ಹೀನಾಯವಾಗಿ ಟ್ರೋಲ್ ಆದ ಏಜೆಂಟ್ ಸಿನಿಮಾ, ಮಗನ ಬೆಂಬಲಕ್ಕೆ ನಿಂತ ನಟಿ ಅಮಲಾ

Amala Akkineni: ಅಖಿಲ್ ಅಕ್ಕಿನೇನಿಯ ಹೊಸ ಸಿನಿಮಾ ಏಜೆಂಟ್ ತೀವ್ರ ಟ್ರೋಲಿಂಗ್​​ಗೆ ಗುರಿಯಾಗುತ್ತಿರುವ ಬೆನ್ನಲ್ಲೆ ಮಗನ ಬೆಂಬಲಕ್ಕೆ ಬಂದಿರುವ ನಟಿ ಅಮಲಾ, ತೆರೆದ ಮನಸ್ಸಿನಿಂದ ಸಿನಿಮಾ ನೋಡಿದರೆ ಸಿನಿಮಾ ಇಷ್ಟವಾಗುತ್ತದೆ ಎಂದಿದ್ದಾರೆ, ಮಾತ್ರವಲ್ಲ ಟ್ರೋಲ್ ಮಾಡುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೀನಾಯವಾಗಿ ಟ್ರೋಲ್ ಆದ ಏಜೆಂಟ್ ಸಿನಿಮಾ, ಮಗನ ಬೆಂಬಲಕ್ಕೆ ನಿಂತ ನಟಿ ಅಮಲಾ
ಏಜೆಂಟ್
Follow us
ಮಂಜುನಾಥ ಸಿ.
|

Updated on: Apr 30, 2023 | 3:48 PM

ನಟ ನಾಗಾರ್ಜುನ ಅಕ್ಕಿನೇನಿ (Akkineni Nagarjuna) ಹಾಗೂ ನಟಿ ಅಮಲಾ (Amala) ಅವರ ಪುತ್ರ ಅಖಿಲ್ ಅಕ್ಕಿನೇನಿಯ (Akhil Akkineni) ಹೊಸ ಸಿನಿಮಾ ಏಜೆಂಟ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದವರು ತೀರ ಕೆಟ್ಟದಾಗಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯಂತೂ ಸಿನಿಮಾವನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಲಾಗುತ್ತಿದೆ. ಸಿನಿಮಾದ ಕತೆಯಲ್ಲಿ ಲಾಜಿಕ್ ಇಲ್ಲದೆ ಕೇವಲ ಆಕ್ಷನ್​ಗಷ್ಟೆ ಮಹತ್ವ ನೀಡಿರುವುದರಿಂದ ತೀವ್ರವಾಗಿ ಸಿನಿಮಾ ಟ್ರೋಲ್ ಆಗುತ್ತಿದೆ. ಆದರೆ ಇದೀಗ ಅಖಿಲ್​ರ ತಾಯಿ ಅಮಲಾ, ಮಗನ ಬೆಂಬಲಕ್ಕೆ ನಿಂತಿದ್ದು, ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ನಟಿ ಅಮಲಾ, ”ಅಭದ್ರತೆ ಅನುಭವಿಸುತ್ತಿರುವವರು ಹಾಗೂ ಏನಾದರೂ ಸಾಧಿಸಲು ವಿಫಲವಾದವರು ಮಾತ್ರವೇ ಟ್ರೋಲ್ ಮಾಡುತ್ತಾರೆ ಎಂಬ ಅರಿವು ನನಗೆ ಇದೆ. ನಾನು ನಿನ್ನೆಯಷ್ಟೆ ಏಜೆಂಟ್ ಸಿನಿಮಾ ನೋಡಿದೆ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಸಿನಿಮಾವನ್ನು ನಾನು ಎಂಜಾಯ್ ಮಾಡಿದೆ. ಯಾವ ಕಲೆಯೂ ಪರಿಪೂರ್ಣವಲ್ಲ, ಅಂತೆಯೇ ಆ ಸಿನಿಮಾದಲ್ಲಿಯೂ ಅದರದ್ದೇ ಆದ ಕೊರತೆಗಳಿವೆ. ಆದರೆ ತೆರೆದ ಮನಸ್ಸಿನಿಂದ ಸಿನಿಮಾ ನೋಡಿದರೆ ಸಿನಿಮಾ ಅದ್ಭುತ ಎನಿಸುತ್ತದೆ” ಎಂದಿದ್ದಾರೆ.

ಮುಂದುವರೆದು, ”ನಾನು ನಿನ್ನೆ ಏಜೆಂಟ್ ಸಿನಿಮಾ ನೋಡಿದ ಚಿತ್ರಮಂದಿರ ತುಂಬಿತ್ತು. ಅದರಲ್ಲಿಯೂ ಅರ್ಧಕ್ಕಿಂತಲೂ ಹೆಚ್ಚು ಜನ ಮಹಿಳೆಯರು. ಅದರಲ್ಲಿಯೂ ವಯಸ್ಕರು, ಅಜ್ಜಿಯರು ತಮ್ಮ ಪತಿಯರೊಟ್ಟಿಗೆ, ಮಕ್ಕಳೊಂದಿಗೆ, ಮೊಮ್ಮಕಳೊಂದಿಗೆ ಬಂದಿದ್ದರು. ಆಕ್ಷನ್ ದೃಶ್ಯಗಳು ಬಂದಾಗ ಕಿರುಚುತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು. ನನಗೆ ಭರವಸೆ ಇದೆ, ಮುಂದಿನದ್ದು ಇದಕ್ಕಿಂತಲೂ ದೊಡ್ಡದಾಗಿ ಹಾಗೂ ಬೆಟರ್ ಆಗಿ ಇರುತ್ತದೆ” ಎಂದಿದ್ದಾರೆ ಅಮಲಾ.

ಅಖಿಲ್ ನಟಿಸಿರುವ ಏಜೆಂಟ್ ಸಿನಿಮಾದ ಕತೆ, ದೃಶ್ಯಗಳು ತೀವ್ರ ಟ್ರೋಲ್​ಗೆ ಗುರಿಯಾಗಿದೆ. ಸಿನಿಮಾದಲ್ಲಿ ನಾಯಕ ಅಖಿಲ್, ರಾ ಏಜೆಂಟ್ ಆಗುವ ಪ್ರಯತ್ನ ಮಾಡಿ ವಿಫಲನಾಗಿರುತ್ತಾನೆ, ಬಡ ಕುಟುಂಬದವನಾದ ಅವನು ಮನೆಯ ಕೆಳಗೆ ಗೋಧಾಮು ಮಾಡಿಕೊಂಡು ಅಲ್ಲಿ ಹೈಕೆಟ್ ಸೆಟಪ್ ಮಾಡಿಕೊಂಡು ಕಂಪ್ಯೂಟರ್ ಹ್ಯಾಕ್ ಮಾಡುತ್ತಿರುತ್ತಾನೆ. ಒಮ್ಮೆ ರಾ ಏಜೆಂಟ್ ಮುಖ್ಯಸ್ಥನನ್ನೇ ಹ್ಯಾಕ್ ಮಾಡುತ್ತಾನೆ ಆಗ ಆ ಮುಖ್ಯಸ್ಥ ಅಖಿಲ್ ಅನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾನೆ. ಸಿನಿಮಾದಲ್ಲಿ ತಲೆ-ಬುಡ ಇಲ್ಲದೆ ತಂತ್ರಜ್ಞಾನ ಬಳಸಲಾಗಿದೆ. ಸಿನಿಮಾದ ಪಾತ್ರಗಳು ವಿನಾ ಕಾರಣ ಎಲ್ಲಿಂದ ಎಲ್ಲಿಗೋ ಪ್ರಯಾಣ ಬೆಳೆಸುತ್ತಿರುತ್ತಾರೆ. ಹೀರೋ ಒಬ್ಬನೇ ನೂರಾರು ಪರಿಣಿತ ಗನ್​ಮ್ಯಾನ್​ಗಳನ್ನು ಸುಟ್ಟು ಬಿಸಾಡುತ್ತಾನೆ, ನಾಯಕನಿಗೆ ಒಂದೂ ಬುಲೆಟ್ ತಾಗುವುದೇ ಇಲ್ಲ ಇಂಥಹಾ ಅನೇಕಾನೇಕ ತಲೆ ತರ್ಕವಿಲ್ಲದ ದೃಶ್ಯಗಳು ಸಿನಿಮಾದಲ್ಲಿ ಇವೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ವಿಮರ್ಶಕರು ಸಹ ಸಿನಿಮಾ ಚೆನ್ನಾಗಿಲ್ಲವೆಂದು ಹೇಳಿದ್ದ್ದಾರೆ.

ಏಜೆಂಟ್ ಸಿನಿಮಾವನ್ನು ಸುರೇಂದ್ರ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಏಕೆ ಎಂಟರ್ಟೈನ್​ಮೆಂಟ್ ಹಾಗೂ ಸುರೇಂದ್ರ 2 ಮೂವೀಸ್. ಸಿನಿಮಾದಲ್ಲಿ ಅಖಿಲ್ ಎದುರು ನಾಯಕಿಯಾಗಿ ಸಾಕ್ಷಿ ವೈದ್ಯ ನಟಿಸಿದ್ದಾರೆ. ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಮಮ್ಮುಟಿ, ಬಾಲಿವುಡ್​ನ ಡಿನೊ ಮರಿಯೋ ಇನ್ನೂ ಹಲವರಿದ್ದಾರೆ.

ಇನ್ನು ಅಖಿಲ್ ತಾಯಿ ಅಮಲಾ ಹಿನ್ನೆಲೆ ನೋಡುವುದಾದರೆ, ಕನ್ನಡದ ಬಣ್ಣದ ಗೆಜ್ಜೆ, ಬೆಳ್ಳಿಯಪ್ಪ ಬಂಗಾರಪ್ಪ ಸೇರಿ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಜೊತೆಗೆ ಪುಷ್ಕಕ ವಿಮಾನ ಸಿನಿಮಾದ ನಾಯಕಿಯೂ ಇವರೇ. ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿರುವ ಅಮಲಾ, ನಾಗಾರ್ಜುನ ಅವರ ಎರಡನೇ ಪತ್ನಿ. ವಿವಾಹವಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ ಅಮಲಾ ಇತ್ತೀಚೆಗೆ ಮತ್ತೆ ನಟನೆಗೆ ಮರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ