ಜೂನಿಯರ್ ಎನ್​ಟಿಆರ್​ ಅಥವಾ ಅಲ್ಲು ಅರ್ಜುನ್? ಜನ್ಮದಿನಕ್ಕೆ ಸಿಗಲಿದೆ ಕ್ಲ್ಯಾರಿಟಿ

ಮೇ 20ರಂದು ಜೂನಿಯರ್ ಎನ್ಟಿಆರ್ ಬರ್ತ್ಡೇ. ಅಂದು ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ಅಂದು ಟೀಸರ್ ಕೂಡ ನಿರೀಕ್ಷಿಸಬಹುದು. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಒಂದು ಘೋಷಣೆಗಾಗಿ ಅಭಿಮಾನಿಗಳು ಕಾದಿದ್ದಾರೆ.

ಜೂನಿಯರ್ ಎನ್​ಟಿಆರ್​ ಅಥವಾ ಅಲ್ಲು ಅರ್ಜುನ್? ಜನ್ಮದಿನಕ್ಕೆ ಸಿಗಲಿದೆ ಕ್ಲ್ಯಾರಿಟಿ
ಅಲ್ಲು-ಎನ್​​ಟಿಆರ್​
Edited By:

Updated on: Apr 15, 2026 | 8:02 AM

ನಿರ್ದೇಶಕರು ಸಿನಿಮಾನ ನಿರ್ಧರಿಸಿದ ಬಳಿಕ ಅದಕ್ಕೆ ಹೀರೋ ಯಾರು ಎಂಬ ಚರ್ಚೆ ನಡೆಯುತ್ತದೆ. ಕೆಲವೊಮ್ಮೆ ಹೀರೋಗಳ ಬದಲಾವಣೆ ಆದ ಉದಾಹರಣೆ ಕೂಡ ಇದೆ. ಈಗ ತ್ರಿವಿಕ್ರಂ ಶ್ರೀನಿವಾಸ್ ಅವರ ‘ಗಾಡ್ ಆಫ್ ವಾರ್’ ಸಿನಿಮಾ ಕಥೆಯೂ ಹಾಗೆಯೇ ಆಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಅಲ್ಲು ಅರ್ಜನ್ ಅಥವಾ ಜೂನಿಯರ್ ಎನ್​ಟಿಆರ್​ ಪೈಕಿ ಯಾರಿಗೆ ಸಿನಿಮಾ ಸಿಗಲಿದೆ ಎನ್ನುವ ಚರ್ಚೆ ಶುರುವಾಗಿದೆ. ಮೇ 20ರಂದು ಇದಕ್ಕೆ ಕ್ಲ್ಯಾರಿಟಿ ಸಿಗುವ ಸಾಧ್ಯತೆ ಇದೆ.

ಮೇ 20ರಂದು ಜೂನಿಯರ್ ಎನ್ಟಿಆರ್ ಬರ್ತ್ಡೇ. ಅಂದು ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ಅಂದು ಟೀಸರ್ ಕೂಡ ನಿರೀಕ್ಷಿಸಬಹುದು. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ‘ವಾರ್ 2’ ಬಳಿಕ ಅವರು ಒಪ್ಪಿಕೊಂಡ ಚಿತ್ರ ಇದಾಗಿದೆ.

‘ಗಾಡ್ ಆಫ್ ವಾರ್’ ಎಂಬುದು ತ್ರಿವಿಕ್ರಂ ಶ್ರೀನಿವಾಸ್ ಅವರ ಡ್ರೀಮ್ ಪ್ರಾಜೆಕ್ಟ್ಗಳಲ್ಲಿ ಒಂದು. ಇದಕ್ಕಾಗಿ ಅವರು ಸಾಕಷ್ಟು ಶ್ರಮಹಾಕಿರುವುದನ್ನು ಕಾಣಬಹುದು. ಈ ಚಿತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಅವರು ಇದ್ದಾರೆ ಎಂದು ಹೇಳಲಾಗುತ್ತಾ ಇದೆ. ಈ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

ಈಗ ಎಲ್ಲರ ದೃಷ್ಟಿ ಮೇ 20ರ ಮೇಲೆ ನೆಟ್ಟಿದೆ. ಅಂದು ಜೂನಿಯರ್ ಎನ್​ಟಿಆರ್ ಜನ್ಮದಿನ. ಅಂದು ಈ ಸಿನಿಮಾ ಬಗ್ಗೆ ಘೋಷಣೆ ಆಗದೆ ಇದ್ದರೆ ಈ ಪ್ರಾಜೆಕ್ಟ್ ನಿಂತಿದೆ ಎಂದು ಊಹಿಸಬಹುದು ಅಥವಾ ಅಲ್ಲು ಅರ್ಜುನ್ ಅವರು ಈ ಸಿನಿಮಾಗೆ ಹೀರೋ ಆಗಬಹುದು ಎಂದು ಊಹಿಸಬಹುದು. ಈ ಮೊದಲು ತ್ರಿವಿಕ್ರಂ ಶ್ರೀನಿವಾಸ್ ಅವರು ಜೂನಿಯರ್ ಎನ್​ಟಿಆರ್ ಹಾಗೂ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ‘ನಿರ್ಮಿಸಿದ್ದು, ಖರೀದಿಸಿದ್ದಲ್ಲ’; ಕಟ್ಟುಮಸ್ತಾದ ದೇಹದ ಫೋಟೋ ಹಂಚಿಕೊಂಡ ಜೂನಿಯರ್ ಎನ್​​​ಟಿಆರ್

ಜೂನಿಯರ್ ಎನ್​ಟಿಆರ್ ಅವರು ಸದ್ಯ ‘ಡ್ರ್ಯಾಗನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅವರು ಕಟ್ಟುಮಸ್ತಾದ ದೇಹ ಮಾಡಿಕೊಂಡಿದ್ದಾರೆ. ಈ ಮೊದಲು ತೆಳ್ಳಗಾಗಿದ್ದ ಅವರು ದಪ್ಪ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us