AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮತ್ತೆ ಮುಗ್ಗರಿಸಿದರೂ ಬುದ್ಧಿ ಕಲಿಯದ ಆಲಿಯಾ ಭಟ್

Alia Bhatt movie: ಆಲಿಯಾ ಭಟ್, ಬಾಲಿವುಡ್​​ನ ಕೆಲವೇ ಕೆಲವು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ. ಮೊದಲೆಲ್ಲ ಪಾತ್ರಗಳ ಆಯ್ಕೆ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳದಿದ್ದ ಆಲಿಯಾ ಭಟ್ ಮದುವೆಯಾದ ಬಳಿಕ ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದರೆ ಪದೇ ಪದೇ ಮುಗ್ಗರಿಸಿ ಬೀಳುತ್ತಿದ್ದಾರೆ. ಹಾಗಿದ್ದರೂ ಸಹ ಬುದ್ಧಿ ಕಲಿಯುತ್ತಿಲ್ಲ. ಇದೇ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಮತ್ತೆ ಮತ್ತೆ ಮುಗ್ಗರಿಸಿದರೂ ಬುದ್ಧಿ ಕಲಿಯದ ಆಲಿಯಾ ಭಟ್
Alia Bhatt Movie
ಮಂಜುನಾಥ ಸಿ.
|

Updated on:Jul 03, 2026 | 7:15 PM

Share

ಆಲಿಯಾ ಭಟ್ (Alia Bhatt), ಬಾಲಿವುಡ್​​ನ ಟಾಪ್ ನಟಿ. ಅದ್ಭುತ ನಟಿ ಆಗಿರುವ ಜೊತೆಗೆ ಬಳುಕುವ ಸುಂದರಿ ಸಹ. ಆಲಿಯಾ ಭಟ್, ಬಾಲಿವುಡ್​​ನ ಕೆಲವೇ ಕೆಲವು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ. ಮೊದಲೆಲ್ಲ ಪಾತ್ರಗಳ ಆಯ್ಕೆ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳದಿದ್ದ ಆಲಿಯಾ ಭಟ್ ಮದುವೆಯಾದ ಬಳಿಕ ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದರೆ ಪದೇ ಪದೇ ಮುಗ್ಗರಿಸಿ ಬೀಳುತ್ತಿದ್ದಾರೆ. ಹಾಗಿದ್ದರೂ ಸಹ ಬುದ್ಧಿ ಕಲಿಯುತ್ತಿಲ್ಲ. ಇದೇ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಸಪೂರ ಸುಂದರಿ, ಒಳ್ಳೆಯ ನಟಿ ಆಗಿರುವ ಆಲಿಯಾ ಭಟ್, ‘ಪಕ್ಕದ ಮನೆ ಹುಡುಗಿ’ ಪಾತ್ರಕ್ಕೆ ಬಲು ಒಪ್ಪವಾಗಿ ಒಪ್ಪುವ ದೇಹಭಾಷೆ, ಮುಖಚಹರೆ ಇರುವ ನಟಿ ಆದರೆ ಆಲಿಯಾ ತಮ್ಮನ್ನು ತಾವು ಆಕ್ಷನ್ ಕ್ವೀನ್ ಎಂದು ಬಾಲಿವುಡ್​​ನಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅವರ ಈ ಪ್ರಯೋಗ ಪದೇ ಪದೇ ಫೇಲ್ ಆಗುತ್ತಿದೆ. ಆದರೂ ಸಹ ಹಿಂದಿನ ಸೋಲುಗಳಿಂದ ಬುದ್ಧಿ ಕಲಿಯದೆ ಮತ್ತೆ ಮತ್ತೆ ಅದೇ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಮತ್ತೆ ಮತ್ತೆ ಸೋಲುತ್ತಲೇ ಇದ್ದಾರೆ.

ಆಲಿಯಾ ಭಟ್​​ಗೆ ಆಕ್ಷನ್ ನಾಯಕಿ ಆಗುವ ಹುಚ್ಚು ಹತ್ತಿದ್ದು ಹಾಲಿವುಡ್ ಸಿನಿಮಾದಿಂದ. ಅವರು 2023 ರಲಗಲಿ ‘ಹಾರ್ಟ್ ಆಫ್ ಸ್ಟೋನ್’ ಹೆಸರಿನ ಹಾಲಿವುಡ್ ಸಿನಿಮಾನಲ್ಲಿ ಗಲ್ ಗಡೋಟ್ ಜೊತೆಗೆ ನಟಿಸಿದ್ದರು. ಆ ಸಿನಿಮಾನಲ್ಲಿ ಆಲಿಯಾ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಅಲ್ಲಿಗೆ ಸುಮ್ಮನಾಗದ ಆಲಿಯಾ ಭಟ್, 2024 ರಲ್ಲಿ ‘ಜಿಗ್ರಾ’ ಹೆಸರಿನ ಸಿನಿಮಾಣಲ್ಲಿ ನಟಿಸಿದರು. ಆ ಸಿನಿಮಾ ಸಹ ಆಕ್ಷನ್ ಸಿನಿಮಾ. ಆದರೆ ಪುಟ್ಟ ಗುಬ್ಬಿಯಂಥಹಾ ಆಲಿಯಾ ಭಟ್, ಆಕ್ಷನ್ ಮಾಡುವುದನ್ನು ಜನ ಒಪ್ಪಿಕೊಳ್ಳಲಿಲ್ಲ. ‘ಜಿಗ್ರಾ’ ಬಾಕ್ಸ್ ಆಫೀಸ್​​ನಲ್ಲಿ ಹೀನಾಯವಾಗಿ ಸೋತಿತು.

ಇದನ್ನೂ ಓದಿ:‘ಇಷ್ಟು ಕೆಟ್ಟ ಸಿನಿಮಾ ನೋಡಿಲ್ಲ’; ‘ಆಲ್ಫಾ’ ನೋಡಿ ನೇರ ವಿಮರ್ಶೆ ತಿಳಿಸಿದ ಫ್ಯಾನ್ಸ್

ಆದರೆ ಆ ಸೋಲಿನಿಂದಲೂ ಬುದ್ಧಿ ಕಲಿಯದ ಆಲಿಯಾ ಭಟ್ ಮತ್ತೊಂದು ಆಕ್ಷನ್ ಸಿನಿಮಾ ‘ಆಲ್ಫಾ’ನಲ್ಲಿ ನಟಿಸಿದ್ದಾರೆ. ಯಶ್ ರಾಜ್ ಫಿಲಮ್ಸ್ ನಿರ್ಮಿಸಿರುವ ಈ ಸ್ಪೈ ಆಕ್ಷನ್ ಸಿನಿಮಾನಲ್ಲಿ ಆಲಿಯಾ ಭಟ್ ನಾಯಕಿ. ಈ ಸಿನಿಮಾ ಮೊದಲ ದಿನವೇ ನಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸೋಲುವುದು ಪಕ್ಕಾ ಎನ್ನಲಾಗುತ್ತಿದೆ. ಏನೇ ಆಗಲಿ, ಆಲಿಯಾ ತಮ್ಮ ಸೋಲಿನಿಂದ ಬುದ್ಧಿಕಲಿಯುತ್ತಿಲ್ಲ ಎಂಬುದೇ ಅವರ ಅಭಿಮಾನಿಗಳ ಬೇಸರ. ಅಂದಹಾಗೆ ‘ಆಲ್ಫಾ’ ಬಳಿಕ ಅವರು ತಮ್ಮ ಪತಿ ರಣ್​​ಬೀರ್ ಕಪೂರ್ ಅವರೊಟ್ಟಿಗೆ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲೂ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Fri, 3 July 26

Follow Us
ರಾಜಕೀಯದಲ್ಲೂ ಧರ್ಮ ಇಟ್ಟುಕೊಂಡು ಕೆಲಸ ಮಾಡಬೇಕು: ಡಿಕೆಶಿ
ರಾಜಕೀಯದಲ್ಲೂ ಧರ್ಮ ಇಟ್ಟುಕೊಂಡು ಕೆಲಸ ಮಾಡಬೇಕು: ಡಿಕೆಶಿ
1 ಗಂಟೆ ಮೋಡ ಬಿತ್ತನೆಗೆ ಎಷ್ಟು ಖರ್ಚು? ವಿವರಿಸಿದ ಶಾಸಕ
1 ಗಂಟೆ ಮೋಡ ಬಿತ್ತನೆಗೆ ಎಷ್ಟು ಖರ್ಚು? ವಿವರಿಸಿದ ಶಾಸಕ
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD