ಮದುವೆಗೆ ಎರಡು ವಾರ ಇರುವಾಗಲೇ ಅಲ್ಲು ಮನೆಯಲ್ಲಿ ಸಂಭ್ರಮ ಆರಂಭ; ಅದ್ದೂರಿ ಪಾರ್ಟಿ

ಅಲ್ಲು ಸಿರಿಶ್ ಮತ್ತು ನಯನಿಕಾ ಮಾರ್ಚ್ 6ರಂದು ವಿವಾಹವಾಗುತ್ತಿದ್ದಾರೆ. ಇವರ ಮದುವೆ ಸಂಭ್ರಮ ಜೋರಾಗಿದೆ. ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಇವರಿಗಾಗಿ ಅದ್ದೂರಿ ಪ್ರೀ-ವೆಡ್ಡಿಂಗ್ ಪಾರ್ಟಿ ಆಯೋಜಿಸಿದ್ದರು. ರಾಮ್ ಚರಣ್, ಶ್ರೀಲೀಲಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡ ಅಲ್ಲು ಸಿರಿಶ್, ಇದನ್ನು ‘ಮ್ಯಾಡ್ ಪಾರ್ಟಿ’ ಎಂದು ಕರೆದಿದ್ದಾರೆ.

ಮದುವೆಗೆ ಎರಡು ವಾರ ಇರುವಾಗಲೇ ಅಲ್ಲು ಮನೆಯಲ್ಲಿ ಸಂಭ್ರಮ ಆರಂಭ; ಅದ್ದೂರಿ ಪಾರ್ಟಿ
ಅಲ್ಲು ಕುಟುಂಬ

Updated on: Feb 23, 2026 | 7:35 AM

ಅಲ್ಲು ಅರ್ಜುನ್ (Allu Arjun) ಸಹೋದರು ಅಲ್ಲು ಸಿರಿಶ್ ಅವರು ಮಾರ್ಚ್ 6ರಂದು ವಿವಾಹ ಆಗುತ್ತಿದ್ದಾರೆ. ತಾವು ಪ್ರೀತಿಸುತ್ತಿದ್ದ ನಯಾನಿಕಾ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಸದ್ಯ ಸಂಭ್ರಮ ಜೋರಾಗಿದೆ. ಈ ಮೊದಲು ದುಬೈನಲ್ಲಿ ಕುಟುಂಬದವರು ಯಾಚ್​ ಪಾರ್ಟಿ ಮಾಡಿದ್ದರು. ಈಗ ಹೈದರಾಬಾದ್​​ನಲ್ಲಿ ದೊಡ್ಡ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹಾ ರೆಡ್ಡಿ ಇದನ್ನು ಹೋಸ್ಟ್ ಮಾಡಿದ್ದರು. ವಿವಾಹಕ್ಕೆ ಎರಡು ವಾರ ಇರುವಾಗಲೇ ಪಾರ್ಟಿ ಜೋರಾಗಿದೆ.

ಅಲ್ಲು ಅರ್ಜುನ್ ದಂಪತಿ ಆಯೋಜನೆ ಮಾಡಿದ ಪಾರ್ಟಿಗೆ ರಾಮ್ ಚರಣ್, ಉಪಾಸನಾ ಕೊನಿಡೆಲಾ, ಶ್ರೀಲೀಲಾ, ಮಿಹೀಕಾ ಬಜಾಜ್ ಹಾಗೂ ಇತರರು ಭಾಗಿ ಆಗಿದ್ದರು. ಈಗ ಅಲ್ಲು ಸಿರಿಶ್ ಅವರು ಪಾರ್ಟಿ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಇದನ್ನು ಮ್ಯಾಡ್ ಪಾರ್ಟಿ ಎಂದು ಅವರು ಕರೆದಿದ್ದಾರೆ.  ಅಲ್ಲು  ಸಿರಿಶ್ ಅವರು ಪಾರ್ಟಿಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆಯೋಜನೆ ಮಾಡಿದ ಪಾರ್ಟಿಯ ಡೆಕೋರೇಷನ್ ಅದ್ಭುತವಾಗಿತ್ತು.

ಅಲ್ಲು ಸಿರಿಶ್ ಅವರು ಭಾವಿ ಪತ್ನಿ ನಯಾನಿಕಾ ಜೊತೆ ಸ್ಟನ್ನಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಅಲ್ಲು ಅರ್ಜುನ್ ಹಾಗೂ ಸ್ನೆಹಾ ರೆಡ್ಡಿ ನನಗೆ ಹಾಗೂ ನಯಾನಿಕಾಗಾಗಿ ಎಂತಹ ಮ್ಯಾಡ್ ಪಾರ್ಟಿ ಆಯೋಜನೆ ಮಾಡಿದ್ದರು. ಎಲ್ಲರೂ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದವು. ಸೆಟ್ ಕೂಡ ಅದ್ಭುತವಾಗಿದ್ದವು’ ಎಂದು ಅಲ್ಲು ಸಿರಿಶ್ ಹೇಳಿದ್ದಾರೆ. ಈ ಪಾರ್ಟಿಯನ್ನು ಅದ್ಭುತವಾಗಿ ಹೋಸ್ಟ್ ಮಾಡಿದ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿಗೂ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?

ಅಲ್ಲು ಸಿರಿಶ್ ಹಾಗೂ ನಯಾನಿಕಾ ಅವರು ಕಳೆದ ವರ್ಷ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಅಲ್ಲು ಅರ್ಜುನ್ ಹಾಗೂ ಅವರ ಕುಟುಂಬ ಇದರಲ್ಲಿ ಭಾಗಿ ಆಯಿತು. ಈಗ ಮಾರ್ಚ್ 6ರಂದು ಈ ಜೋಡಿ ವಿವಾಹ ಆಗುತ್ತಿದೆ. ಅಲ್ಲು ಅರ್ಜುನ್ ಕೂಡ ಇದೇ ದಿನಾಂಕದಂದು ಮದುವೆ ಆಗಿದ್ದರು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us