ಇಬ್ಬರು ಮೂವರಾಗುತ್ತಿದ್ದೇವೆ, ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ಹೆಬ್ಬುಲಿ ನಟಿ
Amala Paul: ನಟಿ ಅಮಲಾ ಪೌಲ್ ತಾಯಿಯಾಗಲಿರುವ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಮಲಾ ಪೌಲ್ 2023ರ ನವೆಂಬರ್ನಲ್ಲಿ ಗೆಳೆಯ ಜಗತ್ ದೇಸಾಯಿ ಜೊತೆ ವಿವಾಹವಾಗಿದ್ದರು.
ಕನ್ನಡದ ‘ಹೆಬ್ಬುಲಿ’ (Hebbuli) ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಅಮಲಾ ಪೌಲ್ ಖುಷಿ ವಿಚಾರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಅಮಲಾ ಪೌಲ್ ಶೀಘ್ರವೇ ತಾಯಿಯಾಗುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿರುವ ನಟಿ ಅಮಲಾ ಪೌಲ್, ‘ನಾವು ಇಬ್ಬರು ಮೂವರಾಗಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ನಟಿ ಅಮಲಾ ಪೌಲ್, 2023ರ ನವೆಂಬರ್ ತಿಂಗಳಲ್ಲಿ ಬಾಯ್ಫ್ರೆಂಡ್ ಜಗತ್ ದೇಸಾಯಿ ಅವರೊಟ್ಟಿಗೆ ಕೊಚ್ಚಿಯಲ್ಲಿ ವಿವಾಹವಾಗಿದ್ದರು ಇದು ಅವರ ಎರಡನೇ ಮದುವೆಯಾಗಿತ್ತು. ಇದೀಗ ಈ ದಂಪತಿ ಪೋಷಕರಾಗುತ್ತಿದ್ದಾರೆ. ತಾಯಿಯಾಗುತ್ತಿರುವ ಖುಷಿಯ ವಿಚಾರ ಹಂಚಿಕೊಂಡಿರುವ ಇನ್ಸ್ಟಾ ಪೋಸ್ಟ್ನಲ್ಲಿ ತಮ್ಮ ಹಾಗೂ ಜಗತ್ ದೇಸಾಯಿಯ ಚಿತ್ರಗಳನ್ನು ಸಹ ನಟಿ ಅಮಲಾ ಪೌಲ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಎರಡನೇ ಮದುವೆಯಾದ ಹೆಬ್ಬುಲಿ ನಟಿ ಅಮಲಾ ಪೌಲ್
ಅಮಲಾ ಪೌಲ್ 2011ರಲ್ಲಿ ತಮಿಳು ಸಿನಿಮಾ ನಿರ್ದೇಶಕ ಎಎಲ್ ವಿಜಯ್ ಜೊತೆ ಪ್ರೀತಿಯಲ್ಲಿದ್ದರು. ಬಳಿಕ ಈ ಇಬ್ಬರು 2014ರಲ್ಲಿ ವಿವಾಹವಾದರು. ಆದರೆ ವಿಜಯ್ರ ಪೋಷಕರೊಟ್ಟಿಗೆ ಅಮಲಾ ಪೌಲ್ಗೆ ಭಿನ್ನಾಭಿಪ್ರಾಯ ಏರ್ಪಟ್ಟ ಕಾರಣ 2017ರಲ್ಲಿ ಈ ಜೋಡಿ ಬೇರಾಯಿತು. ಇವರಿಗೆ ಮಕ್ಕಳಿರಲಿಲ್ಲ. ಬಳಿಕ ಅಮಲಾ ಹಾಗೂ ಜಗತ್ ದೇಸಾಯಿ ಕೆಲ ಕಾಲ ಪ್ರೀತಿಯಲ್ಲಿದ್ದರು. ಅಂತಿಮವಾಗಿ 2023ರ ನವೆಂಬರ್ ತಿಂಗಳಲ್ಲಿ ಇಬ್ಬರೂ ಕೊಚ್ಚಿಯಲ್ಲಿ ವಿವಾಹವಾದರು.
ಮೂಲತಃ ಕೇರಳದವರಾದ ಅಮಲಾ ಪೌಲ್, ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅಮಲಾ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸುದೀಪ್ ನಟಿಸಿದ್ದ ‘ಹೆಬ್ಬುಲಿ’ ಸಿನಿಮಾಕ್ಕೆ ಇವರೇ ನಾಯಕಿ. ಹಲವು ವೆಬ್ ಸರಣಿಗಳಲ್ಲಿಯೂ ಸಹ ಅಮಲಾ ಪೌಲ್ ಇತ್ತೀಚೆಗೆ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:21 pm, Wed, 3 January 24