ಸಂಜನಾ ಗಲ್ರಾನಿ ಕೇಸ್ನಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಲು ಸಿಸಿಬಿ ರೆಡಿ
ಸಂಜನಾ ಗಲ್ರಾನಿ ಅವರ ಡ್ರಗ್ ಪ್ರಕರಣ ಹೈಕೋರ್ಟ್‌ನಲ್ಲಿ ವಜಾಗೊಂಡಿದ್ದರೂ, ಸಿಸಿಬಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ಸಂಜನಾ ಅವರು ಮತ್ತೆ ಕಾನೂನು ಹೋರಾಟ ಎದುರಿಸಬೇಕಾಗಬಹುದು. ಪೊಲೀಸ್ ಆಯುಕ್ತರು ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣದ ಮುಂದಿನ ಹಂತದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಡ್ರಗ್ ಕೇಸ್ ಒಂದರಲ್ಲಿ ನಟಿ ಸಂಜನಾ ಗಲ್ರಾನಿ ಅವರು ಅರೆಸ್ಟ್ ಆಗಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇತ್ತೀಚೆಗೆ ಹೈಕೋರ್ಟ್ ಅಲ್ಲಿ ಪ್ರಕರಣ ವಜಾಗೊಂಡಿತ್ತು. ಈಗ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಸಂಜನಾ ಗಲ್ರಾನಿ ಅವರು ಮತ್ತೆ ಸಂಕಷ್ಟ ಎದುರಿಸುವ ಭೀತಿ ಎದುರಿಸಿದ್ದಾರೆ.
ಡ್ರಗ್ ಕೇಸ್ನಲ್ಲಿ ಕೆಲ ವರ್ಷಗಳ ಹಿಂದೆ ಸಂಜನಾ ಅರೆಸ್ಟ್ ಆಗಿದ್ದರು. ಕೆಲ ಸಮಯ ಜೈಲಿನಲ್ಲಿ ಇದ್ದು ಬಂದ ಅವರು, ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ, ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಪ್ರಕರಣ ವಜಾ ಗೊಂಡಿತ್ತು. ಹೀಗಾಗಿ ಸಂಜನಾ ಗಲ್ರಾನಿ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ತಯಾರಿ ನಡೆದಿದೆ. ಇದರಿಂದ ಸಂಜನಾಗೆ ಮತ್ತೆ ಭೀತಿ ಶುರವಾಗಿದೆ.
‘ಈಗಾಗಲೇ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ ಅರ್ಜಿ ತಯಾರಿ ಮಾಡಲಾಗಿದೆ. ಪ್ರಾಸಿಕ್ಯೂಷನ್ ಅನುಮತಿ ಬರುತ್ತಾ ಇದ್ದಂತೆ ಅರ್ಜಿ ಸಲ್ಲಿಕೆ ಆಗಲಿದೆ’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಂಜನಾ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ನೋಡಬೇಕಿದೆ.
ಇದನ್ನೂ ಓದಿ: ಜೈಲು ಎಂಥಹಾ ನರಕ, ಅಲ್ಲಿ ಏನೇನಿರುತ್ತೆ: ವಿವರಿಸಿದ ನಟಿ ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ ಅವರು ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ವಿವಾಹ ಮಾಡಿಕೊಂಡು ಮಗುವಿಗೂ ಜನ್ಮನೀಡಿದ್ದಾರೆ. ಇದಾದ ಬಳಿಕ ಅವರು ನಟನೆಯಲ್ಲಿ ಹೆಚ್ಚಾಗಿ ಆ್ಯಕ್ಟೀವ್ ಆಗಿಲ್ಲ. ಅವರು 2018ರ ‘ದಂಡುಪಾಳ್ಯ 3’ ಚಿತ್ರದಲ್ಲಿ ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.