ಫೋರ್ಬ್ಸ್ ಇಂಡಿಯಾ ‘ಶೋಸ್ಟಾಪರ್ಸ್ 2026’ ಕವರ್ ಪೇಜ್‌ನಲ್ಲಿ ಮಿಂಚಿದ ಅಲ್ಲು ಅರ್ಜುನ್

ಪುಷ್ಪ ಸಿನಿಮಾಗಳ ಯಶಸ್ಸಿನ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಫೋರ್ಬ್ಸ್ ಇಂಡಿಯಾ 'ಶೋಸ್ಟಾಪರ್ಸ್ 2026' ಮುಖಪುಟದಲ್ಲಿ ಮಿಂಚಿದ್ದಾರೆ. ಪ್ರಾದೇಶಿಕ ಗಡಿ ದಾಟಿ ಜಾಗತಿಕ ಮಟ್ಟದಲ್ಲಿ ಬೆಳೆದಿರುವ ಅಲ್ಲು ಅರ್ಜುನ್, ಇದೀಗ ನಿರ್ದೇಶಕ ಅಟ್ಲಿ ಜೊತೆಗಿನ ಬಹುನಿರೀಕ್ಷಿತ 'ರಾಕಾ' ಬಿಗ್ ಬಜೆಟ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಫೋರ್ಬ್ಸ್ ಇಂಡಿಯಾ ಶೋಸ್ಟಾಪರ್ಸ್ 2026  ಕವರ್ ಪೇಜ್‌ನಲ್ಲಿ ಮಿಂಚಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಫೋರ್ಬ್ಸ್
Edited By:

Updated on: Aug 28, 2026 | 11:54 AM

ಮುಖ್ಯಾಂಶಗಳು

  • ಫೋರ್ಬ್ಸ್ ಇಂಡಿಯಾ ಕವರ್ ಪೇಜ್‌ನಲ್ಲಿ ಮಿಂಚಿದ ಅಲ್ಲು ಅರ್ಜುನ್
  • 'ಪುಷ್ಪ' ಯಶಸ್ಸಿನ ಬಳಿಕ ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಐಕಾನ್ ಸ್ಟಾರ್ ಕ್ರೇಜ್
  • ಅಟ್ಲಿ ನಿರ್ದೇಶನದ 'ರಾಕಾ' ಹೈ-ವೋಲ್ಟೇಜ್ ಸಿನಿಮಾಗೆ ಅಲ್ಲು ಅರ್ಜುನ್ ಸಜ್ಜು

ತೆಲುಗು ಚಿತ್ರರಂಗದ ನಟ ಅಲ್ಲು ಅರ್ಜುನ್ ಪ್ರತಿಷ್ಠಿತ ‘ಫೋರ್ಬ್ಸ್ ಇಂಡಿಯಾ’ ನಿಯತಕಾಲಿಕೆಯ ‘ಶೋಸ್ಟಾಪರ್ಸ್ 2026’ ವಿಶೇಷ ಆವೃತ್ತಿಯ ಮುಖಪುಟದಲ್ಲಿ (Cover Page) ಕಾಣಿಸಿಕೊಂಡಿದ್ದಾರೆ. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಪ್ರಭಾವ ಬೀರಿದ ತಾರೆಯರನ್ನು ಗುರುತಿಸಿ ಸಿದ್ಧಪಡಿಸಲಾದ ಈ ಆವೃತ್ತಿಯಲ್ಲಿ ಅವರಿಗೆ ಕವರ್ ಸ್ಟಾರ್ ಆಗಿ ಸ್ಥಾನ ನೀಡಲಾಗಿದೆ.

ಪ್ರಾದೇಶಿಕ ಗಡಿ ದಾಟಿದ ಸಿನಿ ಪಯಣ

ತೆಲುಗು ಚಿತ್ರಗಳ ಮೂಲಕ ನಟನೆಯನ್ನು ಪ್ರಾರಂಭಿಸಿದ ಅಲ್ಲು ಅರ್ಜುನ್, ‘ಪುಷ್ಪ: ದಿ ರೈಸ್’ ಮತ್ತು ‘ಪುಷ್ಪ 2: ದಿ ರೂಲ್’ ಸಿನಿಮಾಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದರು. ಮೊದಲ ಭಾಗದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರ, ಅವರ ಸಿನಿಮಾಗಳ ಮಾರುಕಟ್ಟೆ ವ್ಯಾಪ್ತಿ ಮತ್ತು ಪ್ಯಾನ್-ಇಂಡಿಯಾ ಪ್ರೇಕ್ಷಕರ ಬೆಂಬಲ ಗಣನೀಯವಾಗಿ ಹೆಚ್ಚಾಯಿತು.

ಮನರಂಜನಾ ಕ್ಷೇತ್ರ ಹಾಗೂ ಬ್ರ್ಯಾಂಡ್ ಮೌಲ್ಯ

ಸಿನಿಮಾ ಜಗತ್ತಿನ ಯಶಸ್ಸಿನ ಜೊತೆಗೆ, ಪ್ರಮುಖ ಬ್ರ್ಯಾಂಡ್‌ಗಳ ಜಾಹೀರಾತುಗಳು ಮತ್ತು ಜಾಗತಿಕ ವೇದಿಕೆಗಳಲ್ಲಿ ಅವರ ಉಪಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಭಾರತೀಯ ಚಿತ್ರರಂಗದ ಬದಲಾಗುತ್ತಿರುವ ವ್ಯಾಪಾರ ಮಾರುಕಟ್ಟೆ ಮತ್ತು ತಾರೆಯರ ಪ್ರಭಾವವನ್ನು ವಿಶ್ಲೇಷಿಸಿ ಫೋರ್ಬ್ಸ್ ಇಂಡಿಯಾ ಈ ಬಾರಿಯ ಮುಖಪುಟದಲ್ಲಿ ಅವರ ಚಿತ್ರವನ್ನು ಪ್ರಕಟಿಸಿದೆ.

ಪ್ರಸ್ತುತ ಅಲ್ಲು ಅರ್ಜುನ್ ಅವರು ತಮ್ಮ ಮುಂದಿನ ಬಿಗ್ ಬಜೆಟ್ ಸಿನಿಮಾಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಈ ಹಂತದಲ್ಲಿ ಫೋರ್ಬ್ಸ್ ಕವರ್‌ನಲ್ಲಿ ಕಾಣಿಸಿಕೊಂಡಿರುವುದು ಅವರ ವೃತ್ತಿಜೀವನದ ಪ್ರಮುಖ ಹೆಜ್ಜೆಯಾಗಿ ಗಮನ ಸೆಳೆದಿದೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಸಿನಿಮಾನಲ್ಲಿ ನಟಿಸಲಿರುವ ಹಾಲಿವುಡ್ ಸೂಪರ್ ಸ್ಟಾರ್

‘ಪುಷ್ಪ 2’ ಸೃಷ್ಟಿಸಿದ ಭರ್ಜರಿ ಯಶಸ್ಸಿನ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ತಮಿಳಿನ ಯಶಸ್ವಿ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ರಾಕಾ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಹೈ-ವೋಲ್ಟೇಜ್ ಸೈನ್ಸ್-ಫಿಕ್ಷನ್ ಆಕ್ಷನ್ ಡ್ರಾಮಾದಲ್ಲಿ ಅಲ್ಲು ಅರ್ಜುನ್ ವಿಭಿನ್ನ ಶೇಡ್‌ಗಳ ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದು, ಹಾಲಿವುಡ್ ಮಟ್ಟದ ತಾಂತ್ರಿಕತೆ ಹಾಗೂ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಬಳಸಿ ವಿಶ್ವ ದರ್ಜೆಯ ಮಟ್ಟದಲ್ಲಿ ಈ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Fri, 28 August 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us