‘ಕಲ್ಕಿ 2898 ಎಡಿ’ ಶೂಟ್ಗೆ ರೆಡಿ ಆದ ಬಾಲಿವುಡ್ ನಟ ಅಮಿತಾಭ್ ಬಚ್ಚನ್
Amitabh Bachchan: ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಅವರು ಈಗಲೂ ಸಹ ಬಲು ಬೇಡಿಕೆಯ ಸ್ಟಾರ್ ನಟ. ಬಚ್ಚನ್ ನಟಿಸಿದ್ದ ‘ಕಲ್ಕಿ 2898 ಎಡಿ’ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಪ್ರಭಾಸ್ ಜೊತೆ ನಟಿಸಿದ್ದ ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣಕ್ಕೆ ತಯಾರಿ ಆರಂಭವಾಗಿದೆ. ಬಚ್ಚನ್ ಅವರು ಸಹ ಚಿತ್ರೀಕರಣಕ್ಕೆ ರೆಡಿಯಾಗುತ್ತಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾ ಈ ಮೊದಲು ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಇಷ್ಟು ಸಮಯ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಅವರು ಎರಡನೇ ಭಾಗದ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿ ಇದ್ದರು. ಈಗ ಅವರು ಶೂಟ್ಗೆ ಮುಹೂರ್ತ ಇಟ್ಟಿದ್ದಾರೆ ಎಂದು ವರದಿ ಆಗಿದೆ. ಮೇ ಮಧ್ಯದ ವೇಳೆ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ಗೆ ಶೂಟಿಂಗ್ ಆರಂಭ ಆಗಲಿದೆಯಂತೆ. ಈ ಬಗ್ಗೆ ಸಾಕಷ್ಟು ವರದಿಗಳು ಆಗಿವೆ.
ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್ಪತಿ’ ಎಪಿಸೋಡ್ನ ನಡೆಸಿಕೊಟ್ಟಿದ್ದಾರೆ. ಈಗ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ಅವರಿಗೆ ಸಾಕಷ್ಟು ವಯಸ್ಸಾಗಿರುವುದರಿಂದ ಒಂದೇ ಕೆಲಸದ ಮೇಲೆ ಮಾತ್ರ ಗಮನ ಹರಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಕೆಬಿಸಿ ಪೂರ್ಣಗೊಳಿಸಿದ ಬಳಿಕ ಅವರು ಚಿತ್ರದ ಎರಡನೇ ಭಾಗದಲ್ಲಿ ತೊಡಗಿಕೊಂಡಿದ್ದಾರೆ.
‘ಮೇ ತಿಂಗಳಲ್ಲಿ ಸಿನಿಮಾದ ಶೂಟ್ ಆರಂಭ ಆಗಲಿದೆ. ಈ ಬಾರಿ ಅವರಿಗೆ ಹೆಚ್ಚಿನ ಸ್ಕ್ರೀನ್ಸ್ಪೇಸ್ ಸಿಗಲಿದೆ. ಜೂನ್ 15ರವರೆಗೆ ಶೂಟ್ ಇರಲಿದೆ’ ಎಂದು ಮೂಲಗಳು ಹೇಳಿರುವುದಾಗಿ ವರದಿ ಆಗಿದೆ. ಅಮಿತಾಭ್ ಬಚ್ಚನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಹಾಭಾರತದ ‘ಅಶ್ವತ್ಥಾಮ’ನ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಸೀಕ್ವೆಲ್ನಲ್ಲಿ ಅವರು ಇದೇ ಪಾತ್ರದಲ್ಲಿ ಮುಂದುವರಯಲಿದೆ. ಅವರು ಈ ಬಾರಿ ಮತ್ತಷ್ಟು ಆ್ಯಕ್ಷನ್ ಮಾಡಲಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಜೊತೆಗಿನ ನಾಲ್ಕನೇ ಸಿನಿಮಾಕ್ಕೆ ಅಡ್ವಾನ್ಸ್ ಕೊಟ್ಟ ಹೊಂಬಾಳೆ, ನಿರ್ದೇಶಕ ಯಾರು?
ಸುಮತಿ (ದೀಪಿಕಾ ಪಡುಕೋಣೆ) ಅಪರಹಣವಾಗಿದೆ. ಆಕೆಯನ್ನು ರಕ್ಷಿಸುವ ಕೆಲಸವನ್ನು ಅಶ್ವತ್ಥಾಮ ಹಾಗೂ ಭೈರವ/ಕರ್ಣ (ಪ್ರಭಾಸ್) ಒಟ್ಟಾಗಿ ಮಾಡಲಿದ್ದಾರೆ. ಇದು ಸೀಕ್ವೆಲ್ನಲ್ಲಿ ಹೆಚ್ಚು ಹೈಲೈಟ್ ಆಗಲಿದೆ. ಕಮಲ್ ಹಾಸನ್ ಮಾಡಿರೋ ಕಮಾಂಡರ್ ಯಾಸ್ಕಿನ್ ಪಾತ್ರಕ್ಕೆ ಈಗಾಗಲೇ ಸಾಕಷ್ಟು ಶಕ್ತಿ ಬಂದಿದೆ. ಅವರು ಸೀಕ್ವೆಲ್ನಲ್ಲಿ ಹೆಚ್ಚು ಹೈಲೈಟ್ ಆಗಲಿದ್ದಾರೆ.
ಒಳ್ಳೆಯ ಗಳಿಕೆ
‘ಕಲ್ಕಿ 2898 ಎಡಿ’ ಸಿನಿಮಾ ಗ್ರಾಫಿಕ್ಸ್ಗಳ ಕಾರಣಕ್ಕೆ ಹೆಚ್ಚು ಸದ್ದು ಮಾಡಿತ್ತು. ಈ ಸಿನಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಈ ಚಿತ್ರದ ಸೀಕ್ವೆಲ್ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ