ಅಲ್ಲು ಅರ್ಜುನ್ ಮತ್ತು ಬೆಸಿಲ್ ಜೋಸೆಫ್ ಕಾಂಬಿನೇಷನ್ ಸಿನಿಮಾ ಫಿಕ್ಸ್? 2027ರಲ್ಲಿ ಶುರು

ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಬೆಸಿಲ್ ಜೋಸೆಫ್ ಹೊಸ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಿದೆ. ಗೋವಾದ ಇಫಿ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಸಿಲ್ ಜೋಸೆಫ್, 2027ರಲ್ಲಿ ತಮ್ಮ ಮುಂದಿನ ಚಿತ್ರ ಶುರುವಾಗಲಿದೆ ಎಂದಿದ್ದಾರೆ. ಇದು ಬೇರೆ ಭಾಷೆಯ ಸಿನಿಮಾವಾಗಿದ್ದು, ಅಲ್ಲು ಅರ್ಜುನ್ ಜೊತೆಗಿನ ಪ್ರಾಜೆಕ್ಟ್ ಎಂಬ ನಿರೀಕ್ಷೆ ಮೂಡಿಸಿದೆ.

ಅಲ್ಲು ಅರ್ಜುನ್ ಮತ್ತು ಬೆಸಿಲ್ ಜೋಸೆಫ್ ಕಾಂಬಿನೇಷನ್ ಸಿನಿಮಾ ಫಿಕ್ಸ್? 2027ರಲ್ಲಿ ಶುರು
ಅಲ್ಲು ಅರ್ಜುನ್

Updated on: Nov 27, 2026 | 8:58 AM

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಅಟ್ಲೀ ನಿರ್ದೇಶನದ ‘ರಾಕಾ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಮಲಯಾಳಂನ ಖ್ಯಾತ ನಿರ್ದೇಶಕ ಬೆಸಿಲ್ ಜೋಸೆಫ್ ಜೊತೆ ಅಲ್ಲು ಅರ್ಜುನ್ ಕೈಜೋಡಿಸಲಿದ್ದಾರೆ ಎಂಬ ಮಾತು ಜೋರಾಗಿದೆ. ಇದೀಗ ಸ್ವತಃ ಬೆಸಿಲ್ ಜೋಸೆಫ್ ತಮ್ಮ ಮುಂದಿನ ಸಿನಿಮಾ ಕುರಿತು ದೊಡ್ಡ ಸುಳಿವು ನೀಡಿದ್ದಾರೆ. 2027ರಲ್ಲಿ ಹೊಸ ಚಿತ್ರ ಸೆಟ್ಟೇರಲಿದೆ ಎಂದು ಅವರು ಖಚಿತಪಡಿಸಿದ್ದಾರೆ.

ಗೋವಾದಲ್ಲಿ ನಡೆದ ಸಿನಿಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಸಿಲ್ ಜೋಸೆಫ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಹಂಚಿಕೊಂಡಿದ್ದಾರೆ. ಸದ್ಯ ಹೊಸ ಕಥೆಯ ಮೇಲೆ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮುಂದಿನ ವರ್ಷ ಅಂದರೆ 2027ರಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ. ಇದು ಹಿಂದಿ ಸಿನಿಮಾವಲ್ಲ. ಬದಲಾಗಿ ಬೇರೆ ಭಾಷೆಯ ಚಿತ್ರವಾಗಿದೆ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.

Loading...

ಈ ಹಿಂದೆ ಅಲ್ಲು ಅರ್ಜುನ್ ಮತ್ತು ಬೆಸಿಲ್ ಜೋಸೆಫ್ ಕಾಂಬಿನೇಷನ್ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಸ್ಥಗಿತಗೊಂಡಿರುವ ‘ಶಕ್ತಿಮಾನ್’ ಸಿನಿಮಾವನ್ನು ಇವರಿಬ್ಬರು ಮಾಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ‘ಮಿನ್ನಲ್ ಮುರಳಿ’ ಸಹ-ಬರಹಗಾರ ಅರುಣ್ ಅನಿರುದ್ಧನ್ ಈ ವದಂತಿಯನ್ನು ತಳ್ಳಿಹಾಕಿದ್ದರು. ಅಲ್ಲು ಅರ್ಜುನ್‌ಗೆ ಶಕ್ತಿಮಾನ್ ಕಥೆ ಹೇಳಿಲ್ಲ ಎಂದಿದ್ದರು. ಇದು ಸಂಪೂರ್ಣ ಹೊಸ ಬಗೆಯ ಸಿನಿಮಾ ಎಂದು ಸ್ಪಷ್ಟಪಡಿಸಿದ್ದರು.

ಬೆಸಿಲ್ ಜೋಸೆಫ್ 2021ರಲ್ಲಿ ‘ಮಿನ್ನಲ್ ಮುರಳಿ’ ಎಂಬ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಿದ್ದರು. ಟೊವಿನೋ ಥಾಮಸ್ ನಟನೆಯ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಸಿಡಿಲು ಬಡಿದು ವಿಶೇಷ ಶಕ್ತಿ ಪಡೆಯುವ ಸಾಮಾನ್ಯ ಯುವಕನ ಕಥೆ ಎಲ್ಲರ ಗಮನ ಸೆಳೆದಿತ್ತು. ಈಗ ಬೆಸಿಲ್ ಜೋಸೆಫ್ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿರುವುದು ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ: ಮಗ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವೆ ಎಂದ ಅಲ್ಲು ಅರವಿಂದ್

ಅಲ್ಲು ಅರ್ಜುನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. ಸಾಯಿ ಅಭಯಂಕರ್ ಸಂಗೀತ ನೀಡುತ್ತಿದ್ದಾರೆ. ಇದಾದ ಬಳಿಕ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ‘AA23’ ಸಿನಿಮಾದಲ್ಲೂ ಅಲ್ಲು ಅರ್ಜುನ್ ನಟಿಸಲಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us