ಅಳುತ್ತಿರುವ ವಿಡಿಯೋ ಹಾಕಿದ ನಟಿ ಅನುಸೂಯ, ತರಾಟೆಗೆ ತೆಗೆದುಕೊಂಡ ನೆಟ್ಟಿಗರು

Anusuya: ಟಾಲಿವುಡ್ ಬೋಲ್ಡ್ ನಟಿ ಅನುಸೂಯ ಅಳುತ್ತಿರುವ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅನುಸೂಯಗೆ ಸಿಂಪತಿಗೆ ಬದಲು ನಿಂದನೆ ಧಕ್ಕಿದೆ.

ಅಳುತ್ತಿರುವ ವಿಡಿಯೋ ಹಾಕಿದ ನಟಿ ಅನುಸೂಯ, ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಅನುಸೂಯ
Follow us
ಮಂಜುನಾಥ ಸಿ.
|

Updated on: Aug 19, 2023 | 7:16 PM

ತೆಲುಗು ಚಿತ್ರರಂಗ (Tollywood) ಹಾಗೂ ಟಿವಿ ಲೋಕದಲ್ಲಿ ಜನಪ್ರಿಯ ನಟಿ, ನಿರೂಪಕಿ ಆಗಿರುವ ಅನುಸೂಯ ಭಾರಧ್ವಜ್ (Anusuya Bharadwaj) ಇಂದು (ಆಗಸ್ಟ್ 19) ಇನ್​ಸ್ಟಾಗ್ರಾಂನಲ್ಲಿ (Instagram) ತಮ್ಮ ಅಳುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಮಾರುದ್ದದ ಪೋಸ್ಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ. ಅನುಸೂಯ ಅಳುತ್ತಿರುವುದು ನೋಡಿದ ಕೆಲವು ಅಯ್ಯೋ ಪಾಪ ಎಂದಿದ್ದರೆ, ಹಲವರು ವಿಡಿಯೋ ಹಾಕಿದ್ದಕ್ಕೆ ಟೀಕಿಸಿದ್ದಾರೆ. ಕೊನೆಗೆ ಮತ್ತೊಂದು ವಿಡಿಯೋ ಅಪ್​ಲೋಡ್ ಮಾಡಿ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ ನಟಿ ಅನುಸೂಯ.

ಅಳುತ್ತಿರುವ ವಿಡಿಯೋ ಹಂಚಿಕೊಂಡಿರುವ ಅನುಸೂಯ, ”ನಟ-ನಟಿ, ಯಾವುದೇ ಸೆಲೆಬ್ರಿಟಿ ಯಾರಿಗೇ ಆಗಲಿ ಒಬ್ಬಂಟಿ ಎನಿಸುತ್ತದೆ, ಎಲ್ಲವನ್ನೂ ಕಳೆದುಕೊಂಡ ಅನುಭವ ಆಗುತ್ತದೆ, ಸೋಲುತ್ತಿರುವ ಅನುಭವ ಆಗುತ್ತದೆ. ಎಲ್ಲರೂ ಅಳುತ್ತಾರೆ, ಎಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ. ಎಲ್ಲ ಸಮಯದಲ್ಲಿಯೂ ಎಲ್ಲರೂ ಸ್ಟ್ರಾಂಗ್ ಆಗಿ ಇರುವುದಿಲ್ಲ. ಎಲ್ಲ ಸಮಯದಲ್ಲಿಯೂ ‘ಓಕೆ’ ಆಗಿ ಇಲ್ಲದಿರುವುದು ಸಹ ‘ಓಕೆ’ ಎಂದು ಬರೆದುಕೊಂಡಿದ್ದಾರೆ. ಹಂಚಿಕೊಂಡಿರುವ ಅಳುತ್ತಿರುವ ವಿಡಿಯೋ ಐದು ದಿನಗಳ ಹಿಂದಿನದ್ದು ಎಂದು ಸಹ ಅನುಸೂಯ ಬರೆದುಕೊಂಡಿದ್ದಾರೆ.

ಆದರೆ ವಿಡಿಯೋ ನೋಡಿದ ಹಲವರು ಅನುಸೂಯಾಗೆ ಏನೋ ಆಗಿದೆ ಎಂದುಕೊಂಡಿದ್ದರು. ಇನ್ನು ಕೆಲವರು ಅನುಸೂಯ ಸಿಂಪತಿ ಗಿಟ್ಟಿಸಿಕೊಳ್ಳಲೆಂದು ಹೀಗೆ ಮಾಡುತ್ತಿದ್ದಾರೆ ಎಂದು ದೂರಿದ್ದರು. ಇನ್ನು ಕೆಲವರು ಸಂದೇಶ ಕೊಡಲೆಂದು ಹೀಗೆ ಅಳುತ್ತಿರುವಂತೆ ನಟಿಸಿ ವಿಡಿಯೋ ಹಂಚಿಕೊಂಡಿದ್ದಾರೆ ಎಂದು ಜರಿದಿದ್ದರು. ಒಟ್ಟಾರೆಯಾಗಿ ಅನುಸೂಯಾರ ಅಳುತ್ತಿರುವ ವಿಡಿಯೋಕ್ಕೆ ಬಹುತೇಕ ನೆಗಟಿವ್ ಕಮೆಂಟ್​ಗಳೇ ಬಂದಿದ್ದವು.

ಇದನ್ನೂ ಓದಿ:ಪತಿಯೊಟ್ಟಿಗೆ ಬೀಚ್​ನಲ್ಲಿ ಸುತ್ತಾಡಿದ ಅನುಸೂಯ, ಎಲ್ಲರಿಗೂ ಬಟ್ಟೆಯ ಮೇಲೆ ಕಣ್ಣು

ಅಳುತ್ತಿರುವ ವಿಡಿಯೋ ಅಪ್​ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಮತ್ತೆರಡು ವಿಡಿಯೋ ಅಪ್​ಲೋಡ್ ಮಾಡಿದ ಅನುಸೂಯ, ”ಆ ವಿಡಿಯೋ ಮಾಡಿ ನಾನು ಸಲೂನ್​ಗೆ ಹೋಗಿ ತಯಾರಾದೆ, ನನ್ನ ಪರ್ಸನಲ್ ಕೆಲಸಗಳಲ್ಲಿ ಬ್ಯುಸಿಯಾದೆ. ಆದರೆ ಹಲವರು ಆ ವಿಡಿಯೋ ನೋಡಿ ಏನೇನೋ ಅಂದುಕೊಂಡಿದ್ದಾರೆ. ಆದರೆ ಕೆಲವರು ನನ್ನ ಉದ್ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಅವರದ್ದೇ ಆದ ವೀಕ್ ಸಮಯ ಇರುತ್ತದೆ ಎಂದು ಹೇಳಲಷ್ಟೆ ನಾನು ಆ ವಿಡಿಯೋ ಅಪ್​ಲೋಡ್ ಮಾಡಿದ್ದೆ” ಎಂದಿದ್ದಾರೆ.

”ನನ್ನ ಖಾಸಗಿ ಬದುಕಿಗೆ ಸಂಬಂಧಿಸಿದಂತೆ ಒಂದು ನಿರ್ಣಯವನ್ನು ನಾನು ತೆಗೆದುಕೊಳ್ಳಲೇ ಬೇಕಾಗಿತ್ತು, ಆ ನಿರ್ಣಯ ತೆಗೆದುಕೊಳ್ಳುವಾಗ ನನ್ನ ಮನಸ್ಥಿತಿ ಹೇಗಿತ್ತು, ನಾನು ಹೇಗೆ ವರ್ತಿಸಿದೆ ಎಂದು ನೆನಪುಳಿಯಲಿ ಎಂಬ ಕಾರಣಕ್ಕೆ ಆ ಸಂದರ್ಭವನ್ನು ನಾನು ವಿಡಿಯೋ ಮಾಡಿಕೊಂಡಿದ್ದೆ. ಆದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಹಲವರು ಅದಕ್ಕೆ ಬೇರೆ-ಬೇರೆ ಕತೆಗಳನ್ನು ಕಟ್ಟುತ್ತಿದ್ದಾರೆ. ನಾನು ಸಾಮಾಜಿಕ ಜಾಲತಾಣದ ಋಣಾತ್ಮಕತೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಆಗಾಗ್ಗೆ ಹೀಗೆ ಅತಿಯಾದಾಗ ತುಸು ಬೇಸರವಾಗುತ್ತದೆ” ಎಂದಿದ್ದಾರೆ.

ಅನುಸೂಯಾ ತಮ್ಮ ಬೋಲ್ಡ್ ಪಾತ್ರಗಳಿಂದ ಟಾಲಿವುಡ್​ನಲ್ಲಿ ಜನಪ್ರಿಯರು. ಅವರು ನಡೆಸಿಕೊಡುವ ಹಾಸ್ಯ ಶೋಗೂ ಒಳ್ಳೆಯ ಟಿಆರ್​ಪಿ ಇದೆ. ಇತ್ತೀಚೆಗಷ್ಟೆ ಪತಿಯೊಟ್ಟಿಗೆ ಪ್ರವಾಸ ಮಾಡಿದ್ದ ಅನುಸೂಯ ಬೋಲ್ಡ್ ಫೋಟೊಗಳನ್ನು ಹಂಚಿಕೊಂಡಿದ್ದರು. ಈಗ ಹಠಾತ್ತನೆ ಅಳುವ ವಿಡಿಯೋ ಹಂಚಿಕೊಂಡಿದ್ದು ಕಂಡು ಅಭಿಮಾನಿಗಳಿಗೆ ಆಶ್ಚರ್ಯವಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್