪಡೆದಿಲ್ಲ. ಈ ಕಾರಣದಿಂದ ಅಖಿಲ್​ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

‘40% ಸರ್ಕಾರ’ ಕ್ಯಾಂಪೇನ್​ಗೆ ಸಂಬಂಧಿಸಿ ಪೋಸ್ಟರ್​ ಒಂದನ್ನು ಕಾಂಗ್ರೆಸ್ ಹಂಚಿಕೊಂಡಿತ್ತು.  ‘40% ಸರ್ಕಾರವು 54 ಸಾವಿರ ಯುವಕರ ವೃತ್ತಿಜೀವನವನ್ನು ನಾಶ ಮಾಡಿದೆ’ ಎಂದು ಪೋಸ್ಟರ್​​ನಲ್ಲಿ ಬರೆಯಲಾಗಿದೆ. ಈ ಪೋಸ್ಟ್​ಗೆ ನಟ ಅಖಿಲ್ ಅಯ್ಯರ್ ಫೋಟೋ ಬಳಕೆ ಆಗಿದೆ. ಈ ಬಗ್ಗೆ ಅಖಿಲ್ ಅಪಸ್ವರ ತೆಗೆದಿದ್ದಾರೆ. ಒಪ್ಪಿಗೆ ಇಲ್ಲದೆ ಈ ಕ್ಯಾಂಪೇನ್​​ಗೆ ತಮ್ಮ ಫೋಟೋ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಟ್ವಿಟರ್​ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ವಿಧಾನಸಭೆ: ಬಿಎಂಎಸ್ ಅವ್ಯವಹಾರ ತನಿಖೆಗೆ ಜೆಡಿಎಸ್​ ಪಟ್ಟು, ಸ್ಪೀಕರ್ ಸಂಧಾನ ವಿಫಲ; ಕೊನೆಯ ದಿನದ ಕಲಾಪ ವ್ಯರ್ಥ
Image
40 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಸದನದಲ್ಲಿ ಸಹಮತ: ಕಾವೇರಿದ ಮಾತಿನ ಚಕಮಕಿ ನಿರೀಕ್ಷಿತ
Image
ಕೆರೆ ನುಂಗಿದವರನ್ನು ಸುಮ್ಮನೆ ಬಿಡಲ್ಲ, ತನಿಖೆ ಮಾಡಿಸಿ ಬಯಲಿಗೆ ತರ್ತೀನಿ: ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
Image
ಸಿಎಂ ಮಾಧ್ಯಮ ಸಂಯೋಜಕ ದಿ. ಗುರುಲಿಂಗಸ್ವಾಮಿ ಹೊಳಿಮಠ ಪತ್ನಿಗೆ ನೌಕರಿ ಮಂಜೂರು ಮಾಡಿದ ಸರ್ಕಾರ

‘40% ಸರ್ಕಾರ ಪೋಸ್ಟರ್​ನಲ್ಲಿ ನನ್ನ ಫೋಟೋ ಬಳಕೆ ಆಗಿದೆ. ಅಕ್ರಮವಾಗಿ ನನ್ನ ಫೋಟೋವನ್ನು ಕಾಂಗ್ರೆಸ್ ಬಳಸಿದೆ. ಕಾಂಗ್ರೆಸ್​ ಕ್ಯಾಂಪೇನ್​​ನಲ್ಲಿ ನನ್ನ ಪಾತ್ರವಿಲ್ಲ. ನಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ. ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರದ ಬಗ್ಗೆ ಗಮನ ಹರಿಸಬೇಕು’ ಎಂದು ಕೋರಿದ್ದಾರೆ ಅಖಿಲ್.

ಈ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಇಂಡಿಯನ್​ ಎಕ್ಸ್​ಪ್ರೆಸ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅಖಿಲ್ ಟ್ವೀಟ್ ನೋಡಿದ ನಂತರದಲ್ಲಿ ನಾವು ಆ ಪೋಸ್ಟ್​ಅನ್ನು ಡಿಲೀಟ್ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: 40 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಸದನದಲ್ಲಿ ಸಹಮತ: ಕಾವೇರಿದ ಮಾತಿನ ಚಕಮಕಿ ನಿರೀಕ್ಷಿತ

ಅಖಿಲ್ ಅವರು ಹಿಂದಿ ಚಿತ್ರರಂಗದಲ್ಲಿ ನಟಿಸಿದ್ದಾರೆ. 2014ರಲ್ಲಿ ತೆರೆಗೆ ಬಂದ ‘ಲೇಕರ್ ಹಂ ದೀವಾನಾ ದಿಲ್​’ ಚಿತ್ರ ಅವರ ಮೊದಲ ಸಿನಿಮಾ. ನಂತರ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದರು. ಈ ವರ್ಷ ತೆರೆಗೆ ಬಂದ ಹಿಂದಿಯ ‘ಹಿಟ್​: ದಿ ಫಸ್ಟ್ ಕೇಸ್​’ ಚಿತ್ರದಲ್ಲೂ ಅಖಿಲ್ ನಟಿಸಿದ್ದಾರೆ. ಅಖಿಲ್ ಅವರು ಜನಿಸಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ.

Follow Us
TV9 Web
TV9 Web

TV9 Kannada

Read More
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ