ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಅನುಷ್ಕಾ ಶರ್ಮಾ ಎಷ್ಟು ಅಪ್ಸೆಟ್ ಆದ್ರು ನೋಡಿ

|

Updated on: Jun 10, 2024 | 8:58 AM

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಮೈದಾನಕ್ಕೆ ಇಳಿಯುತ್ತಿದ್ದಂತೆ ಬೌಂಡರಿ ಬಾರಿಸಿದರು. ಆ ಬಳಿಕ ಅವರು ಕ್ಯಾಚ್ ಕೊಟ್ಟು ಔಟ್ ಆದರು. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಅನುಷ್ಕಾ ಶರ್ಮಾ ಕೂಡ ಸಾಕಷ್ಟ ಬೇಸರಗೊಂಡರು.

ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಅನುಷ್ಕಾ ಶರ್ಮಾ ಎಷ್ಟು ಅಪ್ಸೆಟ್ ಆದ್ರು ನೋಡಿ
ವಿರಾಟ್-ಅನುಷ್ಕಾ
Follow us on

ನಟಿ ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್ ಕೊಹ್ಲಿ ಸದ್ಯ ಅಮೆರಿಕದಲ್ಲಿದ್ದಾರೆ. ಟೀಂ ಇಂಡಿಯಾ ಪರ ವಿರಾಟ್ ಅವರು ಅಮೆರಿಕದ ನ್ಯೂಯಾರ್ಕ್​ ಸಿಟಿಯಲ್ಲಿ ವಿಶ್ವಕಪ್ ಆಡುತ್ತಿದ್ದಾರೆ. ಪಂದ್ಯಗಳ ವೀಕ್ಷಣೆಗೆ ಅನುಷ್ಕಾ ಕೂಡ ತೆರಳುತ್ತಿದ್ದಾರೆ. ವಿರಾಟ್ ಕೊಹ್ಲಿಯಿಂದ ಅಂದುಕೊಂಡ ರೀತಿಯಲ್ಲಿ ಆಟ ಬರುತ್ತಿಲ್ಲ. ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೂರು ಬಾಲ್​ಗೆ ಕೇವಲ ನಾಲ್ಕು ರನ್​ ಕಲೆ ಹಾಕಿದ್ದಾರೆ. ವಿರಾಟ್ ಬೇಗ ಔಟ್ ಆಗಿದ್ದಕ್ಕೆ ಅನುಷ್ಕಾ ಶರ್ಮಾ ಬೇಸರ ಮಾಡಿಕೊಂಡರು. ಈ ವಿಡಿಯೋ ವೈರಲ್ ಆಗಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಮೈದಾನಕ್ಕೆ ಇಳಿಯುತ್ತಿದ್ದಂತೆ ಬೌಂಡರಿ ಬಾರಿಸಿದರು. ಆ ಬಳಿಕ ಅವರು ಕ್ಯಾಚ್ ಕೊಟ್ಟು ಔಟ್ ಆದರು. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಅನುಷ್ಕಾ ಶರ್ಮಾ ಕೂಡ ಸಾಕಷ್ಟ ಬೇಸರಗೊಂಡರು. ಈ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.


ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡ ಅಂದುಕೊಂಡ ರೀತಿಯಲ್ಲಿ ಸ್ಕೋರ್ ಮಾಡಲು ಸಾಧ್ಯವಾಗಿಲ್ಲ. 19 ಓವರ್​ಗೆ 119 ರನ್​ ಗಳಿಸಿ ಆಲ್​ಔಟ್ ಆಯಿತು. ಅತ್ತ ಪಾಕಿಸ್ತಾನ ಉತ್ತಮ ಆರಂಭವನ್ನೇ ಕಂಡಿತು. ಆದರೆ, ಅಂತಿಮವಾಗಿ 113 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದು ಗೆಲ್ಲಿದೆ.

ಇದನ್ನೂ ಓದಿ:  ವಿರಾಟ್ ಕೊಹ್ಲಿ 741 ರನ್​ಗಳನ್ನು ಮರೆತು ಬಿಡುವುದು ಒಳಿತು..!

ವಿರಾಟ್ ಹಾಗೂ ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ನ್ಯೂಯಾರ್ಕ್​ ಸಿಟಿಯಲ್ಲಿ ಕಾಣಿಸಿಕೊಂಡಿದ್ದರು. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳೋಕೆ ಎಲ್ಲರೂ ಮುಗಿಬಿದ್ದರು. ಇನ್ನು, ಜಿಮ್​ನಲ್ಲೂ ಇಬ್ಬರೂ ಒಟ್ಟಾಗಿ ವರ್ಕೌಟ್ ಮಾಡುತ್ತಿದ್ದಾರೆ. ಅನುಷ್ಕಾಗೆ ವಮಿಕಾ ಜನಿಸಿ ಕೆಲವು ವರ್ಷ ಕಳೆದಿದೆ. ಈಗ ಗಂಡು ಮಗು ಜನಿಸಿದ್ದು ಅಕಾಯ್ ಎಂದು ನಾಮಕರಣ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:57 am, Mon, 10 June 24