ಮತ್ತೆ ಬದಲಾಯಿತು ‘ಪುಷ್ಪ 2’ ರಿಲೀಸ್ ದಿನಾಂಕ; ಈ ಬಾರಿ ಗುಡ್ ನ್ಯೂಸ್
‘ಪುಷ್ಪ 2’ ಸಿನಿಮಾ ರಿಲೀಸ್ಗೆ ಕೆಲವು ವಾರಗಳು ಬಾಕಿ ಇವೆ.ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಹೀರೋ ಆದರೆ, ರಶ್ಮಿಕಾ ಮಂದಣ್ಣ ಅವರು ಈ ಚಿತ್ರದ ನಾಯಕಿ ಆಗಿದ್ದಾರೆ. ‘ಪುಷ್ಪ 2’ ಚಿತ್ರದ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಈ ಚಿತ್ರದ ರಿಲೀಸ್ ದಿನಾಂಕ ಬದಲಾಗಿದೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ರಿಲೀಸ್ ದಿನಾಂಕ ಸಾಕಷ್ಟು ಬಾರಿ ಬದಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷ ಆಗಸ್ಟ್ 15ರಂದೇ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಶೂಟಿಂಗ್ ಮುಗಿಯದ ಕಾರಣ ಸಿನಿಮಾ ರಿಲೀಸ್ ದಿನಾಂಕ ಡಿಸೆಂಬರ್ 6ಕ್ಕೆ ಮುಂದೂಡಲ್ಪಟ್ಟಿತು. ಈಗ ಚಿತ್ರದ ರಿಲೀಸ್ ದಿನಾಂಕ ಮತ್ತೆ ಬದಲಾಗಿದೆ. ಈ ಬಗ್ಗೆ ಅಲ್ಲು ಅರ್ಜುನ್ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಹಾಗಂತ ಫ್ಯಾನ್ಸ್ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ.
‘ಪುಷ್ಪ 2’ ಚಿತ್ರ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ ಎಂದು ತಂಡ ಘೋಷಣೆ ಮಾಡಿತ್ತು. ಇದಕ್ಕಾಗಿ ಫ್ಯಾನ್ಸ್ ಕಾದಿದ್ದರು. ಇತ್ತೀಚಿಗಿನವರೆಗೂ ಡಿಸೆಂಬರ್ 6ರಂದು ಎಂದೇ ಇತ್ತು. ಆದರೆ, ಈಗ ತಂಡ ಹೊಸ ರಿಲೀಸ್ ದಿನಾಂಕ ಘೋಷಣೆ ಮಾಡಿದೆ. ಇದರ ಪ್ರಕಾರ ಒಂದು ದಿನ ಮೊದಲು ಅಂದರೆ ಡಿಸೆಂಬರ್ 5ರಂದು ಚಿತ್ರ ತೆರೆಗೆ ಬರಲಿದೆ.
ಸಿನಿಮಾ ರಿಲೀಸ್ ದಿನಾಂಕವನ್ನು ಒಂದು ದಿನ ಹಿಂದಕ್ಕೆ ಹಾಕಲು ಒಂದು ಕಾರಣವೂ ಇದೆ. ಡಿಸೆಂಬರ್ 6 ಶುಕ್ರವಾರ. ಅದರ ಬದಲು ಒಂದು ದಿನ ಮೊದಲು ಅಂದರೆ ಗುರುವಾರ ಚಿತ್ರ ರಿಲೀಸ್ ಮಾಡಿದರೆ ಲಾಭ ಜಾಸ್ತಿ. ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ಮೊದಲ ದಿನ ಭರ್ಜರಿ ಕಮಾಯಿ ಮಾಡುತ್ತವೆ. ಹೀಗಾಗಿ, ‘ಪುಷ್ಪ 2’ ಚಿತ್ರಕ್ಕೆ ಗುರುವಾರ (ಡಿಸೆಂಬರ್ 5) ದೊಡ್ಡ ಗಳಿಕೆ ಆಗಲಿದೆ. ಶುಕ್ರವಾರದ ಸೆಂಟಿಮೆಂಟ್ಮೇಲೆ ಒಂದಷ್ಟು ಜನರು ಸಿನಿಮಾ ನೋಡುತ್ತಾರೆ. ಶನಿವಾರ ಹಾಗೂ ಭಾನುವಾರ ವೀಕೆಂಡ್ ಆದ್ದರಿಂದ ಜನರು ಸಹಜವಾಗಿಯೇ ಸಿನಿಮಾ ವೀಕ್ಷಣೆ ಮಾಡುತ್ತಾರೆ. ನಾಲ್ಕೇ ದಿನಕ್ಕೆ ಚಿತ್ರ ಭರ್ಜರಿ ಗಳಿಕೆ ಮಾಡಲಿದೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಮೊದಲ ದಿನದ ಗಳಿಕೆ ಎಷ್ಟಾಗಲಿದೆ? ‘ಕೆಜಿಎಫ್ 2’ ದಾಖಲೆ ಕಥೆ ಏನು?
‘ಪುಷ್ಪ 2’ ಚಿತ್ರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಸುದ್ದಿ ಹರಿದಾಡಿತ್ತು. ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಮಧ್ಯೆ ಕಿರಿಕ್ ಆಗಿದೆ ಎನ್ನುವ ಸುದ್ದಿ ಬಿತ್ತರ ಆಗಿತ್ತು. ಪದೇ ಪದೇ ಹೊಸ ಪೋಸ್ಟರ್ಗಳನ್ನು ರಿಲೀಸ್ ಮಾಡುವ ಮೂಲಕ ತಂಡ ಸ್ಪಷ್ಟನೆ ನೀಡುತ್ತಲೇ ಬರುತ್ತಿತ್ತು. ಈಗ ಸಿನಿಮಾದ ರಿಲೀಸ್ ದಿನಾಂಕ ಒಂದು ದಿನ ಹಿಂದಕ್ಕೆ ಬಂದಿದ್ದು, ಸಿನಿಮಾ ಡಿಸೆಂಬರ್ನಲ್ಲಿ ತೆರೆಗೆ ಬರೋದು ಪಕ್ಕಾ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.