AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

51ನೇ ವಯಸ್ಸಲ್ಲಿ ಅಶ್ಲೀಲ ಕಂಟೆಂಟ್​ನಲ್ಲಿ ನಟನೆ; ನಟಿಯ ವಿರುದ್ಧ್ ಕೇಸ್

ಬಹುಭಾಷಾ ನಟಿ ಶ್ವೇತಾ ಮೆನನ್ ಅವರ ಮೇಲೆ ಅಶ್ಲೀಲ ಚಿತ್ರಗಳಲ್ಲಿ ನಟಿಸಿದ ಆರೋಪ ಬಂದಿದೆ. ಸಾಮಾಜಿಕ ಹೋರಾಟಗಾರನೊಬ್ಬ ದೂರು ದಾಖಲಿಸಿದ್ದು, ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಆರೋಪದಿಂದ ಅವರ AMMA ಅಧ್ಯಕ್ಷ ಸ್ಥಾನದ ಆಕಾಂಕ್ಷೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

51ನೇ ವಯಸ್ಸಲ್ಲಿ ಅಶ್ಲೀಲ ಕಂಟೆಂಟ್​ನಲ್ಲಿ ನಟನೆ; ನಟಿಯ ವಿರುದ್ಧ್ ಕೇಸ್
ಶ್ವೇತಾ
ರಾಜೇಶ್ ದುಗ್ಗುಮನೆ
|

Updated on: Aug 07, 2025 | 12:59 PM

Share

ಕನ್ನಡ, ಮಲಯಾಳಂ, ಹಿಂದಿ ಮೊದಲಾದ ಭಾಷೆಗಳಲ್ಲಿ ನಟಿಸಿ ಫೇಮಸ್ ಆದ ಶ್ವೇತಾ ಮೆನನ್​ಗೆ ಈಗ ಸಂಕಷ್ಟ ಎದುರಾಗಿದೆ. ಅವರು 51ನೇ ವಯಸ್ಸಿನಲ್ಲಿ ಅಶ್ಲೀಲ ಸಿನಿಮಾಗಳಲ್ಲಿ ನಟಿಸುತ್ತಿರುವ ಆರೋಪ ಬಂದಿದೆ. ಅಲ್ಲದೆ, ಈ ವಿಡಿಯೋಗಳನ್ನು ಅವರು ವಿವಿಧ ವೆಬ್​ಸೈಟ್​ಗಳಿಗೆ ಮಾರಾಟ ಮಾಡಿ ಹಣ ಮಾಡುತ್ತಿರುವುದಾಗಿಯೂ ದೂರಲಾಗಿದೆ. ಈ ವಿಷಯವಾಗಿ ಮಾರ್ಟಿನ್ ಮೆನಶೆರಿ ಹೆಸರಿನ ಸಾಮಾಜಿಕ ಹೋರಾಟಗಾರ ಈ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎರ್ನಾಕುಲಂ ಸಿಜೆಎಂ ಕೋರ್ಟ್​ ಪೊಲೀಸರಿಗೆ ನಿರ್ದೇಶನ ನೀಡಿದೆ.

ಐಟಿ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಶ್ವೇತಾ ಅವರು ಕೆಲವು ಅಶ್ಲೀಲ ಸಿನಿಮಾಗಳ ಭಾಗವಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಕೆಲವು ಕಾಂಡೋಮ್ ಜಾಹೀರಾತಿನಲ್ಲೂ ಶ್ವೇತಾ ನಟಿಸಿದ್ದಾರಂತೆ. ಸಿನಿಮಾ ಹಾಗೂ ಜಾಹೀರಾತಿನಲ್ಲಿ ನಗ್ನತೆ ಇದೆ. ಅಲ್ಲದೆ, ಇದನ್ನು ಅವರು ಆರ್ಥಿಕ ಲಾಭ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಅಭಿಮಾನಿಗಳ ಬಳಿ ಎಷ್ಟು ಸ್ವೀಟ್ ಆಗಿ ನಡೆದುಕೊಳ್ತಾರೆ ನೋಡಿ; ಈ ವಿಡಿಯೋ ಉತ್ತಮ ಸಾಕ್ಷಿ

ಇದನ್ನೂ ಓದಿ
Image
ದಕ್ಷಿಣ ಚಿತ್ರರಂಗಲ್ಲಿ ಹೊಕ್ಕುಳದ ಗೀಳು ಜಾಸ್ತಿ ಎಂದು ಆರೋಪಿಸಿದ ಮಾಳವಿಕಾ
Image
50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು?
Image
ಪತಿಗೆ ಎಂದೂ ಮರೆಯಲಾರದ ಉಡುಗೊರೆ ಕೊಟ್ಟ ಸೋನಲ್; ಭಾವುಕರಾಗಿ ಕೈ ಮುಗಿದ ತರುಣ್
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಶ್ವೇತಾ ಚಂಡೀಗಢದವರು. ಅವರು 1991ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಟಿಯಾಗಿ, ಮಾಡೆಲ್ ಆಗಿ ಹಾಗೂ ಟಿವಿ ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಪರಿಚಿತರಾಗಿದ್ದಾರೆ. ಅವರು ಕನ್ನಡದಲ್ಲಿ ಉಪೇಂದ್ರ ಅಭಿನಯದ ‘ಓಂಕಾರ’ ಚಿತ್ರದ ಭಾಗ ಆಗಿದ್ದರು. ಶ್ವೇತಾ ಅವರು ಕಿರುತೆರೆ ಲೋಕದಲ್ಲೂ ಗಮನ ಸೆಳೆದಿದ್ದಾರೆ. ‘ಬಿಗ್ ಬಾಸ್ ಮಲಯಾಳಂ ಸೀಸನ್ 1’ರಲ್ಲಿ ಸ್ಪರ್ಧಿಸಿದ್ದರು. 2018ರಲ್ಲಿ ಶೋ ಪ್ರಸಾರ ಕಂಡಿತು. ಕೇವಲ ಒಂದು ತಿಂಗಳು ಮಾತ್ರ ಇವರು ದೊಡ್ಮನೆಯಲ್ಲಿ ಇದ್ದರು.

 ನಡೆಯಿತು ಹುನ್ನಾರ?

ಶ್ವೇತಾ ಮೆನನ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರು. ಇವರ ವಿರುದ್ಧ ಕೇಸ್ ದಾಖಲಾದರೆ ನಟಿಯನ್ನು ರೇಸ್​ನಿಂದ ಹೊರಗೆ ಇಡಬಹುದು ಎಂದು ಯಾರಾದರೂ ಸಂಚು ರೂಪಿಸಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶ್ವೇತಾ ಮೆನನ್ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ