ಅಯೋಧ್ಯೆಯಲ್ಲಿ ಅಮಿತಾಬ್ ಬಚ್ಚನ್ ಸೇವೆ, ತಂದೆಯ ಹೆಸರಲ್ಲಿ ಮಹತ್ಕಾರ್ಯ

ಅಯೋಧ್ಯೆ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ಅಪಾರ ಸಂತಸವನ್ನು ಹಂಚಿಕೊಂಡಿದ್ದ ಅಮಿತಾಬ್ ಬಚ್ಚನ್, ಇದೀಗ ಅಯೋಧ್ಯೆಯಲ್ಲಿ ಮಹತ್ಕಾರ್ಯವೊಂದನ್ನು ಮಾಡಲು ಮುಂದಾಗಿದ್ದಾರೆ. ಸೇವಾ ಕಾರ್ಯವೊಂದಕ್ಕೆ ಅಮಿತಾಬ್ ಬಚ್ಚನ್ ಕೈ ಹಾಕಿದ್ದು, ತಂದೆಯ ಹೆಸರಿನಲ್ಲಿ ಕಾರ್ಯವೊಂದನ್ನು ಅಮಿತಾಬ್ ಅವರು ಕೈಗೆತ್ತಿಕೊಂಡಿದ್ದಾರೆ. ಏನದು ಮಹತ್ ಕಾರ್ಯ? ಇಲ್ಲಿದೆ ಮಾಹಿತಿ....

ಅಯೋಧ್ಯೆಯಲ್ಲಿ ಅಮಿತಾಬ್ ಬಚ್ಚನ್ ಸೇವೆ, ತಂದೆಯ ಹೆಸರಲ್ಲಿ ಮಹತ್ಕಾರ್ಯ
Amitabh Bachchan

Updated on: Sep 18, 2026 | 3:25 PM

ಮುಖ್ಯಾಂಶಗಳು

  • ಅಮಿತಾಬ್ ಬಚ್ಚನ್ ಅವರಿಂದ ಸಮಾಜ ಸೇವೆ
  • ರಾಮ ಭಕ್ತರಿಗಾಗಿ ಧರ್ಮಶಾಲೆ ಪ್ರಾರಂಭಿಸಲಿರುವ ಬಚ್ಚನ್
  • ತಂದೆಯ ಹೆಸರಲ್ಲಿ ಮಹತ್ಕಾರ್ಯಕ್ಕೆ ಕೈ ಹಾಕಿದ ಬಚ್ಚನ್

ಅಮಿತಾಬ್ ಬಚ್ಚನ್, ಭಾರತೀಯ ಚಿತ್ರರಂಗದ ದಿಗ್ಗಜ ನಟ. ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ. ಜೊತೆಗೆ ಅಪಾರ ದೈವ ಭಕ್ತರೂ ಸಹ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ಅಪಾರ ಸಂತಸವನ್ನು ಹಂಚಿಕೊಂಡಿದ್ದ ಅಮಿತಾಬ್ ಬಚ್ಚನ್, ಇದೀಗ ಅಯೋಧ್ಯೆಯಲ್ಲಿ ಮಹತ್ಕಾರ್ಯವೊಂದನ್ನು ಮಾಡಲು ಮುಂದಾಗಿದ್ದಾರೆ. ಸೇವಾ ಕಾರ್ಯವೊಂದಕ್ಕೆ ಅಮಿತಾಬ್ ಬಚ್ಚನ್ ಕೈ ಹಾಕಿದ್ದು, ತಂದೆಯ ಹೆಸರಿನಲ್ಲಿ ಕಾರ್ಯವೊಂದನ್ನು ಅಮಿತಾಬ್ ಅವರು ಕೈಗೆತ್ತಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಜಮೀನು ತೆಗೆದುಕೊಂಡಿದ್ದು ಕೆಲ ತಿಂಗಳುಗಳ ಹಿಂದೆ ಸಾಕಷ್ಟು ಸುದ್ದಿ ಆಗಿತ್ತು. ಅಮಿತಾಬ್ ಬಚ್ಚನ್ ಮಾತ್ರವೇ ಅಲ್ಲದೆ ಬಾಲಿವುಡ್​​ನ ಹಲವು ಸೆಲೆಬ್ರಿಟಿಗಳು ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದೀಗ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಜನಪರವಾದ, ವಿಶೇಷವಾಗಿ ರಾಮಭಕ್ತರಿಗೆ ಅನುಕೂಲ ಆಗುವಂತೆ ಕಾರ್ಯವೊಂದನ್ನು ಮಾಡಲು ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ಬಚ್ಚನ್ ಅವರು ಧರ್ಮಶಾಲೆಯೊಂದನ್ನು ನಿರ್ಮಿಸುತ್ತಿದ್ದಾರೆ.

ತಮ್ಮ ತಂದೆಯವರಾದ ಕವಿ ಹರಿವಂಶರಾಯ್ ಬಚ್ಚನ್ ಅವರ ಸ್ಮರಣಾರ್ಥ ಅಯೋಧ್ಯೆಯಲ್ಲಿ ಧರ್ಮಶಾಲೆಯನ್ನು ಅಮಿತಾಬ್ ಬಚ್ಚನ್ ನಿರ್ಮಿಸಲಿದ್ದಾರೆ. ಪ್ರಸ್ತಾವಿತ ಕಟ್ಟಡದ ವಿನ್ಯಾಸಕ್ಕೆ ಅನುಮೋದನೆ ಕೋರಿ ಈಗಾಗಲೇ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕೊಡನೆ ಧರ್ಮಶಾಲೆ ನಿರ್ಮಾಣ ಪ್ರಾರಂಭ ಆಗಲಿದೆ.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾದಿಂದ ನಿಂತೇ ಹೋಯ್ತು ಅಮಿತಾಬ್ ಬಚ್ಚನ್ ಸಿನಿಮಾ

ಈ ಪ್ರಸ್ತಾವಿತ ಧರ್ಮಶಾಲೆಯು 20ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರಲಿದ್ದು, ದಶರಥ ಪಥದ ಉದ್ದಕ್ಕೂ ಇರುವ ‘ದಿ ಸರಾಯು’ ಯೋಜನೆಯ ಭಾಗವಾಗಿ ಅಮಿತಾಬ್ ಬಚ್ಚನ್ ಅವರು ಸುಮಾರು 15 ಕೋಟಿ ರೂ.ಗಳಿಗೆ ಖರೀದಿಸಿದ ಜಾಗದಲ್ಲಿ ಈ ಧರ್ಮಶಾಲೆಯನ್ನು ನಿರ್ಮಾಣ ಮಾಡುವ ಕುರಿತಾಗಿ ಯೋಜನೆ ಸಿದ್ಧವಾಗುತ್ತಿದೆ. ಅನುಮೋದನೆಗೆ ಸಲ್ಲಿಸಿರುವ ನಕ್ಷೆಯ ಬಗ್ಗೆ ಆಕ್ಷೇಪಣೆಗಳಿದ್ದರೆ 15 ದಿನಗಳೊಳಗೆ ಸಲ್ಲಿಸುವಂತೆ ಕೋರಿ ಎಡಿಎ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಪ್ರಾಧಿಕಾರವು ಅನುಮೋದನೆ ನೀಡುವ ನಿರೀಕ್ಷೆಯಿದೆ.

ದೇಶದ ವಿವಿಧ ಭಾಗಗಳ ಅನೇಕ ಗಣ್ಯರು ಅಯೋಧ್ಯೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಎಡಿಎ ಉಪಾಧ್ಯಕ್ಷ ಅನುರಾಗ್ ಜೈನ್ ತಿಳಿಸಿದ್ದಾರೆ. 20ಕ್ಕೂ ಹೆಚ್ಚು ಕೊಠಡಿಗಳ ಧರ್ಮಶಾಲೆಗಾಗಿ ಬಚ್ಚನ್ ಅವರ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಪ್ರಸ್ತುತ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಮುಕ್ತವಾಗಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ, ಸರಿಯಾದ ಪ್ರಕ್ರಿಯೆಯ ನಂತರ ನಕ್ಷೆಗೆ ಅನುಮೋದನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Fri, 18 September 26

Loading...
Unable to load recommendations.
Follow Us