AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರದ ಮೊದಲ ದಿನದ ಗಳಿಕೆ ಎಷ್ಟಾಗಲಿದೆ? ‘ಕೆಜಿಎಫ್ 2’ ದಾಖಲೆ ಕಥೆ ಏನು?

Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಈ ಸಿನಿಮಾ ಭಾರಿ ದೊಡ್ಡ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ. ಇದರ ನಡುವೆ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ ಎಂಬ ಲೆಕ್ಕಾಚಾರ ಪ್ರಾರಂಭವಾಗಿದೆ.

‘ಪುಷ್ಪ 2’ ಚಿತ್ರದ ಮೊದಲ ದಿನದ ಗಳಿಕೆ ಎಷ್ಟಾಗಲಿದೆ? ‘ಕೆಜಿಎಫ್ 2’ ದಾಖಲೆ ಕಥೆ ಏನು?
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 18, 2024 | 5:43 PM

Share

ಡಿಸೆಂಬರ್ 6ಕ್ಕೆ ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಇದಕ್ಕೆ ಇರೋದು ಇನ್ನು ಕೆಲವು ವಾರಗಳು ಮಾತ್ರ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಹೀರೋ ಆದರೆ, ರಶ್ಮಿಕಾ ಮಂದಣ್ಣ ಅವರು ಈ ಚಿತ್ರದ ನಾಯಕಿ ಆಗಿದ್ದಾರೆ. ‘ಪುಷ್ಪ 2’ ಚಿತ್ರದ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ‘ಕೆಜಿಎಫ್ 2’ ದಾಖಲೆಯನ್ನು ಸಿನಿಮಾ ಮುರಿಯುತ್ತದೆಯೇ ಎನ್ನುವ ಕುತೂಹಲ ಮೂಡಿದೆ.

ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ 134 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾ ಬ್ಲಾಕ್ಬಸ್ಟರ್ ಎನಿಸಿಕೊಂಡಿತ್ತು. ಕೆಲ ತೆಲುಗು ನಿರ್ದೇಶಕರು ‘ಕೆಜಿಎಫ್’ ಚಿತ್ರವನ್ನು ‘ಪುಷ್ಪ’ಗೆ ಹೋಲಿಕೆ ಮಾಡಿದ್ದರು. ‘ಕೆಜಿಎಫ್’ ಚಿತ್ರಕ್ಕಿಂತ ‘ಪುಷ್ಪ’ ಸಿನಿಮಾ ಉತ್ತಮವಾಗಿರುತ್ತದೆ ಎಂದಿದ್ದರು. ಈಗ ‘ಪುಷ್ಪ 2’ ಚಿತ್ರ ‘ಕೆಜಿಎಫ್ 2’ ದಾಖಲೆಯನ್ನು ಉಡೀಸ್ ಮಾಡುತ್ತದೆಯೇ ಎನ್ನುವ ಪ್ರಶ್ನೆ ಕಾಡಿದೆ.

ಇದನ್ನೂ ಓದಿ:‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಎಚ್ಚರಿಕೆ ಕೊಟ್ಟ ಸುದೀಪ್

‘ಕಲ್ಕಿ 2898 ಎಡಿ’ ಹಾಗೂ ‘ದೇವರ’ ಈ ವರ್ಷ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 191 ಕೋಟಿ ರೂಪಾಯಿ (ಗ್ರಾಸ್) ಕಲೆಕ್ಷನ್ ಮಾಡಿತ್ತು. ‘ದೇವರ’ ಚಿತ್ರವು ಮೊದಲ ದಿನ 172 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಪುಷ್ಪ’ ಚಿತ್ರ ಈ ದಾಖಲೆಗಳನ್ನು ಮೀರಿಸೋ ಸಾಧ್ಯತೆ ಇದೆ. ಈ ಸಿನಿಮಾ 200 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹಾಗಾದಲ್ಲಿ, ‘ಕೆಜಿಎಫ್ 2’ ದಾಖಲೆ ಮುರಿಯಲಿದೆ.

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಛಾವ್ವಾ’ ಕೂಡ ಡಿಸೆಂಬರ್ 6ರಂದು ಬಿಡುಗಡೆ ಕಾಣುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಕೂಡ ನಟಿಸಿರುವುದರಿಂದ ಈ ಚಿತ್ರ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಇದೆ. ಹೀಗಾಗಿ, ಇದು ‘ಪುಷ್ಪ’ ಚಿತ್ರಕ್ಕೆ ಕೊಂಚ ಹೊಡೆತ ನೀಡಬಹುದು ಎಂದು ಊಹಿಸಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ