Rashmika Mandanna: ಅಕ್ಟೋಬರ್ನಲ್ಲಿ ‘ಗುಡ್ಬೈ’ ಹೇಳಲಿದ್ದಾರೆ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದರು. ನಂತರ ಅವರ ಖ್ಯಾತಿ ಹೆಚ್ಚುತ್ತಲೇ ಹೋಯಿತು. ಟಾಲಿವುಡ್, ಕಾಲಿವುಡ್ನಲ್ಲಿ ಮಿಂಚಿದರು. ಶೀಘ್ರದಲ್ಲೇ ಅವರ ಮೊದಲ ಹಿಂದಿ ಚಿತ್ರ ರಿಲೀಸ್ ಆಗಲಿದೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಒಂದಾದಮೇಲೆ ಒಂದರಂತೆ ಹೊಸಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ನಟನೆಯ ‘ಗುಡ್ಬೈ’ ಚಿತ್ರ (GoodBye) ರಿಲೀಸ್ಗೆ ರೆಡಿ ಇದೆ. ಇತ್ತೀಚೆಗಷ್ಟೇ ಶೂಟಿಂಗ್ ಪೂರ್ಣಗೊಳಿಸಿದ್ದ ತಂಡ, ಈಗ ರಿಲೀಸ್ ದಿನಾಂಕವನ್ನು ಲಾಕ್ ಮಾಡಿದೆ. ಅಕ್ಟೋಬರ್ 7ರಂದು ಈ ಚಿತ್ರ ತೆರೆಗೆ ಬರಲಿದೆ. ಈ ವಿಚಾರ ಕೇಳಿ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಖುಷಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದರು. ನಂತರ ಅವರ ಖ್ಯಾತಿ ಹೆಚ್ಚುತ್ತಲೇ ಹೋಯಿತು. ಟಾಲಿವುಡ್, ಕಾಲಿವುಡ್ನಲ್ಲಿ ಮಿಂಚಿದರು. ಈಗ ಮಲಯಾಳಂ ಹಾಗೂ ಹಿಂದಿ ಚಿತ್ರರಂಗಕ್ಕೆ ಅವರು ಕಾಲಿಟ್ಟಾಗಿದೆ. ಶೀಘ್ರದಲ್ಲೇ ಅವರ ಮೊದಲ ಹಿಂದಿ ಚಿತ್ರ ರಿಲೀಸ್ ಆಗಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿದ್ದಾರ್ಥ್ ಮಲ್ಹೋತ್ರ ಜತೆಗೆ ನಟಿಸಿದ ‘ಮಿಷನ್ ಮಜ್ನು’ ಸಿನಿಮಾ ಈಗಾಗಲೇ ತೆರೆಗೆ ಬರಬೇಕಿತ್ತು. ಆದರೆ, ಈ ಸಿನಿಮಾ ಕೆಲಸಗಳು ವಿಳಂಬವಾಗಿವೆ. ಈ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಲೇ ಇದೆ. ಹೀಗಾಗಿ, ಈ ಚಿತ್ರಕ್ಕಿಂತ ಮೊದಲು ‘ಗುಡ್ಬೈ’ ತೆರೆಗೆ ಬರುತ್ತಿದೆ. ಇದು ರಶ್ಮಿಕಾ ಅವರ ಮೊದಲ ಬಾಲಿವುಡ್ ಚಿತ್ರ ಆಗಲಿದೆ.
ಅಮಿತಾಭ್ ಬಚ್ಚನ್ ಅವರ ಜತೆ ನಟಿಸಬೇಕು ಎಂಬುದು ಅನೇಕರ ಕನಸು. ಈ ಕನಸು ರಶ್ಮಿಕಾ ಮಂದಣ್ಣ ಪಾಲಿಗೆ ನನಸಾಗಿದೆ. ಸೆಟ್ನಲ್ಲಿ ಅಮಿತಾಭ್ ಜತೆ ಕಳೆದ ಸಮಯ ಹಾಗೂ ಅವರ ಜತೆಗಿನ ಶೂಟಿಂಗ್ ಅನುಭವದ ಬಗ್ಗೆ ರಶ್ಮಿಕಾ ಮಂದಣ್ಣ ಈ ಮೊದಲು ಮಾಹಿತಿ ಹಂಚಿಕೊಂಡಿದ್ದರು. ಅಷ್ಟು ಎತ್ತರಕ್ಕೆ ಬೆಳೆದರೂ ಅಮಿತಾಭ್ ಸೆಟ್ನಲ್ಲಿ ತುಂಬಾನೇ ಸಿಂಪಲ್ ಆಗಿ ಇರುತ್ತಿದ್ದರು ಎಂದು ರಶ್ಮಿಕಾ ಮಂದಣ್ಣ ಈ ಮೊದಲು ಹೇಳಿಕೊಂಡಿದ್ದರು.
AMITABH BACHCHAN – RASHMIKA MANDANNA: ‘GOOD BYE’ ON 7 OCT 2022… #GoodBye – starring #AmitabhBachchan and #RashmikaMandanna – locks the release date: 7 Oct 2022… Costars #NeenaGupta and #PavailGulati with #ElliAvrRam, #SunilGrover and #SahilMehta. pic.twitter.com/qOlXFrTeE7
— taran adarsh (@taran_adarsh) July 23, 2022
ಇದನ್ನೂ ಓದಿ: ಅಬುಧಾಬಿಯಲ್ಲಿ ರಶ್ಮಿಕಾ ಮಂದಣ್ಣ: ಮುಖದಲ್ಲಿ ಉಕ್ಕಿದ ಖುಷಿಗೆ ಕಾರಣ ತಿಳಿಸಿದ ನಟಿ
‘ಗುಡ್ಬೈ’ ಕಾಮಿಡಿ ಸಿನಿಮಾ. ಈ ಚಿತ್ರಕ್ಕೆ ಏಕ್ತಾ ಕಪೂರ್ ಅವರು ಬಂಡವಾಳ ಹೂಡಿದ್ದಾರೆ. ವಿಕಾಸ್ ಬಹಲ್ ನಿರ್ದೇಶನ ಮಾಡಿದ್ದಾರೆ. ಅಮಿತಾಭ್, ರಶ್ಮಿಕಾ ಜತೆಗೆ ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್ ಹಾಗೂ ಪವೇಲ್ ಗುಲಾಟಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.