ಈ ವಿಷಯದ ಬಗ್ಗೆ ಸಿನಿಮಾ ಮಾಡಿ: ರಾಜಮೌಳಿ ಮುಂದೆ ಬೇಡಿಕೆ ಇಟ್ಟ ಆನಂದ್ ಮಹಿಂದ್ರಾ

Anand Mahindra: ಮಹಿಂದ್ರಾ ಸಂಸ್ಥೆಯ ಚೇರ್​ಮೆನ್ ಆನಂದ್ ಮಹಿಂದ್ರಾ, ಟ್ವಿಟ್ಟರ್​ನಲ್ಲಿ ರಾಜಮೌಳಿ ಅವರಿಗೆ ವಿಷಯವೊಂದನ್ನು ಸೂಚಿಸಿ ಆ ಬಗ್ಗೆ ಸಿನಿಮಾ ಮಾಡಿರೆಂದು ಒತ್ತಾಯಿಸಿದ್ದಾರೆ.

ಈ ವಿಷಯದ ಬಗ್ಗೆ ಸಿನಿಮಾ ಮಾಡಿ: ರಾಜಮೌಳಿ ಮುಂದೆ ಬೇಡಿಕೆ ಇಟ್ಟ ಆನಂದ್ ಮಹಿಂದ್ರಾ
ಎಸ್​ಎಸ್ ರಾಜಮೌಳಿ
Follow us
ಮಂಜುನಾಥ ಸಿ.
|

Updated on: Apr 30, 2023 | 5:43 PM

ಆನಂದ್ ಮಹೀಂದ್ರಾ (Anand Mahindra), ಮಹಿಂದ್ರಾ ಸಂಸ್ಥೆಯ ಚೇರ್​ಮೆನ್ (Mahindra Group). ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಆನಂದ್ ಮಹಿಂದ್ರಾ, ಸಿನಿಮಾ ಪ್ರೇಮಿಯೂ ಹೌದು. ಖ್ಯಾತ ಸಿನಿಮಾ ನಿರ್ದೇಶಕ ರಾಜಮೌಳಿ (SS Rajamouli) ಅವರಿಗೆ ಟ್ವೀಟ್ ಮಾಡಿರುವ ಆನಂದ್ ಮಹಿಂದ್ರಾ, ಐತಿಹಾಸಿಕ ವಿಷಯವೊಂದನ್ನು ಸೂಚಿಸಿ ಈ ಕುರಿತಾಗಿ ಸಿನಿಮಾ ಮಾಡಿರಿ ಎಂದು ಮನವಿ ಮಾಡಿದ್ದಾರೆ.

ಸಿಂಧು ನಾಗರಿಕತೆಯ ಭಾಗವಾಗಿರುವ ಹರಪ್ಪ, ಮೆಹಂಜೊದಾರೊ, ಧೊಲವಿರಾ, ಲೋತಲ್, ಕಲಿಬಂಗನ್, ಬಾನಾವಲ ಇನ್ನಿತರೆ ನಾಗರೀಕತೆಗಳ ಸಾಂದರ್ಭಿಕ ಚಿತ್ರಗಳ ಸರಣಿ ಟ್ವೀಟ್​ಗಳನ್ನು ಹಂಚಿಕೊಂಡಿರುವ ಆನಂದ್ ಮಹಿಂದ್ರಾ, ಇವು ಇತಿಹಾಸವನ್ನು ಜೀವಂತಗೊಳಿಸುವ ಮತ್ತು ನಮ್ಮ ಕಲ್ಪನೆಯನ್ನು ಪ್ರಚೋದಿಸುವ ಅದ್ಭುತ ಚಿತ್ರಗಳಾಗಿವೆ. ಆ ಪುರಾತನ ನಾಗರಿಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ. ಆ ಅದ್ಭುತ ಯುಗ ಆಗಿನ ಜನ ಜೀವನದ ಆಧಾರಿಸಿದ ಸಿನಿಮಾ ಮಾಡುವ ಯೋಜನೆಯನ್ನು ಪರಿಗಣಿಸಲು ರಾಜಮೌಳಿ ಅವರಲ್ಲಿ ಮನವಿ ಎಂದು ಟ್ವೀಟ್ ಮಾಡಿದ್ದಾರೆ.

ಸಿಂಧು ನಾಗರಿಕತೆಯ ಕುರಿತಾದ ಕೆಲವು ಬೆರಳೆಣಿಕೆಯ ಚಿತ್ರಗಳು ಭಾರತದಲ್ಲಿ ಈಗಾಗಲೇ ನಿರ್ಮಾಣವಾಗಿವೆ ಆದರೆ ಯಾವುವೂ ಸಹ ದೊಡ್ಡ ಪರಿಣಾಮ ಬೀರಿಲ್ಲ. ಹೃತಿಕ್ ರೋಷನ್ ನಟನೆಯ ಮೊಹಂಜೊಧಾರೊ ಅದರಲ್ಲೊಂದು. ಆದರೆ ರಾಜಮೌಳಿ, ಈ ಮಾದರಿಯ ಸಿನಿಮಾಗಳನ್ನು ಮಾಡುವುದರಲ್ಲಿ ನಿಸ್ಸೀಮರು, ಸ್ವತಃ ಅವರೇ ಹೇಳಿಕೊಂಡಿರುವಂತೆ ಭಾರತದ ಐತಿಹಾಸಿಕ ಹಾಗೂ ಪೌರಾಣಿಕ ಕತೆಗಳನ್ನು ತೆರೆಗೆ ತರುವುದರಲ್ಲಿ ಅವರಿಗೆ ಅತೀವ ಆಸಕ್ತಿಯಿದೆ. ಹಾಗಾಗಿ ಆನಂದ್ ಮಹಿಂದ್ರಾ ನೀಡಿರುವ ಸಲಹೆಯನ್ನು ರಾಜಮೌಳಿ ಪರಿಗಣಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇನ್ನು ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಜೊತೆಗೆ ಸಿನಿಮಾ ಒಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾವು ಇಂಡಿಯಾನಾ ಜೋನ್ಸ್ ಮಾದರಿಯ ಪ್ರವಾಸಿ ಸಾಹಸಮಯ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾದ ಬಹುತೇಕ ಕತೆ ಕಾಡುಗಳಲ್ಲಿ ನಡೆಯುವ ಸಾಹಸಗಳನ್ನು ಒಳಗೊಂಡಿರಲಿದೆ. ಅಮೆಜಾನ್ ಕಾಡು ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಿರುವುದಾಗಿ ರಾಜಮೌಳಿ ಹೇಳಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣಕ್ಕೆ ಬೇಕಾದ ತಯಾರಿಯನ್ನು ಈಗಾಗಲೇ ಆರಂಭಿಸಿದ್ದು, ಅದಕ್ಕಾಗಿ ಹಾಲಿವುಡ್​ನ ಕೆಲವು ಟಾಪ್ ಸ್ಟುಡಿಯೋಗಳೊಟ್ಟಿಗೆ, ತಂತ್ರಜ್ಞರೊಟ್ಟಿಗೆ ಮಾತುಕತೆ ಸಹ ಮುಗಿಸಿದ್ದಾರೆ.

ಇನ್ನು ಆನಂದ್ ಮಹಿಂದ್ರಾ ಸಿನಿಮಾ ಪ್ರೇಮಿ ಮಾತ್ರವೇ ಅಲ್ಲದೆ ಸ್ವತಃ ಸಿನಿಮಾ ನಿರ್ದೇಶನಾಗುವ ಕನಸು ಹೊಂದಿದ್ದವರು. ಆರಂಭದಲ್ಲಿ ಕೆಲವು ಡಾಕ್ಯುಮೆಂಟರಿಗಳನ್ನು ಸಹ ಆನಂದ್ ಮಹಿಂದ್ರಾ ಚಿತ್ರೀಕರಣ ಮಾಡಿದ್ದರು. ಆದರೆ ನಿರ್ದೇಶಕನಾಗಲು ಸಾಧ್ಯವಾಗದೆ ಬ್ಯುಸಿನೆಸ್​ಮ್ಯಾನ್ ಆದರು. ಆದರೆ ಇತ್ತೀಚೆಗೆ ಸಿನೆಸ್ತಾನ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಹೂಡಿಕೆ ಮಾಡಿ, ಸಿನಿಮಾ ನಿರ್ಮಾಪಕರೂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ