ಅಲ್ಲು ಅರ್ಜುನ್ಗಾಗಿ ಮತ್ತೆ ದಕ್ಷಿಣಕ್ಕೆ ಬರುತ್ತಿರುವ ಖಾನ್ಗಳ ಮೆಚ್ಚಿನ ನಿರ್ದೇಶಕ
Allu Arjun: ‘ಪುಷ್ಪ 2’ ಸಿನಿಮಾ ಮೂಲಕ ಭರ್ಜರಿ ಹಿಟ್ ನೀಡಿರುವ ಅಲ್ಲು ಅರ್ಜುನ್, ತಮ್ಮ ಮುಂದಿನ ಸಿನಿಮಾವನ್ನು ತ್ರಿವಿಕ್ರಮ್ ಜೊತೆಗೆ ಮಾಡಲಿದ್ದಾರೆ. ಅದರ ಬಳಿಕ ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೈಜೋಡಿಸಲಿದ್ದಾರೆ. ಇದರ ನಡುವೆ ಇದೀಗ ಬಾಲಿವುಡ್ ಸೇರಿರುವ ಹಿಟ್ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಯಾರು ಆ ನಿರ್ದೇಶಕ?

‘ಪುಷ್ಪ 2’ ಸಿನಿಮಾ ಮೂಲಕ ಭರ್ಜರಿ ಹಿಟ್ ಸಿನಿಮಾ ನೀಡಿರುವ ಅಲ್ಲು ಅರ್ಜುನ್, ತಮ್ಮ ಮುಂದಿನ ಸಿನಿಮಾಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್, ಮುಂದಿನ ಸಿನಿಮಾವನ್ನು ತ್ರಿವಿಕ್ರಮ್ ಜೊತೆ ಮಾಡುವುದಾಗಿ ಘೋಷಣೆ ಆಗಿದೆ. ಇದೀಗ ಮತ್ತೊಬ್ಬ ಹಿಟ್ ನಿರ್ದೇಶಕನ ಜೊತೆಗೆ ಅಲ್ಲು ಅರ್ಜುನ್ ಕೈ ಜೋಡಿಸಲಿದ್ದಾರೆ. ಈಗಾಗಲೇ ಖಾನ್ಗಳ ಜೊತೆ ಕೆಲಸ ಮಾಡುತ್ತಿರುವ ದಕ್ಷಿಣ ಭಾರತದ ಹಿಟ್ ನಿರ್ದೇಶಕರೊಟ್ಟಿಗೆ ಅಲ್ಲು ಅರ್ಜುನ್ ಕೈ ಜೋಡಿಸುತ್ತಿದ್ದಾರೆ.
ಸತತ ಸೋಲಿನ ಸುಳಿಯಲ್ಲಿದ್ದ ಶಾರುಖ್ ಖಾನ್ಗೆ ‘ಜವಾನ್’ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ತಮಿಳಿನ ನಿರ್ದೇಶಕ ಅಟ್ಲಿ ಇದೀಗ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಅಟ್ಲಿ, ಸಲ್ಮಾನ್ ಖಾನ್ಗಾಗಿ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾದ ಬಳಿಕ ಅಲ್ಲು ಅರ್ಜುನ್ಗಾಗಿ ಸಿನಿಮಾ ಮಾಡಲಿದ್ದಾರೆ ನಿರ್ದೇಶಕ ಅಟ್ಲಿ. ತಮಿಳು ನಿರ್ದೇಶಕನಾದರೂ ಬಾಲಿವುಡ್ನಲ್ಲಿ ಒಂದರ ಹಿಂದೊಂದು ಸಿನಿಮಾಗಳನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.
‘ಜವಾನ್’ ಸಿನಿಮಾ ಬ್ಲಾಕ್ ಬಸ್ಟರ್ ಆದ ಬಳಿಕ ವರುಣ್ ಧವನ್, ಕೀರ್ತಿ ಸುರೇಶ್ ನಟನೆಯ ‘ಬೇಬಿ’ ಹೆಸರಿನ ಸಿನಿಮಾವನ್ನು ಅಟ್ಲಿ ನಿರ್ದೇಶನ ಮಾಡಿದರು. ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾದರೂ ಸಹ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಅದರ ಬಳಿಕ ಅಟ್ಲಿ, ತಾವು ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಇದೀಗ ಸಲ್ಮಾನ್ ಖಾನ್ ‘ಸಿಖಂಧರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾದ ಬಳಿಕ ಅಟ್ಲಿ ಜೊತೆಗಿನ ಸಿನಿಮಾ ಶುರು ಮಾಡಲಿದ್ದಾರೆ.
ಇದನ್ನೂ ಓದಿ:ಇಂಗ್ಲಿಷ್ನಲ್ಲೂ ಬಂತು ‘ಪುಷ್ಪ 2’ ಸಿನಿಮಾ; ವಿಶ್ವಾದ್ಯಂತ ಅಲ್ಲು ಅರ್ಜುನ್ ಹವಾ
ಇನ್ನು ಅಲ್ಲು ಅರ್ಜುನ್ ಕೆಲವೇ ದಿನಗಳಲ್ಲಿ ತ್ರಿವಿಕ್ರಮ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲು ಆರಂಭಿಸಲಿದ್ದಾರೆ. ಆ ಸಿನಿಮಾದ ಬಳಿಕ ಬಾಲಿವುಡ್ನ ಲೆಜಂಡರಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕವಷ್ಟೆ ಅಲ್ಲು ಅರ್ಜುನ್, ಅಟ್ಲಿ ಕಾಂಬಿನೇಷನ್ನ ಸಿನಿಮಾ ಸೆಟ್ಟೇರಲಿದೆ. 2019 ರ ‘ಬಿಗಿಲ್’ ಸಿನಿಮಾದ ಬಳಿಕ ಅಟ್ಲಿ ದಕ್ಷಿಣದ ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಅಲ್ಲು ಅರ್ಜುನ್ ಸಿನಿಮಾ ಮೂಲಕ ಅಟ್ಲಿ ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ