AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmi Gautam: ಶೀಘ್ರವೇ ಖ್ಯಾತ ಆ್ಯಂಕರ್ ರಶ್ಮಿ ಗೌತಮ್ ಮದುವೆ? ಅಮೆರಿಕದ ಹುಡುಗ

ಸದ್ಯದಲ್ಲೇ ರಶ್ಮಿ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ರಶ್ಮಿ ಗೌತಮ್ ಮದುವೆ ಅಮೆರಿಕದ ವ್ಯಕ್ತಿಯೊಂದಿಗೆ ನಡೆಯಲಿದೆಯಂತೆ. ಇತ್ತೀಚೆಗಷ್ಟೇ ಇಬ್ಬರು ಕುಟುಂಬಸ್ಥರು ಕೂಡ ಜಾತಕ ತೋರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Rashmi Gautam: ಶೀಘ್ರವೇ ಖ್ಯಾತ ಆ್ಯಂಕರ್ ರಶ್ಮಿ ಗೌತಮ್ ಮದುವೆ? ಅಮೆರಿಕದ ಹುಡುಗ
ರಶ್ಮಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Apr 02, 2024 | 1:07 PM

Share

ಕಿರುತೆರೆಯಲ್ಲಿ ಆ್ಯಂಕರ್ ಆಗಿ ವಿಶೇಷ ಹೆಸರು ಮಾಡಿದ ಚೆಲುವೆ ರಶ್ಮಿ ಗೌತಮ್ (Rashmi Gautam). ಜನಪ್ರಿಯ ಕಾಮಿಡಿ ಶೋ ‘ಜಬರ್ದಸ್ತ್’ (2013) ಮೂಲಕ ರಶ್ಮಿಗೆ ಭಾರೀ ಕ್ರೇಜ್ ಸಿಕ್ಕಿತು. ಅವರು ಅನೇಕ ಟಿವಿ ಶೋಗಳಲ್ಲಿ ಆ್ಯಂಕರ್ ಆಗಿ ಎಲ್ಲರನ್ನೂ ರಂಜಿಸಿದರು. ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ ರಶ್ಮಿ ನಂತರ ನಾಯಕಿಯಾದರು. ಸಿದ್ದು ಜೊನ್ನಲಗಡ್ಡ ಅಭಿನಯದ ‘ಗುಂಟೂರು ಟಾಕೀಸ್’ ಚಿತ್ರದಲ್ಲಿ ರಶ್ಮಿ ನಟಿಸಿ ಫೇಮಸ್ ಆದರು. ಕೆಲವು ಮಹಿಳಾ ಪ್ರಧಾನಿ ಸಿನಿಮಾಗಳ ಮೂಲಕವೂ ಅವರು ಗುರುತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ರಶ್ಮಿ ಗೌತಮ್ ಅವರ ಮದುವೆಯ ಸುದ್ದಿಯೊಂದು ಸದ್ಯ ಸಖತ್ ಸುದ್ದಿ ಆಗುತ್ತಿದೆ.

ಈ ಹಿಂದೆಯೂ ರಶ್ಮಿ ಮದುವೆ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ನಟ ಮತ್ತು ಹಾಸ್ಯನಟ ಸುಡಿಗಾಲಿ ಸುಧೀರ್ ಅವರನ್ನು ರಶ್ಮಿ ಪ್ರೀತಿಸುತ್ತಿದ್ದಾರೆ ಎಂಬ ವರದಿಗಳೂ ಇವೆ. ಶೀಘ್ರದಲ್ಲೇ ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ‘ಜಬರ್ದಸ್ತ್’ ಶೋನಲ್ಲಿ ಇಬ್ಬರೂ ಕ್ಲೋಸ್ ಆಗಿದ್ದರಿಂದ ಅವರ ನಡುವೆ ಏನೋ ಪ್ರೀತಿ ಮೂಡಿದೆ ಎಂಬ ಮಾತುಗಳು ಇವೆ. ಆದರೆ ಕೆಲವರು ಅವೆಲ್ಲವೂ ಸುಳ್ಳು, ಮತ್ತು ಅವರಿಬ್ಬರು ಕೇವಲ ಸ್ನೇಹಿತರು ಎಂದು ಹೇಳಿದ್ದು ಇದೆ. ಇದೀಗ ರಶ್ಮಿ ಮದುವೆ ಬಗ್ಗೆ ಕುತೂಹಲಕಾರಿ ಸುದ್ದಿಯೊಂದು ವೈರಲ್ ಆಗಿದೆ.

ಸದ್ಯದಲ್ಲೇ ರಶ್ಮಿ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ರಶ್ಮಿ ಗೌತಮ್ ಮದುವೆ ಅಮೆರಿಕದ ವ್ಯಕ್ತಿಯೊಂದಿಗೆ ನಡೆಯಲಿದೆಯಂತೆ. ಇತ್ತೀಚೆಗಷ್ಟೇ ಇಬ್ಬರು ಕುಟುಂಬಸ್ಥರು ಕೂಡ ಜಾತಕ ತೋರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಮದುವೆ ಘೋಷಣೆಯೂ ಆಗಲಿದೆಯಂತೆ. ಇದಕ್ಕೆ ರಶ್ಮಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ತೆಲುಗು ವರ್ಷನ್​ನಲ್ಲಿ ರಮ್ಯಾ ಇಲ್ಲ; ‘ಬಾಯ್ಸ್​ ಹಾಸ್ಟೆಲ್​’ನಲ್ಲಿ ರಶ್ಮಿ ಗೌತಮ್​ಗೆ ಚಾನ್ಸ್​

ಕಳೆದ ವರ್ಷ ರಿಲೀಸ್ ಆದ ಕನ್ನಡದ ‘ಹಾಸ್ಟೆಲ್ ಹುಡುಗರು’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಮ್ಯಾ ಅವರು ಅತಿಥಿ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಟೀಚರ್ ಆಗಿ ಅವರು ಗಮನ ಸೆಳೆದಿದ್ದರು. ಈ ಚಿತ್ರದ ತೆಲುಗು ವರ್ಷನ್ ‘ಹಾಸ್ಟೆಲ್ ಬಾಯ್ಸ್​’ನಲ್ಲಿ ರಮ್ಯಾ ಬದಲು ರಶ್ಮಿ ಗೌತಮ್ ನಟಿಸಿದ್ದರು. ಈ ಸಿನಿಮಾ ತೆಲುಗಿನಲ್ಲೂ ಮೆಚ್ಚುಗೆ ಪಡೆದಿತ್ತು. ಇದಾದ ಬಳಿಕ ರಶ್ಮಿ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ