ಶೂಟಿಂಗ್​ ಮುಗಿಯೋದಕ್ಕೂ ಮುನ್ನವೇ ದಾಖಲೆ ಬರೆದ ‘ಪುಷ್ಪ 2’; ಅಲ್ಲು ಅರ್ಜುನ್​ ಸಿನಿಮಾದ ಸಾಧನೆ ಏನು?

ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ‘ಪುಷ್ಪ 2’ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಸಿನಿಮಾದ ಪೋಸ್ಟರ್​ಗೆ 70 ಲಕ್ಷ ಲೈಕ್ಸ್​ ಸಿಕ್ಕಿದೆ. ಆ ಖುಷಿಯನ್ನು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳಲಾಗಿದೆ. ಈ ಸಿನಿಮಾ ಮೇಲೆ ಅಲ್ಲು ಅರ್ಜುನ್​ ಅಭಿಮಾನಿಗಳು ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ ನೀಡುತ್ತಿದೆ.

ಶೂಟಿಂಗ್​ ಮುಗಿಯೋದಕ್ಕೂ ಮುನ್ನವೇ ದಾಖಲೆ ಬರೆದ ‘ಪುಷ್ಪ 2’; ಅಲ್ಲು ಅರ್ಜುನ್​ ಸಿನಿಮಾದ ಸಾಧನೆ ಏನು?
ಅಲ್ಲು ಅರ್ಜುನ್​
Follow us
ಮದನ್​ ಕುಮಾರ್​
|

Updated on: Aug 13, 2023 | 7:16 AM

ನಟ ಅಲ್ಲು ಅರ್ಜುನ್​ (Allu Arjun) ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳದೇ ಬಹಳ ಸಮಯ ಆಗಿದೆ. 2021ರ ಡಿಸೆಂಬರ್​ನಲ್ಲಿ ರಿಲೀಸ್​ ಆದ ‘ಪುಷ್ಪ’ ಸಿನಿಮಾದಿಂದ ಅವರಿಗೆ ಬಹು ದೊಡ್ಡ ಗೆಲುವು ಸಿಕ್ಕಿತು. ಆದರೆ ಆ ಬಳಿಕ ಅವರು ಹೊಸ ಸಿನಿಮಾ ಮಾಡುವಲ್ಲಿ ಅವಸರ ತೋರಿಸುತ್ತಿಲ್ಲ. ಪುಷ್ಪ 2’ (Pushpa 2) ಚಿತ್ರದ ಕೆಲಸಗಳು ಚಾಲ್ತಿಯಲ್ಲಿವೆ. ಆದರೆ ಬಹಳ ನಿಧಾನವಾಗಿ ಶೂಟಿಂಗ್​ ನಡೆಯುತ್ತಿದೆ. ಈ ಚಿತ್ರಕ್ಕೆ ಇನ್ನೂ ಚಿತ್ರೀಕರಣ ಪ್ರಗತಿಯಲ್ಲಿ ಇರುವಾಗಲೇ ಒಂದು ಹೊಸ ದಾಖಲೆ ಬರೆದಿದೆ. ಇನ್​ಸ್ಟಾಗ್ರಾಮ್​ನಲ್ಲಿ ಈ ಸಿನಿಮಾದ ಪೋಸ್ಟರ್​ ಬರೋಬ್ಬರಿ 7 ಮಿಲಿಯನ್​ (70 ಲಕ್ಷ) ಲೈಕ್ಸ್​ ಪಡೆದಿದೆ. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವುದೇ ಸಿನಿಮಾದ ಪೋಸ್ಟರ್​ ಕೂಡ ಈ ಪರಿ ಲೈಕ್ಸ್​ ಪಡೆದಿಲ್ಲ. ಈ ಖುಷಿಯಲ್ಲಿ ‘ಪುಷ್ಪ 2’ ಚಿತ್ರತಂಡ ಸಂಭ್ರಮಿಸಿದೆ. ನಿರ್ದೇಶಕ ಸುಕುಮಾರ್​ (Sukumar) ಅವರು ಈ ಸಿನಿಮಾಗೆ ಬಹಳ ಕಾಳಜಿಯಿಂದ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ‘ಪುಷ್ಪ 2’ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಸಿನಿಮಾದ ಪೋಸ್ಟರ್​ಗೆ 70 ಲಕ್ಷ ಲೈಕ್ಸ್​ ಸಿಕ್ಕಿದೆ. ಆ ಖುಷಿಯ ಸುದ್ದಿಯನ್ನು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳಲಾಗಿದೆ. ಈ ಸಿನಿಮಾ ಮೇಲೆ ಅಲ್ಲು ಅರ್ಜುನ್​ ಅಭಿಮಾನಿಗಳು ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ ನೀಡುತ್ತಿದೆ. ಈ ವರ್ಷ ಏಪ್ರಿಲ್​ 7ರಂದು ‘ಪುಷ್ಪ 2’ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಗಿತ್ತು.

ಮೈತ್ರಿ ಮೂವೀ ಮೇಕರ್ಸ್ ಟ್ವೀಟ್​ ಇಲ್ಲಿದೆ:

ಫಸ್ಟ್​ ಲುಕ್​ನಲ್ಲಿ ಅಲ್ಲು ಅರ್ಜುನ್​ ಅವರ ಗೆಟಪ್​ ವಿಶೇಷವಾಗಿದೆ. ಅದರ ಕ್ರೇಜ್​ ಎಷ್ಟರಮಟ್ಟಿಗೆ ಇದೆ ಎಂದರೆ, ಆ ಪೋಸ್ಟರ್​ ರೀತಿಯೇ ಕೆಲವರು ವೇಷ ಧರಿಸಿಕೊಂಡು ಪೋಸ್ ನೀಡಿದ ಉದಾಹರಣೆ ಕೂಡ ಇದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದವರು ನಟಿಸುತ್ತಿದ್ದಾರೆ. ಈ ಮೊದಲು ಬಿಡುಗಡೆ ಆದ ಫಸ್ಟ್​ ಗ್ಲಿಂಪ್ಸ್​ ವಿಡಿಯೋ ಕೂಡ ಸಖತ್​ ವೈರಲ್​ ಆಗಿತ್ತು.

ಇದನ್ನೂ ಓದಿ: ಪುಷ್ಪರಾಜ್​ ವಿರುದ್ಧ ಸೇಡಿನಿಂದ ಕುದಿಯುವ ಬನ್ವರ್​ ಸಿಂಗ್​ ಶೆಖಾವತ್​​; ‘ಪುಷ್ಪ 2’ ತಂಡದಿಂದ ಫಹಾದ್​ ಫಾಸಿಲ್​ ಲುಕ್​ ಬಿಡುಗಡೆ

‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆಗಿದ್ದರಿಂದ ಅದರ ಸೀಕ್ವೆಲ್​ ಮೇಲೆ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಲು ನಿರ್ದೇಶಕ ಸುಕುಮಾರ್​ ಪ್ರಯತ್ನಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್​ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರದಲ್ಲಿ ಒಂದು ಸ್ಪೆಷಲ್​ ಸಾಂಗ್​ ಇರಲಿದ್ದು, ಅದರಲ್ಲಿ ಯಾರು ನಟಿಸಲಿದ್ದಾರೆ ಎಂಬ ಕೌತುಕ ಎಲ್ಲರಲ್ಲೂ ಮೂಡಿದೆ. ‘ಪುಷ್ಪ’ ಚಿತ್ರಕ್ಕಿಂತಲೂ ಅದ್ದೂರಿಯಾಗಿ ‘ಪುಷ್ಪ 2’ ಚಿತ್ರ ಮೂಡಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.