ಚಿತ್ರರಂಗ ತೊರೆಯುವ ನಿರ್ಧಾರ ತೆಗೆದುಕೊಂಡ ‘ಪುಷ್ಪ 2’ ನಿರ್ದೇಶಕ ಸುಕುಮಾರ್; ಓಪನ್ ಹೇಳಿಕೆ
ಅಲ್ಲು ಅರ್ಜುನ್ ಅವರ ಬಂಧನದ ಬಳಿಕ ಹಲವು ವಿಚಾರ ಚರ್ಚೆ ಆಗಿದೆ. 'ಪುಷ್ಪ 2' ಚಿತ್ರದ ಯಶಸ್ಸಿನ ನಡುವೆಯೇ ಉಂಟಾದ ಈ ವಿವಾದದಿಂದ ಅಲ್ಲು ಅರ್ಜುನ್ ಹೆಸರು ಚರ್ಚೆಯಲ್ಲಿದೆ. ಈಗ ಸುಕುಮಾರ್ ಅವರು ನೀಡಿದ ಹೇಳಿಕೆ ಚರ್ಚೆಯಲ್ಲಿದೆ. ಅವರು ಚಿತ್ರರಂಗ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಎಲ್ಲ ಕಡೆಗಳಲ್ಲಿ ಅಲ್ಲು ಅರ್ಜುನ್ ಅವರ ವಿವಾದ ಚರ್ಚೆ ಆಗುತ್ತಿದೆ. ನಟನ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದು ಸಾಕಷ್ಟು ಶಾಕಿಂಗ್ ಎನಿಸಿದೆ. ಈ ಮಧ್ಯೆ ಅವರು ಚಿತ್ರರಂಗ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿಚಾರ ಕೇಳಿ ಅನೇಕರು ಶಾಕ್ ಆಗಿದ್ದಾರೆ. ಸ್ವತಃ ಪಕ್ಕದಲ್ಲೇ ಇದ್ದ ರಾಮ್ ಚರಣ್ ಕೂಡ ಈ ವಿಚಾರದಿಂದ ಬೆಚ್ಚಿ ಬಿದ್ದರು. ಅವರು ಸಿನಿಮಾ ರಂಗ ತೊರೆಯಬಾರದು ಎನ್ನುವ ಆಗ್ರಹ ಜೋರಾಗಿದೆ.
ಹೈದರಾಬಾದ್ನ ಈವೆಂಟ್ ಒಂದರಲ್ಲಿ ರಾಮ್ ಚರಣ್ ಭಾಗಿ ಆಗಿದ್ದರು. ಈ ವೇಳೆ ಅವರಿಗೆ ‘ನೀವು ಏನನ್ನು ತೊರೆಯಲು ಬಯಸುತ್ತೀರಿ’ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರವಾಗಿ ‘ಸಿನಿಮಾ’ ಎಂದಿದ್ದಾರೆ ಸುಕುಮಾರ್. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಆಗ ಅಲ್ಲಿದ್ದವರು, ‘ನೀವು ಚಿತ್ರರಂಗ ತೊರೆಯಬಾರದು ಎಂದು ಹೇಳಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಮೊದಲು ಕೂಡ ಅವರು ಚಿತ್ರರಂಗ ತೊರೆಯುವ ಬಗ್ಗೆ ಮಾತನಾಡಿದ್ದರು. ಆದರೆ, ಚಿತ್ರರಂಗ ಬಿಟ್ಟು ಹೋಗಿಲ್ಲ.
ಅಲ್ಲು ಅರ್ಜುನ್ ಅವರು ಸದ್ಯ ವಿವಾದದ ಮೂಲಕ ಸುದ್ದಿ ಆಗಿದ್ದಾರೆ. ಅವರ ನಟನೆಯ ‘ಪುಷ್ಪ 2’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಬಂಧನಕ್ಕೆ ಒಳಗಾಗಬೇಕಾಯಿತು. ಇದು ಅವರಿಗೆ ಸಾಕಷ್ಟು ನೋವನ್ನುಂಟು ಮಾಡಿದೆ. ಅವರು ಒಂದು ದಿನ ಜೈಲಿನಲ್ಲಿ ಇದ್ದು ಬರಬೇಕಾಯಿತು. ಕೇವಲ ಅಲ್ಲು ಅರ್ಜುನ್ ಮಾತ್ರವಲ್ಲದೆ, ಇಡೀ ಕುಟುಂಬಕ್ಕೆ ಇದು ನೋವನ್ನು ತಂದಿದೆ.
SHOCKING: Sukumar wants to LEAVE Cinema🎬 pic.twitter.com/ZtbqV5I3JA
— Manobala Vijayabalan (@ManobalaV) December 24, 2024
ಇದನ್ನೂ ಓದಿ: ವಕೀಲರ ಜೊತೆಗೆ ಪೊಲೀಸರ ವಿಚಾರಣೆಗೆ ಹಾಜರಾದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈಗ ಅಲ್ಲು ಅರ್ಜುನ್ ಅವರು ಸಂಕಷ್ಟು ಅನುಭವಿಸುತ್ತಿರುವ ವಿಚಾರ ಅವರಿಗೆ ನೋವು ತಂದಿದೆ. ಮುಂದೇನು ಎನ್ನುವ ಪ್ರಶ್ನೆ ಅವರನ್ನು ಬಲವಾಗಿ ಕಾಡುತ್ತಿದೆ. ಈ ಸಂಕಷ್ಟದಿಂದ ಅಲ್ಲು ಅರ್ಜುನ್ ಹೊರಬರಲಿ ಎಂದು ಸುಕುಮಾರ್ ಅವರು ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:50 am, Tue, 24 December 24