ಅಶ್ಲೀಲ ಸಿನಿಮಾದಲ್ಲಿ ನಟಿಸಿದ ಆರೋಪ ಹೊತ್ತರೂ ಚುನಾವಣೆಯಲ್ಲಿ ಗೆದ್ದ ನಟಿ ಶ್ವೇತಾ ಮೆನನ್

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಚುನಾವಣೆಯಲ್ಲಿ ಶ್ವೇತಾ ಮೆನನ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಕುಕ್ಕು ಪರಮೇಶ್ವರನ್ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇದು AMMA ಇತಿಹಾಸದಲ್ಲಿ ಮಹಿಳೆಯರು ಮುಖ್ಯ ಹುದ್ದೆಗಳನ್ನು ಪಡೆದಿದ್ದು ಮೊದಲ ಬಾರಿ. ಮಹಿಳೆಯರ ವಿರುದ್ಧದ ಕಿರುಕುಳದ ಆರೋಪಗಳ ನಂತರ ಈ ಚುನಾವಣೆ ಹೆಚ್ಚಿನ ಮಹತ್ವ ಪಡೆದಿತ್ತು.

ಅಶ್ಲೀಲ ಸಿನಿಮಾದಲ್ಲಿ ನಟಿಸಿದ ಆರೋಪ ಹೊತ್ತರೂ ಚುನಾವಣೆಯಲ್ಲಿ ಗೆದ್ದ ನಟಿ ಶ್ವೇತಾ ಮೆನನ್
ಶ್ವೇತಾ

Updated on: Aug 16, 2025 | 10:54 AM

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಸ್ಥಾಪನೆಯಾದಾಗಿನಿಂದ ಇದೇ ಮೊದಲ ಬಾರಿಗೆ ಇದರ ಚುಕ್ಕಾಣಿ ಮಹಿಳೆಯರ ಪಾಲಾಗಿದ್ದು, ಇತಿಹಾಸ ನಿರ್ಮಾಣ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ, ಅನೇಕರಿಗೆ ಕಿರುಕುಳ ಆಗಿದೆ ಎಂಬ ಆರೋಪ ಹೆಚ್ಚಿದ ಬೆನ್ನಲ್ಲೇ ಈ ರೀತಿಯ ಮಹತ್ವದ ಬೆಳವಣಿಗೆ ನಡೆದಿದೆ ಅನ್ನೋದು ವಿಶೇಷ. ಶ್ವೇತಾ ಮೆನನ್ ಅವರು ಅಧ್ಯಕ್ಷರಾಗಿ ಹಾಗೂ ಕುಕ್ಕು ಪರಮೇಶ್ವರನ್ ಅವರು ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಶ್ವೇತಾ ಮೆನನ್ (Shwetha Menon) ವಿರುದ್ಧ ಇತ್ತೀಚೆಗೆ ಅಶ್ಲೀಲ ಸಿನಿಮಾದಲ್ಲಿ ನಟಿಸಿದ ಆರೋಪ ಕೇಳಿ ಬಂದಿತ್ತು.

ಆಗಸ್ಟ್ 15ರಂದು ‘ಅಮ್ಮ’ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಶ್ವೇತಾ ವಿರುದ್ಧ ದೇವನ್ ಹಾಗೂ ಕುಕ್ಕು ಪರಮೇಶ್ವರನ್ ವಿರುದ್ಧ ರವೀಂದ್ರನ್ ಸ್ಪರ್ಧೆ ಮಾಡಿದ್ದರು. ಆದರೆ, ಹೀರೋಗಳಿಗೆ ಸೋಲಾಗಿದೆ. ಈ ಸಂಘ ರಚನೆಗೊಂಡು ಮೂರು 30 ವರ್ಷಗಳ ಮೇಲಾಗಿದೆ. ಆದರೆ, ಈವರೆಗೆ ನಟಿಯರು ಇದಕ್ಕೆ ಆಯ್ಕೆ ಆಗಿರಲಿಲ್ಲ ಅನ್ನೋದು ವಿಶೇಷ.

2024ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಆಯಿತು. ಮಲಯಾಳಂ ಸಿನಿಮಾದಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆ ಎದರಿಸುತ್ತಿದ್ದಾರೆ ಎಂದು ಹೇಮಾ ಸಮಿತಿಯು ವರದಿ ನೀಡಿತು. ಇದರ ಬೆನ್ನಲ್ಲೇ ಮೋಹನ್​ ಲಾಲ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ಈ ಸ್ಥಾನಗಳು ಖಾಲಿ ಉಳಿದುಕೊಂಡಿದ್ದವು.

ಇದನ್ನೂ ಓದಿ
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ
ಸೈಫ್ ಅಲಿ ಖಾನ್ ಜನ್ಮದಿನ; ನಟನ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ
ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್
‘ಕೂಲಿ’, ‘ವಾರ್ 2’ 2ನೇ ದಿನದ ಗಳಿಕೆ ಇಷ್ಟೊಂದಾ? ಅಬ್ಬಬ್ಬಾ ಊಹಿಸಲೂ ಅಸಾಧ್ಯ

ಮೋಹನ್​ಲಾಲ್, ಮಮ್ಮೂಟಿ ಸೇರಿದಂತೆ ಮಲಯಾಳಂನ ಅನೇಕ ಹಿರಿಯ ನಟರು ಈ ಸಂಘದಲ್ಲಿ ಮಹಿಳೆಯರು ಇದ್ದರೆ ಉತ್ತಮ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.  ಆರಂಭದಲ್ಲಿ ಹಿರಿಯ ನಟ ಜಗದೀಶ್ ಅವರು ಸ್ಪರ್ಧೆಗೆ ಇಳಿದಿದ್ದರು. ಆದರೆ, ನಂತರ ತಮ್ಮ ನಾಮಿನೇಷನ್ ಹಿಂಪಡೆದರು ಮಹಿಳಾ ಸ್ಪರ್ಧಿಗಳಿಗೆ ಬೆಂಬಲ ನೀಡಿದರು.

ಇದನ್ನೂ ಓದಿ: 51ನೇ ವಯಸ್ಸಲ್ಲಿ ಅಶ್ಲೀಲ ಕಂಟೆಂಟ್​ನಲ್ಲಿ ನಟನೆ; ನಟಿಯ ವಿರುದ್ಧ್ ಕೇಸ್

ಶ್ವೇತಾ ಮೆನನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಅವರು ಅಶ್ಲೀಲ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಮಾಡಬೇಕು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಯಿತೇ ಎನ್ನುವ ಪ್ರಶ್ನೆ ಮೂಡಿತ್ತು. ಈಗ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.