‘ನಿರ್ಮಾಪಕನ ಜೊತೆ ಮಲಗಬೇಕು’ ಎಂದಿದ್ದ: ಕಹಿ ಅನುಭವ ಬಿಚ್ಚಿಟ್ಟ ಸುಶಾಂತ್ ಮಾಜಿ ಗೆಳತಿ

Ankita Lokhande: ಸುಶಾಂತ್ ಸಿಂಗ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಈಗ ಟಿವಿ ಧಾರಾವಾಹಿ, ರಿಯಾಲಿಟಿ ಶೋ ಮತ್ತು ಆಗಾಗ್ಗೆ ಸಿನಿಮಾಗಳಲ್ಲಿ ನಟಿಸುತ್ತಾ ಇರುತ್ತಾರೆ. ಉದ್ಯಮಿ ವಿವೇಕ್ ಜೈನ್ ಅವರನ್ನು 2021 ರಲ್ಲಿ ವಿವಾಹವಾಗಿರುವ ಅಂಕಿತಾ, ಆಗಾಗ್ಗೆ ಪಾಡ್​​ಕಾಸ್ಟ್​​ಗಳು, ಸಂದರ್ಶನಗಳಲ್ಲಿ ಭಾಗಿ ಆಗುತ್ತಿರುತ್ತಾರೆ. ಇದೀಗ ಅಂಕಿತಾ ಲೋಖಂಡೆ ಜನಪ್ರಿಯ ಪಾಡ್​ಕಾಸ್ಟ್ ಒಂದರಲ್ಲಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅದೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮಗೆ ಕಹಿ ಅನುಭವ ಆಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

‘ನಿರ್ಮಾಪಕನ ಜೊತೆ ಮಲಗಬೇಕು’ ಎಂದಿದ್ದ: ಕಹಿ ಅನುಭವ ಬಿಚ್ಚಿಟ್ಟ ಸುಶಾಂತ್ ಮಾಜಿ ಗೆಳತಿ
Ankitha Lokhande Sushant

Updated on: Jun 28, 2026 | 11:11 PM

ಸುಶಾಂತ್ ಸಿಂಗ್ (Sushanth Singh) ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಈಗ ಟಿವಿ ಧಾರಾವಾಹಿ, ರಿಯಾಲಿಟಿ ಶೋ ಮತ್ತು ಆಗಾಗ್ಗೆ ಸಿನಿಮಾಗಳಲ್ಲಿ ನಟಿಸುತ್ತಾ ಇರುತ್ತಾರೆ. ಉದ್ಯಮಿ ವಿವೇಕ್ ಜೈನ್ ಅವರನ್ನು 2021 ರಲ್ಲಿ ವಿವಾಹವಾಗಿರುವ ಅಂಕಿತಾ, ಆಗಾಗ್ಗೆ ಪಾಡ್​​ಕಾಸ್ಟ್​​ಗಳು, ಸಂದರ್ಶನಗಳಲ್ಲಿ ಭಾಗಿ ಆಗುತ್ತಿರುತ್ತಾರೆ. ಇದೀಗ ಅಂಕಿತಾ ಲೋಖಂಡೆ ಜನಪ್ರಿಯ ಪಾಡ್​ಕಾಸ್ಟ್ ಒಂದರಲ್ಲಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅದೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮಗೆ ಕಹಿ ಅನುಭವ ಆಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಅವರೊಟ್ಟಿಗೆ ಬಹು ಸಮಯ ಪ್ರೇಮ ಸಂಬಂಧದಲ್ಲಿದ್ದ ಅಂಕಿತಾ ಲೋಖಂಡೆ, ಪಾಡ್​​ಕಾಸ್ಟ್​ನಲ್ಲಿ ತಾವು ಎದುರಿಸಿದ ಕಹಿ ಅನುಭವದ ಬಗ್ಗೆ ಮಾತನಾಡಿದ್ದು, ‘ನಾನು ಒಂದು ದಕ್ಷಿಣದ ಸಿನಿಮಾಕ್ಕಾಗಿ ಮುಂಬೈನಲ್ಲಿ ಆಡಿಷನ್ ನೀಡಿದ್ದೆ. ಆಗಿನ್ನೂ ನನಗೆ 19 ವರ್ಷ ವಯಸ್ಸು. ಸಿನಿಮಾಗಳಲ್ಲಿ ನಟಿ ಆಗಬೇಕು, ನಾಯಕಿ ಆಗಬೇಕು ಎಂದೆಲ್ಲ ಆಸೆಗಳು ಆಗ ನನಗೆ ಬಹಳ ಇದ್ದವು. ಅದೇ ಕಾರಣಕ್ಕೆ ನಾನು ದಕ್ಷಿಣ ಭಾರತದ ಸಿನಿಮಾಕ್ಕಾಗಿ ಆಡಿಷನ್ ಸಹ ನೀಡಿದ್ದೆ’ ಎಂದಿದ್ದಾರೆ.

ಆದರೆ ಆಡಿಷನ್ ತೆಗೆದುಕೊಂಡ ವ್ಯಕ್ತಿ, ನೀವು ಕಾಂಪ್ರಮೈಸ್ ಮಾಡಿಕೊಳ್ಳಬೇಕು ಎಂದರು. ನನಗೆ ಆಗಲೇ ಆತ ಏನೆಂದು ಕೇಳುತ್ತಿದ್ದಾನೆ ಎಂದು ಅರ್ಥವಾಯ್ತು, ಆದರೆ ಅದು ಆತನ ಬಾಯಿಯಿಂದಲೇ ಬರಲೆಂದು, ನಾನು ನನಗೆ ಆತ ಹೇಳಿದ್ದು ಏನೆಂಬುದು ಗೊತ್ತಿಲ್ಲದಂತೆ ನಟಿಸಿದೆ. ಚೆನ್ನಾಗಿ ನಟಿಸುತ್ತೇನೆ, ಎಲ್ಲರೊಟ್ಟಿಗೆ ಗೆಳೆತನದಿಂದ ಇರುತ್ತೇನೆ ಎಂದೆಲ್ಲ ಹೇಳಿದೆ. ಕೊನೆಗೆ ಆತನೇ, ‘ನಿರ್ಮಾಪಕನ ಜೊತೆ ಮಲಗಬೇಕು‘ ಎಂದು ನೇರವಾಗಿ ಹೇಳಿದ. ಆಗ ನಾನು ಅಲ್ಲಿಂದ ಎದ್ದು ಹೊರನಡೆದೆ’ ಎಂದಿದ್ದಾರೆ.

ಇದನ್ನೂ ಓದಿ:ಯಶ್​​ ಶ್ರಮ, ಪ್ರತಿಭೆಯನ್ನು ಕೊಂಡಾಡಿದ ಬಾಲಿವುಡ್ ನಟಿ

‘ನಿಮ್ಮ ನಿರ್ಮಾಪಕರಿಗೆ ನಟಿ ಬೇಕಾಗಿಲ್ಲ, ಅವರಿಗೆ ಒಬ್ಬ ವ್ಯೇಶ್ಯೆ ಬೇಕಾಗಿದ್ದಾಳೆ. ಆದರೆ ಅದು ನಾನಲ್ಲ’ ಎಂದು ಆತನಿಗೆ ಹೇಳಿದ್ದೆ. ಆ ಘಟನೆಯ ಬಳಿಕ ನನಗೆ ಚಿತ್ರರಂಗದ ಮೇಲೆ ನಂಬಿಕೆ ಹೊರಟು ಹೋಯ್ತು. ನನ್ನ ಬಗ್ಗೆ ನನಗೆ ಕೀಳರಿಮೆ ಉಂಟಾಗಲು ಶುರುವಾಯ್ತು. ಆ ನಂತರ ನನಗೆ ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಕೂಡಲೇ ನಾನು ಒಪ್ಪಿಕೊಂಡು ಬಿಟ್ಟೆ. ಧಾರಾವಾಹಿ, ಟಿವಿ ಲೋಕದಲ್ಲೇ ಮುಂದುವರೆದೆ, ಆರಾಮವಾಗಿ ಇಲ್ಲಿಯವರೆಗೆ ತಲುಪಿದ್ದೇನೆ’ ಎಂದು ಅಂಕಿತಾ ಹೇಳಿದ್ದಾರೆ.

ಅಂಕಿತಾ ಮತ್ತು ಸುಶಾಂತ್ ಸಿಂಗ್ ಒಟ್ಟಿಗೆ ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರು. 2010 ರಲ್ಲಿ ಈ ಇಬ್ಬರೂ ಪ್ರೀತಿಸಲು ಪ್ರಾರಂಭಿಸಿದರು. 2016 ರಲ್ಲಿ ಮದುವೆ ಆಗುವುದಾಗಿಯೂ ಘೋಷಿಸಿದ್ದರು. ಆದರೆ ಅದೇ ವರ್ಷ ಅವರು ಬ್ರೇಕಪ್ ಸಹ ಮಾಡಿಕೊಂಡರು. ಬಳಿಕ 2021 ರಲ್ಲಿ ಅಂಕಿತಾ, ಉದ್ಯಮಿ ವಿಕ್ಕಿ ಜೈನ್ ಅನ್ನು ಮದುವೆಯಾದರು. ಬಳಿಕ ಈ ಇಬ್ಬರೂ ಒಟ್ಟಿಗೆ ಬಿಗ್​​ಬಾಸ್​​ಗೆ ಸಹ ಹೋಗಿದ್ದರು. ಈಗಲೂ ಅಂಕಿತಾ, ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:01 pm, Sun, 28 June 26

Follow Us