Alia Bhatt: ಆಲಿಯಾ ಫ್ಯಾನ್ಸ್ಗೆ ಖುಷಿ ಸುದ್ದಿ; ಇಲ್ಲಿದೆ ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಹೊಸ ಸಮಾಚಾರ
Gangubai Kathiawadi: ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಕೆಲ ದಿನಗಳ ಹಿಂದಷ್ಟೇ ರಿಲೀಸ್ ದಿನಾಂಕ ಘೋಷಿಸಿತ್ತು. ಇದೀಗ ಹೊಸ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಲಾಗಿದೆ.
ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಪಾತ್ರ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪೈಕಿ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಬಹುದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಆದರೆ ಕೊರೊನಾ ಕಾರಣದಿಂದ ಈಗಾಗಲೇ ಚಿತ್ರದ ರಿಲೀಸ್ ಹಲವು ಬಾರಿ ಮುಂದೂಡಲ್ಪಟ್ಟಿದೆ. ಅಂತಿಮವಾಗಿ ಫೆಬ್ರವರಿ 25ರಂದು ತೆರೆಗೆ ಬರಲಿರುವುದಾಗಿ ಚಿತ್ರತಂಡ ಇತ್ತೀಚೆಗೆ ಘೋಷಿಸಿತ್ತು. ಈಗಾಗಲೇ ಟೀಸರ್ ಹಾಗೂ ಪೋಸ್ಟರ್ಗಳಿಂದ ಚಿತ್ರ ಗಮನ ಸೆಳೆದಿತ್ತು. ಅಲ್ಲದೇ ಸಂಜಯ್ ಲೀಲಾ ಭನ್ಸಾಲಿ (Sanjay Leela Bhansali) ಸಿನಿಮಾಗಳೆಂದರೆ ಅದ್ದೂರಿತನ ಇರುವುದೇ. ಇದು ಟೀಸರ್ನಲ್ಲೂ ಕಂಡುಬಂದಿತ್ತು. ಆದ್ದರಿಂದಲೇ ಆಲಿಯಾ ಭಟ್ ಅಭಿಮಾನಿಗಳು ಚಿತ್ರಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದಾರೆ. ಅಂತಿಮವಾಗಿ ರಿಲೀಸ್ ದಿನಾಂಕ ಘೋಷಣೆಯಾಗಿದ್ದು ಅವರ ಸಂಭ್ರಮ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಆಲಿಯಾ ಭಟ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
‘ಗಂಗೂಬಾಯಿ ಕಾಠಿಯಾವಾಡಿ’ ಟ್ರೈಲರ್ ಬಿಡುಗಡೆ ಯಾವಾಗ?
ಆಲಿಯಾ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಅದರಲ್ಲೇ ಟ್ರೈಲರ್ ರಿಲೀಸ್ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. ಫೆಬ್ರವರಿ 4ರ ಶುಕ್ರವಾರದಂದು ಟ್ರೈಲರ್ ಬಿಡುಗಡೆಯಾಗಲಿದೆ. ಹೊಸ ಪೋಸ್ಟರ್ನಲ್ಲಿ ಆಲಿಯಾ ಮಾಸ್ ಲುಕ್ನಿಂದ ಗಮನ ಸೆಳೆಯುತ್ತಿದ್ದಾರೆ. ಆಲಿಯಾ ಗೆಟಪ್ ಇದೀಗ ವೈರಲ್ ಆಗಿದ್ದು, ಅವರ ತಾಯಿ ಸೋನಿ ರಾಜ್ದಾನ್ ಸೇರಿದಂತೆ ಹಲವರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ಟ್ರೈಲರ್ ರಿಲೀಸ್ ಕುರಿತು ಆಲಿಯಾ ಹಂಚಿಕೊಂಡ ಪೋಸ್ಟ್:
View this post on Instagram
ಗಂಗೂಬಾಯಿ ಕಾಠಿಯಾವಾಡಿ ಎಲ್ಲರ ಗಮನ ಸೆಳೆಯಲು ಪ್ರಮುಖ ಕಾರಣ ಅದರ ಕತೆ. 1960ರ ಸಂದರ್ಭದಲ್ಲಿ ಮುಂಬೈನ ಕಾಮಾಠಿಪುರದಲ್ಲಿ ಪ್ರಭಾವಿಯಾಗಿದ್ದ ಗಂಗೂಬಾಯಿಯ ಕತೆಯನ್ನು ಚಿತ್ರ ಒಳಗೊಂಡಿದೆ. ಸಿನಿಮಾ ತಯಾರಾಗಿರುವುದು ಲೇಖಕ ಹುಸೇನ್ ಜೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕವನ್ನು ಆಧರಿಸಿ. ಚಿತ್ರದ ನಿರ್ಮಾಣವನ್ನು ಸ್ವತಃ ಭನ್ಸಾಲಿಯವೇ ಹೊತ್ತಿದ್ದಾರೆ. ಸಹನಿರ್ಮಾಣವನ್ನು ‘ಪೆನ್ ಇಂಡಿಯಾ ಲಿಮಿಟೆಡ್’ ಬ್ಯಾನರ್ನಲ್ಲಿ ಜಯಂತಿಲಾಲ್ ಗಡ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ 2021ರ ಜೂನ್ನಲ್ಲೇ ಮುಕ್ತಾಯವಾಗಿತ್ತು. ನಂತರ ಹಲವು ಬಾರಿ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿತ್ತು. ಕೆಲ ದಿನಗಳ ಮೊದಲು ಫೆಬ್ರವರಿ 18ರಂದು ತೆರೆಗೆ ಬರಲು ಚಿತ್ರತಂಡ ನಿರ್ಧರಿಸಿ, ಘೋಷಣೆಯನ್ನೂ ಮಾಡಿತ್ತು. ಇದೀಗ ಒಂದು ವಾರದ ನಂತರ ಅಂದರೆ ಫೆಬ್ರವರಿ 25ರಂದು ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.
ಇದನ್ನೂ ಓದಿ:
‘ಗಂಗೂಬಾಯಿ ಕಾಠಿಯಾವಾಡಿ’ ರಿಲೀಸ್ ದಿನಾಂಕ ಘೋಷಣೆ; ಕೊವಿಡ್ ಮಧ್ಯೆ ಗೆಲ್ಲಲಿದೆಯೇ ಆಲಿಯಾ ಚಿತ್ರ?
ಪುರುಷರ ಟಾಯ್ಲೆಟ್ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ-ಆಲಿಯಾ ಭಟ್; ಇದರ ಹಿಂದಿದೆ ಅಚ್ಚರಿಯ ಕಥೆ
Published On - 2:02 pm, Wed, 2 February 22