ಆಲಿಯಾ ಭಟ್ ಕಡೆಯಿಂದ ಗುಡ್ನ್ಯೂಸ್; ಖುಷಿಪಟ್ಟ ಫ್ಯಾನ್ಸ್
ಆಲಿಯಾ ಭಟ್ ಕೇವಲ ಗ್ಲಾಮರ್ ಪಾತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ‘ರಾಜಿ’, ‘ಗಂಗೂಬಾಯಿ ಕಾಠಿಯಾವಾಡಿ’ ಅಂತಹ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈಗ ಅವರ ಅಭಿನಯದ ‘ಡಾರ್ಲಿಂಗ್ಸ್’ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

ನಟಿ ಆಲಿಯಾ ಭಟ್ (Alia Bhatt) ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಏಪ್ರಿಲ್ನಲ್ಲಿ ಮದುವೆ ಆದರು. ಆ ಬಳಿಕ ಕೇವಲ ಎರಡೂವರೆ ತಿಂಗಳಿಗೆ ಪ್ರೆಗ್ನೆಂಟ್ ಎಂದು ಘೋಷಿಸಿದರು. ಈ ಮಧ್ಯೆ ಅವರು ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಈಗ ಆಲಿಯಾ ಭಟ್ ನಟನೆಯ ಹೊಸ ಸಿನಿಮಾ ‘ಡಾರ್ಲಿಂಗ್ಸ್’ ರಿಲೀಸ್ಗೆ ರೆಡಿ ಇದೆ. ಆಗಸ್ಟ್ 5ರಂದು ಈ ಚಿತ್ರ ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಈಗ ಅವರ ಕಡೆಯಿಂದ ಗುಡ್ನ್ಯೂಸ್ ಒಂದು ಸಿಕ್ಕಿದೆ.
ಆಲಿಯಾ ಭಟ್ ಕೇವಲ ಗ್ಲಾಮರ್ ಪಾತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ‘ರಾಜಿ’, ‘ಗಂಗೂಬಾಯಿ ಕಾಠಿಯಾವಾಡಿ’ ಅಂತಹ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈಗ ಅವರ ಅಭಿನಯದ ‘ಡಾರ್ಲಿಂಗ್ಸ್’ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಆಲಿಯಾ ಗ್ಲಾಮರ್ ರಹಿತ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಟೀಸರ್ ಗಮನ ಸೆಳೆದಿತ್ತು. ಈಗ ಟ್ರೇಲರ್ ರಿಲೀಸ್ ಬಗ್ಗೆ ಅವರು ಅಪ್ಡೇಟ್ ನೀಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ಡಾರ್ಲಿಂಗ್ಸ್’ ಚಿತ್ರದ ಟ್ರೇಲರ್ ಜುಲೈ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಆಲಿಯಾ, ಶೆಫಾಲಿ ಶಾ, ವಿಜಯ್ ವರ್ಮಾ ಹಾಗೂ ಮಲಯಾಳಂ ನಟ ರೋಶನ್ ಮ್ಯಾಥೀವ್ ನಟಿಸುತ್ತಿದ್ದಾರೆ. ‘ಡಾರ್ಲಿಂಗ್ಸ್’ ಚಿತ್ರದ ಬಗ್ಗೆ ಅಪ್ಡೇಟ್ ನೀಡಿರುವ ಆಲಿಯಾ ‘ಸೋಮವಾರ ಟ್ರೇಲರ್ ರಿಲೀಸ್ ಆಗಲಿದೆ’ ಎಂದಿದ್ದಾರೆ.
ಆಲಿಯಾ ಭಟ್ ಅವರು ಇದೇ ಮೊದಲ ಬಾರಿಗೆ ನಿರ್ಮಾಣಕ್ಕೆ ಇಳಿದಿದ್ದಾರೆ. ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಎಂಬುದು ಅವರ ನಿರ್ಮಾಣ ಸಂಸ್ಥೆಯ ಹೆಸರು. ಈ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ‘ಡಾರ್ಲಿಂಗ್ಸ್’. ಈ ಕಾರಣಕ್ಕೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಇದನ್ನೂ ಓದಿ: ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ
ಆಲಿಯಾ ಭಟ್ ಅವರು ‘ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಹಾಲಿವುಡ್ ಸಿನಿಮಾ. ಈ ಚಿತ್ರದ ಶೂಟಿಂಗ್ಗಾಗಿ ಅವರು ಲಂಡನ್ಗೆ ತೆರಳಿದ್ದರು. ಶೂಟಿಂಗ್ ಪೂರ್ಣಗೊಳಿಸಿದ ಬಳಿಕ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದರು.








